ಅಗಲಿದ ಸಿಜೆ ರಾಯ್ (CJ Roy) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ನಟ ಮೋಹನ್ ಲಾಲ್ (Mohanlal), ಅವರು ‘ಸ್ನೇಹಿತನಿಗೂ ಮಿಗಿಲು’ ಎಂದು ಹೇಳಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು ಸಿಜೆ ರಾಯ್ ಅಗಲಿಕೆ ನನಗೆ ತೀವ್ರ ನೋವು ತಂದಿದೆ. ಅವರ ಬಾಂಧವ್ಯ ಸ್ನೇಹವನ್ನೂ ಮೀರಿದ್ದು. ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಯಾವಾಗಲೂ ಅವರು ಮುಂಚೂಣಿಯಲ್ಲಿದ್ದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ – ಅಶೋಕ್ ನಗರ ಪೊಲೀಸರಿಂದ ಯುಡಿಆರ್ ದಾಖಲು

ಈ ದುಃಖದ ಸಮಯದಲ್ಲಿ ನಾನು ಅವರ ಕುಟುಂಬದ ಜೊತೆ ನಿಲ್ಲುತ್ತೇನೆ. ನಮ್ಮ ಸಂಬಂಧ ಸ್ನೇಹಕ್ಕಿಂತ ಹತ್ತಿರವಾಗಿತ್ತು. ಅವರನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಕೇರಳ ಮೂಲದ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಸಿಇಓ ಸಿ.ಜೆ ರಾಯ್ (Confident Group CEO CJ Roy) ಅವರು ಶುಕ್ರವಾರ (ಜ.30) ಬೆಂಗಳೂರಿನಲ್ಲಿ (Bengaluru) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದಾಯ ತೆರಿಗೆ ಇಲಾಖೆಯಿಂದ ಪದೇ ಪದೇ ಆದ ದಾಳಿಗೆ (IT Raid) ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಸಂಬಂಧ ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕ ಟಿಜೆ ಜೋಸೆಫ್ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಕೇಂದ್ರ ಡಿಸಿಪಿ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಇದನ್ನೂ ಓದಿ: ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ರಿ, ನಿಮ್ಮ ಋಣ ಮರೆಯೋಕಾಗಲ್ಲ – ಸಿಜೆ ರಾಯ್ ನೆನೆದು ಹನುಮಂತು ಭಾವುಕ

