ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರೋದು ರಾಜ್ಯ ಸರ್ಕಾರ. ಸುಮ್ಮನೆ ಕೇಂದ್ರದ ಮೇಲೆ ಆರೋಪ ಮಾಡೋದು ಬಿಟ್ಟು ದರ ಕಡಿಮೆ ಮಾಡಬೇಕು ಅಂತ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (S.R.Vishwnath) ಆಗ್ರಹಿಸಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ. ಈಗಾಗಲೇ ನಮ್ಮ ಸಂಸದರು ಇದರ ಬಗ್ಗೆ ಹೇಳಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಮೆಟ್ರೋ ಟಿಕೆಟ್ ದರ ಕಡಿಮೆ ಮಾಡಬೇಕು ಅಂತ ಆಗ್ರಹಿಸಿದರು. ಇದನ್ನೂ ಓದಿ: ದೇಶದಲ್ಲೇ ʻನಮ್ಮ ಮೆಟ್ರೋʼ ಬಲು ದುಬಾರಿ; ಟಿಕೆಟ್ ದರ ವಿಚಾರದಲ್ಲೂ ರಾಜ್ಯ-ಕೇಂದ್ರದ ಸಂಘರ್ಷ
ಮೆಟ್ರೋ ವಿಚಾರದಲ್ಲಿ ಬೆಲೆ ಏರಿಕೆ, ಇಳಿಕೆ ಸಂಪೂರ್ಣ ಸ್ವಾತಂತ್ರ್ಯ ರಾಜ್ಯ ಸರ್ಕಾರಕ್ಕೆ ಇದೆ. ಇದಕ್ಕೆ ಕಾರಣ ಕೇಂದ್ರ ಅಂತ ಆರೋಪ ಮಾಡ್ತಿದ್ದಾರೆ. ಕೇಂದ್ರ ದರ ಹೆಚ್ಚಳ ಮಾಡೋ ದಾರಿದ್ರ್ಯ ಬಂದಿಲ್ಲ. ಲೋಕಸಭಾ ಸದಸ್ಯರು ವಿವರಣೆ ನೀಡಿದ್ದಾರೆ. ಕೂಡಲೇ ದರ ಹೆಚ್ಚಳ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

