ಇಸ್ಲಾಮಾಬಾದ್/ಕೊಲಂಬೊ: ʻಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆʼ ಎನ್ನುವ ಸಾಲಿಗೆ ತಕ್ಕಂತೆ ಪಾಕಿಸ್ತಾನ (Pakistan) ನಡೆದುಕೊಳ್ಳುವುದು ಮತ್ತೊಮ್ಮೆ ಸಾಬೀತಾಗಿದೆ. ಬಾಂಗ್ಲಾ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಿ ಪಂದ್ಯ ಬಹಿಷ್ಕರಿಸುವುದಾಗಿ ಗೊಡ್ಡು ಬೆದರಿಕೆಯೊಡ್ಡಿದ್ದ ಪಾಕಿಸ್ತಾನ ಈಗ ಯೂಟರ್ನ್ ಹೊಡೆದಿದೆ.
ಇದೇ ಫೆಬ್ರವರಿ 15 ರಂದು ನಡೆಯಲಿರುವ ಟಿ20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಒಪ್ಪಿಕೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಆಪತ್ಬಾಂಧವ ಕೆ.ಎಲ್ ರಾಹುಲ್ ಅದ್ಭುತ ಶತಕ – ರಣಜಿ ಸೆಮಿಫೈನಲ್ಗೆ ಕರ್ನಾಟಕ
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರು, ಆಡಳಿತ ಮಂಡಳಿ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಹೊಸ ಬೆಳವಣಿಗೆ ಕಂಡುಬಂದಿದೆ. ಫೆ.15 ರ ಭಾನುವಾರ ಕೊಲಂಬೊದಲ್ಲಿ ಭಾರತದ ವಿರುದ್ಧ ಪಾಕ್ ಕಣಕ್ಕಿಳಿಯೋದು ಪಕ್ಕಾ ಆಗಿದೆ ಎಂದು ಹೇಳಲ್ತಾಗಿದೆ. ಇದಕ್ಕೆ ಪಾಕ್ ಒಪ್ಪಿಕೊಂಡಿದ್ದು, ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ. ಇದನ್ನೂ ಓದಿ: T20 World Cup – ಇಟಲಿ ವಿರುದ್ಧ 73 ರನ್ಗಳ ಭರ್ಜರಿ ಜಯಗಳಿಸಿದ ಸ್ಕಾಟ್ಲೆಂಡ್
ಉನ್ನತ ಮೂಲಗಳ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ, ಯುಎಇ ಕ್ರಿಕೆಟ್ ಮಂಡಳಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ವಿಶೇಷ ವಿನಂತಿ ಮಾಡಿದ ಬಳಿಕ, ಪಾಕಿಸ್ತಾನವು ಭಾರತದ ವಿರುದ್ಧ ಆಡಲು ಒಪ್ಪಿಕೊಂಡಿದೆ. ಪಾಕಿಸ್ತಾನ ಪ್ರಧಾನಿ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರೊಂದಿಗೆ ಸಭೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧೀಕೃತ ನಿರ್ಧಾರ ಹೊರಬೀಳಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: T20 World Cup | ಪಾಕ್ ಬೇಡಿಕೆ ಸಾರಾ ಸಗಟಾಗಿ ತಿರಸ್ಕರಿಸಿದ ಐಸಿಸಿ – ನಿರ್ಧಾರ ತಿಳಿಸಲು ಡೆಡ್ಲೈನ್ ಫಿಕ್ಸ್



