ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ 2026ರ ಟಿ20 ವಿಶ್ವಕಪ್ನ (T20 World Cup 2026) ಮೂರನೇ ದಿನದಾಟದ ಮೊದಲ ಪಂದ್ಯದಲ್ಲಿ ಇಟಲಿ ವಿರುದ್ಧ ಸ್ಕಾಟ್ಲೆಂಡ್ ತಂಡ (Scotland vs Italy) 73 ರನ್‌ಗಳ ಜಯಗಳಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ 20 ಓವರ್ಗಳಲ್ಲಿ ಬರೋಬ್ಬರಿ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಟಲಿ 134 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: T20 World Cup: ಮಿಂಚಿದ ಜಿಂಬಾಬ್ವೆ ಬೌಲರ್ಸ್ – ಒಮನ್ ವಿರುದ್ಧ 8 ವಿಕೆಟ್‌ಗಳ ಜಯ

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಸ್ಕಾಟ್ಲೆಂಡ್ ಉತ್ತಮ ಪ್ರದರ್ಶನ ನೀಡಿತು. ಆರಂಭಿಕರಾದ ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಜೋನ್ಸ್ 14 ಓವರ್ಗಳ ಒಳಗೆ ತಂಡವನ್ನು 126 ರನ್ಗಳಿಗೆ ಕೊಂಡೊಯ್ದರು. ಈ ಹಂತದಲ್ಲಿ ಮುನ್ಸೆ 54 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 84 ರನ್ ಬಾರಿಸಿ ಔಟಾದರು. ಜೋನ್ಸ್ 37 ರನ್ ಬಾರಿಸಿ ಔಟಾದರೆ, ಮೆಕ್‌ಮುಲ್ಲೆನ್ ಕೇವಲ 18 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 41 ರನ್‌ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಮೈಕೆಲ್ ಲೀಸ್ಕ್ 22 ರನ್ ಬಾರಿಸಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು.
ಸ್ಕಾಟ್ಲೆಂಡ್ ನೀಡಿದ 207 ರನ್‌ಗಳ ಗುರಿ ಬೆನ್ನಟ್ಟಿದ ಇಟಲಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ ಎಸೆತದಲ್ಲೇ ತಂಡದ ಮೊದಲ ವಿಕೆಟ್ ಪತನವಾಯಿತು. ತಂಡದ ಪರ ಅರ್ಧಶತಕ ಬಾರಿಸಿ ಹೋರಾಟದ ಇನ್ನಿಂಗ್ಸ್ ಆಡಿದ ಬೆಂಜಮಿನ್ ಮಾನೆಂಟಿ 52 ರನ್ ಬಾರಿಸಿದರೆ, ಹ್ಯಾರಿ ಮಾನೆಂಟಿ 37 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದ ಇಟಲಿ 100 ರನ್‌ಗಳ ಗಡಿ ದಾಟಿತು. ಅಂತಿಮವಾಗಿ 16.4 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಇಟಲಿ 134 ರನ್ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಬೆಂಗಳೂರಿನಲ್ಲಿ RCB ಪಂದ್ಯ ನಡೆಸಲು ಮುಂದುವರಿದ ಕೆಎಸ್‌ಸಿಎ ಕಸರತ್ತು; ಪರಮೇಶ್ವರ್ ಭೇಟಿ ಮಾಡಿದ ಕೆಎಸ್‌ಸಿಎ, ಆರ್‌ಸಿಬಿ ನಿಯೋಗ

