– ಕೇಂದ್ರದ ವಿರುದ್ಧ ಕಠಿಣ ವಾಗ್ದಾಳಿ ಇಲ್ಲದ ಭಾಷಣ ಸಿದ್ಧ
ಬೆಂಗಳೂರು: ʻರಾಜ್ಯಪಾಲರು vs ರಾಜ್ಯ ಸರ್ಕಾರʼ ಸಂಘರ್ಷದ ಬೆನ್ನಲ್ಲೇ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಲು ಹೊರಟಿದೆ. ರಾಜ್ಯಪಾಲರ ಆಕ್ಷೇಪದ ಬೆನ್ನಲ್ಲೇ ಗಣರಾಜ್ಯೋತ್ಸವ ಭಾಷಣ (Republic Day Speech) ಕುರಿತು ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಗಣರಾಜ್ಯೋತ್ಸವ ಭಾಷಣಕ್ಕೆ ರಾಜ್ಯಪಾಲರಿಂದ ಅಧಿಕೃತ ಮುದ್ರೆ ಒತ್ತಿದ್ದಾರೆ ಎನ್ನಲಾಗಿದೆ.
ನಿನ್ನೆಯಷ್ಟೇ ಲೋಕಭವನಕ್ಕೆ (LokBhavan) ಸರ್ಕಾರದಿಂದ ಗಣರಾಜ್ಯೋತ್ಸವ ಭಾಷಣ ಕಳುಹಿಸಲಾಗಿತ್ತು. ರಾಜ್ಯಪಾಲರಿಂದ (Governor) ಭಾಷಣ ಪರಿಶೀಲನೆ ಮಾಡಿದ್ದು, ಆದಾದ ಬಳಿಕ ಭಾಷಣ ಓಕೆ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ: Republic Day 2026 | ದೆಹಲಿ ಪರೇಡ್‌ಗೆ ಕರ್ನಾಟಕದ 12 ವಿದ್ಯಾರ್ಥಿಗಳು ಆಯ್ಕೆ
ಕೇಂದ್ರ ಸರ್ಕಾರದ ವಿರುದ್ಧ ಕಠಿಣ ವಾಗ್ದಾಳಿ ಇಲ್ಲದ ಭಾಷಣ ಸಿದ್ಧವಾಗಿದ್ದು ಜನವರಿ 26ಕ್ಕೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರು ಗಣರಾಜ್ಯೋತ್ಸವ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ: ರಾಜ್ಯಮಟ್ಟದ ಬೃಹತ್ ವೀರಲೋಕ ಪುಸ್ತಕ ಸಂತೆಗೆ ಚಾಲನೆ ನೀಡಿದ ಡಾ.ಬರಗೂರು ರಾಮಚಂದ್ರಪ್ಪ
ಅಂದಹಾಗೆ ಜಂಟಿ ಅಧಿವೇಶನದ ಭಾಷಣದಲ್ಲಿ 11 ಪ್ಯಾರಾಗಳಿಗೆ ಆಕ್ಷೇಪ ಎತ್ತಿದ ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಒಂದೇ ನಿಮಿಷದಲ್ಲಿ ಭಾಷಣ ಮುಗಿಸಿ ಹೊರಟಿದ್ರು. ಇದರಿಂದಾಗಿ ರಾಜ್ಯಪಾಲರು ವರ್ಸಸ್ ಸರ್ಕಾರದ ನಡುವೆ ಸಂಘರ್ಷ ಉಂಟಾಗಿತ್ತು. ಇನ್ನು ರಾಜ್ಯಪಾಲರ ಆಕ್ಷೇಪ ಗಮನಿಸಿದ ಸರ್ಕಾರ ಈಗ ಗಣರಾಜ್ಯೋತ್ಸವ ಭಾಷಣದಲ್ಲಿ ಪದ ಬಳಕೆಯಲ್ಲಿ ಸೂಕ್ಷ್ಮತೆ ಕಾಯ್ದುಕೊಂಡಿದೆ.


