– ಲೈಟಿಂಗ್ ವೋಲ್ಟರ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡ್
– 124 ಜಿಬಿ ಮೆಮೊರಿ ಕಾರ್ಡ್, 64 ಜಿಬಿ ಪೆನ್‌ಡ್ರೈವ್ ಸೀಜ್
ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ (Female Officer) ಬೆಡ್ ರೂಮ್ ಖಾಸಗಿ ಕ್ಷಣಗಳನ್ನ ಸೆರೆ ಹಿಡಿದು 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಪತ್ರಕರ್ತರನ್ನ ಬೆಳಗಾವಿ ಪೊಲೀಸರು (Belagavi Police) ಹೆಡೆಮುರಿ ಕಟ್ಟಿದ್ದಾರೆ.
ಮನೆಗೆ ನುಗ್ಗಿ ಬೆಡ್ ರೂಮ್ ನಲ್ಲಿದ್ದ ಲೈಟಿಂಗ್ ವೋಲ್ಟರ್‌ಗಳಲ್ಲಿ ರಹಸ್ಯ ಕ್ಯಾಮೆರಾ (Hidden Camera) ಅಳವಡಿಸಿದ್ದ ಕಿರಾತಕರು ಖಾಸಗಿ ದೃಶ್ಯ ಸೆರೆಯಾದ ಬಳಿಕ ಮಹಿಳಾ ಅಧಿಕಾರಿಗೆ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು .ಹಣ ಕೊಡದಿದ್ದರೇ ಸೋಷಿಯಲ್ ಮಿಡಿಯಾದಲ್ಲಿ ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆಯೊಡ್ಡಿದ್ದರು. ನಕಲಿ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಕಮೀಷನರ್ ಮೊರೆಯನ್ನ ಮಹಿಳಾ ಅಧಿಕಾರಿ ಹೋಗಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಮೂವರು ನಕಲಿ ಪತ್ರಕರ್ತರನ್ನ (Fake Journalists) ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಹಡೆಮುರಿಕಟ್ಟಿದ್ದಾರೆ.

ಗೋಕಾಕ್ ನಗರದ ಜಲಾಲ್ ಗಲ್ಲಿಯ ಸಮೀರ್ ನಿಸಾರ್ ಅಹ್ಮದ್ ಶೇಖ್, ಗೋಕಾಕ್ ಹೊರವಲಯದ ಯೋಗಿಕೊಳ್ಳದ ಅಬ್ಬುಲ್‌ರಶೀದ್ ಮಕಾಂದಾರ್, ಘಟಪ್ರಭಾ ನಿವಾಸಿ ಮೊಹಮ್ಮದ್ ದಿಲಾವರ್ ಬಾಲೇಕುಂದ್ರಿ ಬಂಧಿತರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮೀಸಲಾಗಿದ್ದ ಸರ್ಕಾರಿ ಜಾಗದಲ್ಲಿ ಪೇ & ಪಾರ್ಕ್ ವ್ಯವಹಾರ: ಒತ್ತುವರಿ ತೆರವು
128 ಜಿಬಿ ಚಿಪ್, 64 ಜಿಬಿ ಪೆನ್‌ಡ್ರೈವ್ ಜಪ್ತಿ
ಖಾಸಗಿ ವಿಡಿಯೋ ಸೆರೆಹಿಡಿಯಲು ಕಿರಾತಕರ ಐಡಿಯಾ ಕಂಡು ಸ್ವತಃ ಪೊಲೀಸರೇ ನಿಬ್ಬೆರಗಾಗಿದ್ದಾರೆ. ಬಂಧಿತರಿಂದ ಎರಡು ಸ್ಯಾಮ್‌ಸಂಗ್ ಗ್ಯಾಲಕ್ಸಿ ಅಲ್ಟ್ರಾ ಮೊಬೈಲ್, ವಿವೋ ಮೊಬೈಲ್, 64 ಜಿಬಿ ಪೆನ್‌ಡ್ರೈವ್, 6 ಹಿಡನ್ ಕ್ಯಾಮೆರಾ, ಎರಡು ಓಟಿಜಿ, ಎರಡು ಮೆಮೊರಿ ಕಾರ್ಡ್, 128 ಜಿಬಿಯ 8 ಮೆಮೊರಿ ಕಾರ್ಡ್, ಇನ್ನೋವಾ ಕ್ರಿಸ್ಟಾ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.
