ಚಾಮರಾಜನಗರ: ಇಲ್ಲಿನ ಬಿಳಿಗಿರಿರಂಗನ (Biligiri Rangamna hills) ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಮತ್ತೊಂದು ಹುಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.
ಗುಂಡಾಲ್ ಡ್ಯಾಂನಲ್ಲಿ ತೇಲಾಡುವ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಬೇಟೆ ಅಥವಾ ವಿಷವಿಕ್ಕಿ ಸಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಂದು ಅಭಿಷೇಕ್ ಇಂದು ಇಶಾನ್ ಕಿಶನ್ – ಅಫ್ರಿದಿಗೆ ಬಿಸಿ ಮುಟ್ಟಿಸಿದ ಓಪನರ್ಸ್
ಇತ್ತ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಮಿತಿಮೀರಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಮತ್ತೆ ಮತ್ತೆ ಚಿರತೆ ಪ್ರತ್ಯಕ್ಷ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಇದೀಗ ಮಹದೇಶ್ವರ ವನ್ಯಧಾಮದಲ್ಲಿ ಅಧಿಕಾರಿಗಳು ಬೋನು ಅಳವಡಿಕೆ ಮಾಡಿದ್ದಾರೆ.
ಈ ಹಿಂದೆ ಮಂಡ್ಯ ಮೂಲದ ಪಾದಯಾತ್ರಿಯನ್ನು ಚಿರತೆ ಬಲಿ ಪಡೆದಿತ್ತು,. ಅಲ್ಲದೆ ಚನ್ನಪಟ್ಟಣ ಮೂಲದ ಬಾಲಕನ ಮೇಲೂ ದಾಳಿ ನಡೆಸಿತ್ತು. ಹೀಗಾಗಿ ಪಾದಯಾತ್ರೆ ತೆರಳ್ತಿರೋ ಭಕ್ತರಿಗೆ ತೊಂದರೆ ಆಗದಂತೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರಿನಿಂದ ಚಿರತೆ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕರೆಸಿಕೊಳ್ಳಲಾಗಿದೆ.ಇದನ್ನೂ ಓದಿ: ಕಲಬುರಗಿ ಕೋಟೆಯೊಳಗಡೆ ಶಿವಲಿಂಗ ಪೂಜೆಗೆ ಮುಂದಾಗಿದ್ದ ಹಿಂದೂ ಕಾರ್ಯಕರ್ತರು ಪೊಲೀಸರ ವಶಕ್ಕೆ

