ಸಿಯಾಟಲ್: 2023 ರಲ್ಲಿ ಅಮೆರಿಕದ (United States) ಸಿಯಾಟಲ್ ನಗರದಲ್ಲಿ ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ (Accident) ಸಾವಿಗೀಡಾಗಿದ್ದ ಆಂಧ್ರಪ್ರದೇಶ ಮೂಲದ ಯುವತಿ ಜಾಹ್ನವಿ ಕಂದುಲಾ (23) (Jaahnavi Kandula) ಕುಟುಂಬಕ್ಕೆ 260 ಕೋಟಿ ರೂ. ಪರಿಹಾರ ನೀಡುವಂತೆ ಅಲ್ಲಿನ ನ್ಯಾಯಾಲಯ ಆದೇಶಿಸಿದೆ.
ಕ್ರಾಸ್ವಾಕ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಪೊಲೀಸ್ (Police) ಕಾರೊಂದು ಜಾಹ್ನವಿ ಕಂದುಲಾ ಅವರಿಗೆ ಡಿಕ್ಕಿ ಹೊಡೆದಿತ್ತು. ಕಾರಿನ ಡಿಕ್ಕಿ ರಭಸಕ್ಕೆ ಜಾಹ್ನವಿ ಕಂದುಲಾ ಅವರು 137 ಅಡಿ ಎತ್ತರಕ್ಕೆ ಹಾರಿ ರಸ್ತೆಬದಿ ಬಿದ್ದಿದ್ದರು. ವೇಗವಾಗಿ ಕಾರು ಓಡಿಸಕೊಂಡು ಬಂದಿದ್ದ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು ಸೌತ್ ಲೇಕ್ ಯೂನಿಯನ್ ಕ್ರಾಸ್ವಾಕ್ ಬಳಿಯ ವೇಗ ಮೀತಿಯನ್ನು ಮೀರಿದ್ದರು. ಗಂಟೆಗೆ 25 ಮೈಲು ವೇಗವಾಗಿ ಬರಬೇಕಿದ್ದ ಕಾರು, ಗಂಟೆಗೆ 74 ಮೈಲಿ ವೇಗದಲ್ಲಿ ಚಲಿಸುತ್ತಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿತ್ತು. ಇದನ್ನೂ ಓದಿ: ಅಮೆರಿಕ ಈಗ ವಿಶ್ವದ ನಂ.1 ಇಂಧನ ಉತ್ಪಾದಕ ರಾಷ್ಟ್ರ: ಡೊನಾಲ್ಡ್ ಟ್ರಂಪ್
ಅಪಘಾತವಾಗಿ ತೀವ್ರ ಗಾಯಗಳಿಂದ ರಸ್ತೆಯಲ್ಲಿ ನರಳುತ್ತಿದ್ದ ಜಾಹ್ನವಿ ಕಂದುಲಾ ಬಳಿ ನಿಂತಿದ್ದ ಪೊಲೀಸ್ ಅಧಿಕಾರಿಗಳು ಜಾಹ್ನವಿ ಅವರ ನೋವನ್ನು ಅಪಹಾಸ್ಯ ಮಾಡಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜಾಹ್ನವಿ ಅವರ ಕುಟುಂಬ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿತ್ತು.
ಜಾಹ್ನವಿ ಕಂದುಲಾ ಅವರ ಸಾವು ಹೃದಯ ವಿದ್ರಾವಕವಾಗಿತ್ತು. ಈ ಆರ್ಥಿಕ ಪರಿಹಾರವು ಕಂದುಲಾ ಅವರ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ತರುತ್ತದೆ ಎಂದು ಕೋರ್ಟ್ ಆಶಿಸುತ್ತದೆ ಎಂದು ವಕೀಲ ಎರಿಕಾ ಇವಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 2024 ರ ದಂಗೆಯ ಬಳಿಕ ಬಾಂಗ್ಲಾದಲ್ಲಿಂದು ಮೊದಲ ಚುನಾವಣೆ – ಯಾರ ಹೆಗಲಿಗೆ ಪಟ್ಟ?

