ಭುವನೇಶ್ವರ: ಸೇಡು ತೀರಿಸಿಕೊಳ್ಳಲು ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗಲೇ ಬ್ಲಾಸ್ಟ್ ಆಗಿ, ಇಬ್ಬರು ಸಾವನ್ನಪ್ಪಿರುವ ಘಟನೆ ಓಡಿಸ್ಸಾದ (Odisha) ಭುವನೇಶ್ವರದಲ್ಲಿ (Bhuvaneshwar) ನಡೆದಿದೆ.
ಮೃತರನ್ನು ಶಹನವಾಜ್ ಮಲಿಕ್ (26) ಹಾಗೂ ತಾಯಿ ಲಿಜಾತುನ್ ಬಿಬಿ (51) ಎಂದು ಗುರುತಿಸಲಾಗಿದೆ. ಜ.12ರಂದು ಬಾಂಬ್ ಬ್ಲಾಸ್ಟ್ ಆಗಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿರೋ ಶಹನವಾಜ್ ಮಲಿಕ್ ಅನ್ನೋ ವ್ಯಕ್ತಿ ತನ್ನ ಮನೆಯ ಮೇಲ್ಛಾವಣಿಯ ಮೇಲೆ ಕಚ್ಚಾ ಬಾಂಬ್ ತಯಾರು ಮಾಡುತ್ತಿದ್ದ. ಬಾಂಬ್ ತಯಾರಿಕೆಗೆ ತನ್ನ ತಾಯಿ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ ಹಾಗೂ ಬಾಂಬ್ ತಯಾರಿಕೆಗೆ ಸಹಾಯಕಿಯನ್ನ ಬಳಸಿಕೊಂಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ – 7 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ
A CCTV footage of the powerful explosion that rocked the Sundarpada area of Odisha’s capital on January 27 has surfaced, revealing the scale and intensity of the blast that left four persons critically injured. Two of them later died during treatment.
The footage shows a sudden… pic.twitter.com/vTxccI26rW
— IndiaToday (@IndiaToday) February 16, 2026
ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆ.4ರಂದು ಚಿಕಿತ್ಸೆ ಫಲಿಸದೆ ಶಹನವಾಜ್ ಮಲಿಕ್ ಸಾವನ್ನಪ್ಪಿದ್ದರೆ, ಫೆ.10ರಂದು ತಾಯಿ ಲಿಜಾತುನ್ ಬಿಬಿ ಸಾವನ್ನಪ್ಪಿದ್ದಾರೆ. ಇನ್ನು ಮದುವೆಯಾಗಬೇಕಿದ್ದ ಹುಡುಗಿ ತೃಪ್ತಿಮಯಿ ಹಾಗೂ ಸಹಾಯಕಿ ಅಮಿಯಾ ಮಲಿಕ್ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯ ಈಗ ಲಭ್ಯವಾಗಿದೆ.

