– ಒಟ್ಟು 7,800 ಕ್ಕೂ ಹೆಚ್ಚು ವೆಬ್ಸೈಟ್ ನಿಷೇಧ
ನವದೆಹಲಿ: ಆನ್ ಲೈನ್ ಬೆಟ್ಟಿಂಗ್ (Online Betting), ಜೂಜಾಟಗಳಿಗೆ ಯವಜನರು ಬಲಿಯಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವ ಭಾಗವಾಗಿ ಇಂದು ಒಂದೇ ದಿನ 242 ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ (Gambling) ವೆಬ್‌ಸೈಟ್‌ಗಳ ಲಿಂಕ್‌ಗಳನ್ನ ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ.
Government of India today blocked 242 illegal betting and gambling website links. So far, over 7,800 illegal betting and gambling websites have been taken down, with a significant increase in enforcement actions after the passage of the Online Gaming Act. Today’s action reflects… pic.twitter.com/QcrPewcLxZ
— ANI (@ANI) January 16, 2026
2025ರ ಆಗಸ್ಟ್ ತಿಂಗಳಲ್ಲಿ ಆನ್‌ಲೈನ್ ಗೇಮಿಂಗ್ ಕಾಯ್ದೆಯನ್ನ ಕೇಂದ್ರ ಸರ್ಕಾರ (Central Government) ಜಾರಿಗೆ ತಂದಿತು. ಆ ಬಳಿಕ ಆನ್‌ಲೈನ್ ಬೆಟ್ಟಿಂಗ್ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾ ಬರುತ್ತಿದೆ. ಇಲ್ಲಿಯವರೆಗೆ 7,800 ಕ್ಕೂ ಅಧಿಕ ಅಕ್ರಮ ಬೆಟ್ಟಿಂಗ್ ಮತ್ತು ಜೂಜು (ಗ್ಯಾಂಬ್ಲಿಂಗ್) ವೆಬ್‌ಸೈಟ್‌ಗಳ ಲಿಂಕ್‌ಗಳನ್ನ ನಿಷೇಧ ಮಾಡಿದೆ.

ಇಂದಿನ ಕ್ರಮವು ಯುವ ಸಮೂಹವನ್ನ ರಕ್ಷಿಸುವಲ್ಲಿ ಹಾಗೂ ಅಕ್ರಮ ಆನ್‌ಲೈನ್ ಬೆಟ್ಟಿಂಗ್, ಗ್ಯಾಮ್ಲಿಂಗ್ ತಡೆಯುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಚಾರ – ದೇವರಕೊಂಡ, ಪ್ರಕಾಶ್ ರಾಜ್, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್
ಕರ್ನಾಟಕದಲ್ಲೂ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ದಂಧೆಗೆ ಕಡಿವಾಣ ಹಾಕಲು ಹೊಸ ಕಾನೂನು ರೂಪಿಸಲಾಗುತ್ತಿದೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ಅಂಕುಶಕ್ಕೆ ಮುಂದಾದ ಸರ್ಕಾರ – ಹೊಸ ತಿದ್ದುಪಡಿ ಮಸೂದೆ ಮಂಡನೆಗೆ ತಯಾರಿ

ಸದ್ಯ ಪ್ರಸ್ತಾಪಿತ ಕಾನೂನು ಪ್ರಕಾರ ಗೇಮ್ ಆಫ್ ಚಾನ್ಸ್ ಅಂದ್ರೆ ಯಾವುದೇ ಆಟ, ಸ್ಪರ್ಧೆಯ ಫಲಿತಾಂಶಗಳು ಅದೃಷ್ಟದಿಂದ ಅವಲಂಬಿತವಾಗಿರುವ, ಅನಿಶ್ಚಿತತೆಗಳಿಂದ ಕೂಡಿರುವ ಆನ್‌ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಅಥವಾ ಪಂತ ಕಟ್ಟುವ ಚಟುವಟಿಕೆಗಳು ನಿಷಿದ್ಧ. ಪಂಥ ಕಟ್ಟುವುದು, ಹಣ ಇಡುವುದು, ಟೋಕನ್, ವರ್ಚುವಲ್ ಕರೆನ್ಸಿ ಅಥವಾ ಇ-ಫಂಡುಗಳನ್ನು ಇಟ್ಟು ಅಂತರ್ಜಾಲ, ಮೊಬೈಲ್ ಆಪ್ ಅಥವಾ ಇತರೆ ಡಿಜಿಟಲ್ ವೇದಿಕೆಗಳ ಮೂಲಕ ಆಡುವ ಆಟಗಳ ನಿಷೇಧ. ನೋಂದಾಯಿತವಲ್ಲದ ವೇದಿಕೆಗಳ ಮೂಲಕ ಇಂಥ ಆನ್ ಲೈನ್ ಬೆಟ್ಟಿಂಗ್, ಗ್ಯಾಮ್ಲಿಂಗ್ ಸೇವೆ ಕೊಡುವುದು ಸಹ ನಿಷೇಧಿಸಲು ಅವಕಾಶ ಇದೆ. ಇದನ್ನೂ ಓದಿ: ಮಾಜಿ ಗ್ಯಾಂಗ್‌ಸ್ಟರ್ ಅರುಣ್ ಗಾವ್ಳಿ ಇಬ್ಬರು ಪುತ್ರಿಯರಿಗೂ ಬಿಎಂಸಿ ಚುನಾವಣೆಯಲ್ಲಿ ಸೋಲು

