ಕೊಲಂಬೊ: ಕ್ರಿಕೆಟ್ (Cricket) ಲೋಕವೇ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಟಿ20 ವಿಶ್ವಕಪ್‌ನ ರಣ ರೋಚಕ ಪಂದ್ಯ ಭಾರತ vs ಪಾಕಿಸ್ತಾನ (Ind vs Pak) ನಡುವಿನ ಕಾದಾಟಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಪಂದ್ಯ ಶುರುವಾಗಲಿದೆ. ಪಂದ್ಯಕ್ಕೂ ಮುನ್ನವೇ ವಿಶೇಷ ಜವಾಬ್ದಾರಿ ತೆಗೆದುಕೊಂಡ ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ನಮ್ಮ ಆಟಗಾರರು ಮೋಸಹೋಗದಂತೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: T20 World Cup 2026: ಇಂಡೋ-ಪಾಕ್ ಕದನ ಯಾವಾಗಲೂ ಏಕೆ ರಣಕಣ? – ನೆನಪಿದೆಯಾ ಆ ಕರಾಳ ದಿನಗಳು?
Suryakumar Yadav is practicing in the nets by copying Pakistan bowler Usman Tariq’s bowling action. He is bowling to Abhishek Sharma so that the Indian batsmen can get used to that action and hit big sixes against him in the match.💪🔥
Team India all set to go own Pakistan.🙌 pic.twitter.com/ONYCT7VSZK
— 𝐑𝐮𝐬𝐡𝐢𝐢𝐢⁴⁵ (@rushiii_12) February 14, 2026
ಹೌದು. ಪ್ರೇಮದಾಸ ಕ್ರೀಡಾಂಗಣ (R. Premadasa Stadium) ದಲ್ಲಿ ಶನಿವಾರ ಸಂಜೆ ಅಭ್ಯಾಸದ ವೇಳೆ ಸೂರ್ಯ ತಮ್ಮ ಬ್ಯಾಟಿಂಗ್‌ನತ್ತ ಗಮನಹರಿಸಿದ್ದಲ್ಲದೇ, ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆಸಿದ್ದಾರೆ. ಪಾಕ್ ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಖ್ (Usman Tariq) ರೀತಿಯಲ್ಲೇ ಬೌಲಿಂಗ್ ಫೇಸ್ ಮಾಡೋಕೆ ವಿಶಿಷ್ಟ ತಂತ್ರ ಅಳವಡಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ.
ಪಾಕಿಸ್ತಾನ ತಂಡ ಈ ಬಾರಿ ಎರಡೂ ಪಂದ್ಯಗಳನ್ನ ಕೊಲಂಬೊದಲ್ಲಿ ಆಡಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದೆ. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಅದರಲ್ಲೂ ವಿಶಿಷ್ಟ ಬೌಲಿಂಗ್ ಶೈಲಿ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿರುವ ಉಸ್ಮಾನ್ ತಾರೀಖ್, ಭಾರತೀಯರನ್ನ ಇಕ್ಕಟ್ಟಿಗೆ ಸಿಲುಕಿಸಲು ಕಾಯುತ್ತಿದ್ದಾರೆ. ಇದನ್ನೂ ಓದಿ: ಇಂದು ಭಾರತ vs ಪಾಕ್ ಕದನ – ಶತಕೋಟಿ ಭಾರತೀಯರಿಗೆ ಶಿವರಾತ್ರಿ ಗಿಫ್ಟ್ ಕೊಡಲು ಟೀಂ ಇಂಡಿಯಾ ರೆಡಿ

ವಿಚಿತ್ರ ಸ್ಟಾಪ್ ಸ್ಟಾರ್ಟ್ ಬೌಲಿಂಗ್‌ನಿಂದ ಸುದ್ದಿಯಲ್ಲಿರುವ ತಾರಿಖ್ ಅವರ ಆಕ್ಷನ್ ಕಟ್ ಅರ್ಥಮಾಡಿಕೊಳ್ಳಲು ಸೂರ್ಯ ಅವರದ್ದೇ ಶೈಲಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ವಿಚಿತ್ರ ಆಕ್ಷನ್‌ನಿಂದ ಮೋಸಹೋಗದಂತೆ ಸೂರ್ಯ, ಉಸ್ಮಾನ್ ತಾರಿಖ್ ರೀತಿ ಬೌಲಿಂಗ್ ಮಾಡಿದ್ದಾರೆ.
ಈ ವಿಡಿಯೋ ಐಸಿಸಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮಾರ್ಕ್ರಾಮ್ ಸ್ಫೋಟಕ ಬ್ಯಾಟಿಂಗ್, ಜಾನ್ಸೆನ್ ಬೆಂಕಿ ಬೌಲಿಂಗ್‌ಗೆ ನ್ಯೂಜಿಲೆಂಡ್ ತತ್ತರ – ಆಫ್ರಿಕಾಗೆ 7 ವಿಕೆಟ್‌ಗಳ ಜಯ

