– ಜಿರಾಮ್‌ಜಿ ಕಾಯ್ದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದ ಸಿಎಂ
ಬೆಂಗಳೂರು: ವಿಧಾನಸಭೆಯಲ್ಲಿ ಇಂದು ವಿಬಿ-ಜಿರಾಮ್‌ಜಿ ಕಾಯ್ದೆ (VBG Ram G Act) ವಿಚಾರ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಕಿಚ್ಚು ಹಚ್ಚಿತ್ತು. ಸಿಎಂ ಸಿದ್ದರಾಮಯ್ಯ (Siddaramaiah) ಅವರು ವಿಬಿ-ಜಿರಾಮ್‌ಜಿ ಕಾಯ್ದೆ ವಿರೋಧಿಸಿ ನಿರ್ಣಯ ಮಂಡನೆ ವೇಳೆ ವಿಪಕ್ಷ ಸದಸ್ಯರು ತೀವ್ರವಾಗಿ ಖಂಡಿಸಿದ್ದರಿಂದ ಸದನದಲ್ಲಿ ತೀವ್ರ ಗದ್ದಲ, ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು.
ಸರ್ಕಾರದ ನಿರ್ಣಯ ಓದಿದ ಸಿಎಂ, ಈ ಸದನ ವಿಬಿ-ಜಿರಾಮ್‌ಜಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತೆ. ವಿಬಿಜಿರಾಮ್‌ಜಿ ಕಾಯ್ದೆ ರದ್ದು ಮಾಡಬೇಕು. ಮನರೇಗಾ (MGNAREGA) ಕಾಯ್ದೆ ಮೂಲ ಸ್ವರೂಪದಲ್ಲಿ ಮರು ಜಾರಿ ಮಾಡಬೇಕು. ವಿಬಿಜಿರಾಮ್‌ಜಿ ಕಾಯ್ದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ನರೇಗಾ ಸಂವಿಧಾನದ ಹಕ್ಕುಗಳನ್ನ ಕೊಡುವ ಯೋಜನೆ. ಕೆಲಸದ ಹಕ್ಕು ಯೋಜನೆ ಕೊಡ್ತಿದ್ದ ಯೋಜನೆ ನರೇಗಾ. ನರೇಗಾ ವಾಪಸ್ ಜಾರಿ, ವಿಬಿಜಿರಾಮ್‌ಜಿ ರದ್ದಿಗೆ ಈ ನಿರ್ಣಯ ಮೂಲಕ ಈ ಸದನ ಕೇಂದ್ರಕ್ಕೆ ಒತ್ತಾಯಿಸುತ್ತದೆ. ಈ ನಿರ್ಣಯವನ್ನ ಈ ಸದನ ನಿರ್ಣಯ ಅಂಗೀಕರಿಸುತ್ತದೆ ಅಂತ ಗದ್ದಲದ ಮಧ್ಯೆಯೇ ಸಿಎಂ ನಿರ್ಣಯ ಓದಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಗದ್ದಲ – ಸ್ಪೀಕರ್ ಮೇಲೆ ಕಾಗದ ಎಸೆದ 8 ವಿಪಕ್ಷ ಸಂಸದರು ಇಡೀ ಅಧಿವೇಶನದಿಂದ ಅಮಾನತು
ಆಗ ಈ ಸದನ ಅಲ್ಲ ನಿಮ್ಮ ಸರ್ಕಾರ ವಿರೋಧಿಸುತ್ತೆ ಅಂತ ಹೇಳಿ ಎಂದು ಅಶೋಕ್ ಒತ್ತಾಯಿಸಿದರು. ಆಗ ಈ ಸದನ ಈ ಸದನ ಅಂತ ಒತ್ತಿ ಹೇಳಿ ವಿಪಕ್ಷಗಳಿಗೆ ಸಿಎಂ ಗುದ್ದು ಕೊಟ್ಟರು. ಇದಕ್ಕೆ ಸರ್ಕಾರ ಸರ್ಕಾರ ಈ ಸದನ ಅಲ್ಲ ಅಂತ ವಿಪಕ್ಷ ಸದಸ್ಯರು ಟಕ್ಕರ್ ಕೊಟ್ಟರು. ಇದನ್ನೂ ಓದಿ: ಜೈಲಿನಿಂದ ಬಂದು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಅನಂತ್ ಸಿಂಗ್
ವಿಪಕ್ಷಗಳಿಂದ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಮುಂದುವರೆಯಿತು. ಆರ್.ಬಿ ತಿಮ್ಮಾಪೂರ ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದು ಸಿಎಂ ನಿರ್ಣಯ ಮಂಡನೆಗೆ ವಿಪಕ್ಷಗಳ ಸದಸ್ಯರು ಎದ್ದು ನಿಂತು ಅಡ್ಡಿ ಪಡಿಸಿದ್ರು. ಈ ವೇಳೆ ವಿಪಕ್ಷಗಳ ಮೇಲೆ ಸಿಎಂ ಗರಂ ಆದ್ರು. ಅಧ್ಯಕ್ಷರೇ ಅವರನ್ನ ಕೂರಿಸಿ, ಯಾರು ನಿಮ್ಮ ಮಾತು ಕೇಳಲ್ವೋ ಹೊರಗೆ ಹಾಕಿ ಅಂತ ಸಿಎಂ ಕಿಡಿ ಕಿಡಿಯಾದ್ರು.
ಸದನದಲ್ಲಿ ಗದ್ದಲ, ಕೋಲಾಹಲ, ಪರಸ್ಪರ ಆರೋಪ, ವಾಕ್ಸಮರಗಳಿಂದ ಗೊಂದಲದ ಗೂಡಾಯ್ತು. ಇದು ಲೂಟಿ ಸರ್ಕಾರ ಅಂತ ಘೋಷಣೆ ವಿಪಕ್ಷ ಸದಸ್ಯರು ಘೋಷಣೆ ಕೂಗುತ್ತಲೇ ಇದ್ರು. ವಿಪಕ್ಷಗಳ ನಡೆಗೆ ಸಿಎಂ ತೀವ್ರ ಖಂಡಿಸಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ನಿಯಂತ್ರಣಕ್ಕೆ ಬರದ ಹಿನ್ನೆಲೆ ಸದನವನ್ನೇ ಸ್ಪೀಕರ್ ಮುಂದೂಡಬೇಕಾಯ್ತು. ಭೋಜನದ ಬಳಿಕ ಕಲಾಪ ಶುರುವಾದ್ರೂ ಮತ್ತೆ ಸದನದಲ್ಲಿ ಗದ್ದಲ, ಜಟಾಪಟಿ ಮುಂದುವರೆಯಿತು. ಇದನ್ನೂ ಓದಿ: ಉ.ಕನ್ನಡ ಸಿದ್ದಾಪುರದಲ್ಲಿ ಕೊಲೆ ಕೇಸ್ – ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಪೊಲೀಸರ ವಶಕ್ಕೆ