ಐಡಿಯಾವೇ ರೋಚಕ
ಮೊದಲು ಮಹಿಳಾ ಅಧಿಕಾರಿಯ ಮನೆಕೆಲಸದವನಿಗೆ ಗಾಳ ಹಾಕಿದ್ದ ಕಿರಾತಕರು ಕಚೇರಿಗೆ ಹೋಗುವಾಗ ಆಗಾಗ ಕಿಟಕಿಯಲ್ಲಿ ಮನೆ ಕೀಲಿಯನ್ನ ಮಹಿಳಾ ಅಧಿಕಾರಿ ಇಟ್ಟು ಹೋಗ್ತಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ. ಕಿಟಕಿಯಲ್ಲಿ ಕೀಲಿ ಇಟ್ಟು ಹೋಗುವ ವಿಷಯ ಮನೆ ಕೆಲಸದ ವ್ಯಕ್ತಿ ಮಾತ್ರ ಗೊತ್ತಿತ್ತು. ಆತನಿಗೆ ಹಣ ಕೊಟ್ಟು ಕೀಲಿ ಇಟ್ಟು ಹೋದಾಗ ಮಾಹಿತಿ ನೀಡುವಂತೆ ಐನಾತಿಗಳು ತಿಳಿಸಿದ್ದರು. ಇದನ್ನೂ ಓದಿ: ನೆಲಮಂಗಲದಲ್ಲಿ ಹೊತ್ತಿ ಉರಿದ ಖಾಸಗಿ ಬಸ್ – ತಪ್ಪಿದ ಭಾರೀ ಅನಾಹುತ

2 ತಿಂಗಳ ಹಿಂದೆ ಕೀಲಿ ಇಟ್ಟು ಹೋದಾಗ ಕಿರಾತಕರಿಗೆ ಮನೆಕೆಲಸದವ ಮಾಹಿತಿ ನೀಡಿದ್ದ ಆಗ ಮನೆಗೆ ನುಗ್ಗಿ ಬೆಡ್ ರೂಂ, ಹಾಲ್‌ನ ಲೈಟ್ ಹೋಲ್ಡರ್‌ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಖದೀಮರು ಮಹಿಳಾ ಅಧಿಕಾರಿ ಅನ್ಯವ್ಯಕ್ತಿ ಜೊತೆಗೆ ಖಾಸಗಿ ಸಮಯ ಕಳೆಯುವ ದೃಶ್ಯಗಳನ್ನ ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಇದನ್ನೂ ಓದಿ: ಅಬಕಾರಿ ಸಚಿವರ ರಾಜೀನಾಮೆ ಅವಶ್ಯಕತೆ ಇಲ್ಲ, ವಿಪಕ್ಷಗಳ ಬಳಿ ದಾಖಲೆ ಇಲ್ಲ – ಹೆಚ್.ಸಿ ಬಾಲಕೃಷ್ಣ
ದೃಶ್ಯ ಸೆರೆಯಾದ ಬಳಿಕ ಅಧಿಕಾರಿ ಮನೆಯಲ್ಲಿ ಇಲ್ಲದಾಗ ಕ್ಯಾಮೆರಾ ತೆಗೆದುಕೊಂಡಿದ್ದರು. ಬಳಿಕ ಮೆಮೊರಿ ಕಾರ್ಡ್‌ನಲ್ಲಿನ ಸಂಗ್ರಹವಾಗಿದ್ದ ಖಾಸಗಿ ದೃಶ್ಯಗಳನ್ನ ಪೆನ್‌ಡ್ರೈವ್‌ಗೆ ಹಾಕಿಕೊಂಡ ಆಸಾಮಿಗಳು ಬಳಿಕ 2 ತಿಂಗಳಿಂದ 50 ಲಕ್ಷ ಹಣ ಕೊಡುವಂತೆ ಪೀಡಿಸುತ್ತಿದ್ದರು. ಈ ನಕಲಿ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತು ಮಹಿಳಾ ಅಧಿಕಾರಿ ಪೊಲೀಸರ ಮೊರೆ ಹೋಗಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮೂವರು ನಕಲಿ ಪತ್ರರ್ತರನ್ನು ಬಂಧಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.

