ಮಹಿಳೆಯರಿಗೆ ಮಾಸಿಕ 2,000 ರೂ., ವರ್ಷಕ್ಕೆ 3 ಸಿಲಿಂಡರ್ ಉಚಿತ – ತಮಿಳುನಾಡಲ್ಲಿ ಬಿಜೆಪಿ ಗ್ಯಾರಂಟಿ

1 Min Read

ಚೆನ್ನೈ: ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು (Guarantee Scheme) ಟೀಕಿಸುತ್ತಲೇ ಬಂದಿರುವ ಬಿಜೆಪಿ (BJP) ಇದೀಗ ತಮಿಳುನಾಡಿನಲ್ಲೂ ಗ್ಯಾರಂಟಿ ಘೋಷಿಸಿದೆ. ಏಪ್ರಿಲ್ 23ಕ್ಕೆ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಬಿಜೆಪಿ ಪ್ರಣಾಳಿಕೆ (Manifesto) ರಿಲೀಸ್ ಮಾಡಿತು.

ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ, ಪ್ರತಿ ಮನೆಗೆ 10,000 ರೂ.ಗಳ ಒಂದು ಬಾರಿಯ ಆರ್ಥಿಕ ಸಹಾಯದ ಭರವಸೆ, ಪೊಂಗಲ್, ದೀಪಾವಳಿ ಮತ್ತು ತಮಿಳು ಹೊಸ ವರ್ಷಕ್ಕೆ ಒಟ್ಟು 3 ಉಚಿತ ಸಿಲಿಂಡರ್ ನೀಡುವ ಭರವಸೆ ಕೊಟ್ಟಿದೆ. ಇದನ್ನೂ ಓದಿ: ಕಾರು, ಟಿಪ್ಪರ್ ನಡುವೆ ಡಿಕ್ಕಿ – ಕೇರಳ ಮೂಲದ ಇಬ್ಬರು ಸಾವು

ಅಲ್ಲದೆ, ರೈತರಿಗಾಗಿ ‘ಉಜವೇ ಥಾಯ್’ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಕೇಂದ್ರದ ಪಿಎಂ-ಕಿಸಾನ್ ಯೋಜನೆಯಡಿ ನೀಡಲಾಗುವ ಹಣಕ್ಕೆ ಹೆಚ್ಚುವರಿಯಾಗಿ 3,000 ರೂ.ಗಳನ್ನು ಸೇರಿಸಿ, ರೈತರ ವಾರ್ಷಿಕ ಆರ್ಥಿಕ ನೆರವನ್ನು ಒಟ್ಟು 9,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ನೋಡಲು ತನ್ನಂತೆ ಇಲ್ಲ ಎಂದು ಮಗನನ್ನೇ ಕೊಲೆಗೈದ ತಂದೆ

ಕೇಂದ್ರ ಸಚಿವ ಜೆಪಿ ನಡ್ಡಾ ಪ್ರಣಾಳಿಕೆ ರಿಲೀಸ್ ಮಾಡಿದರು. ಬಳಿಕ ಮಾತಾಡಿ, ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪವನ್ನು ಬೆಳಗಿಸುವ ಸಂಪ್ರದಾಯದ ಪುನರಾರಂಭ, ಧಾರ್ಮಿಕ ಕಾರ್ಯಕ್ರಮಗಳ ಭರವಸೆ ನೀಡಿದರು. ಅಲ್ಲದೇ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ

Share This Article