ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ನಟನೆಯ 173ನೇ ಸಿನಿಮಾದ ಬಗ್ಗೆ ಬಿಗ್‌ನ್ಯೂಸ್‌ವೊಂದನ್ನ ಕೊಟ್ಟಿದ್ದಾರೆ ತಲೈವಾ. ರಜನಿಕಾಂತ್ ಹಾಗೂ ಕಮಲ್ ಹಾಸನ್ (Kamal Haasan) ಒಟ್ಟಾಗಿ ಸಿನಿಮಾ ಮಾಡಲು ಮುಂದಾಗಿದ್ದರು. ರಜನಿಕಾಂತ್ ನಟನೆ ಮಾಡಿದ್ರೆ, ಕಮಲ್ ಹಾಸನ್ ರಾಜ್ ಕಮಲ್ ಫಿಲಂಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾಗೆ ಮೊದಲು ನಿರ್ದೇಶಕ ಸುಂದರ್.ಸಿ ಕೈ ಜೋಡಿಸಿದ್ದರು. ಸಿನಿಮಾದ ಬಗ್ಗೆ ಘೋಷಣೆ ಕೂಡಾ ಮಾಡಿದ್ದರು. ಬಳಿಕ ಸಿನಿಮಾದಿಂದ ದೂರ ಸರಿದಿದ್ದರು.
ತಲೈವರ್ 173 ಸಿನಿಮಾವನ್ನ ಸಿಬಿ ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇದೇ ವರ್ಷ ಏಪ್ರಿಲ್‌ನಿಂದ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಲಾಗಿದೆಯಂತೆ. ಈ ಬಗ್ಗೆ ತಲೈವಾ ರಜನಿಕಾಂತ್ ಬಿಗ್ ಅಪ್‌ಡೇಟ್ ಕೊಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ ದಿನ ತಮ್ಮ ನಿವಾಸದ ಮುಂದೆ ನೆರೆದ ಅಭಿಮಾನಿಗಳತ್ತ ಕೈಬೀಸಿದ್ದಾರೆ. ಇದೇ ವೇಳೆ 173ನೇ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗ್ಯಾಮ್ಲಿಂಗ್‌ನಲ್ಲಿ ಹಣ ಕಳೆದುಕೊಂಡೆ, 3 ವರ್ಷಗಳಿಂದ ಮನೆಯಿಂದಾಚೆಯಿದ್ದೀನಿ, ಇವರಿಂದ ಬದುಕೋಕೆ ಆಗ್ತಿಲ್ಲ: ಸಮೃದ್ಧಿ ರಾಮ್ ಕಣ್ಣೀರು
ರಜನಿಕಾಂತ್ ತಮ್ಮ ನಿವಾಸದ ಮುಂದೆ ಜಮಾಯಿಸಿದ ಅಭಿಮಾನಿಗಳಿಗೆ ಸಂಕ್ರಾಂತಿಯ ಶುಭಾಶಯಗಳನ್ನ ತಿಳಿಸಿದ್ದಾರೆ. ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಜನಿಕಾಂತ್ ಇನ್ನೂ ಹೆಸರಿಡದ ತಲೈವರ್-173 ಚಿತ್ರದ ಬಗ್ಗೆ ಮಾತ್ನಾಡಿದ್ದಾರೆ. ಏಪ್ರಿಲ್‌ನಿಂದ ಶುರುವಾಗುವ ಈ ಸಿನಿಮಾ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾ ಎಂದಿದ್ದಾರೆ. ಈ ಸುದ್ದಿ ಕೇಳಿ ರಜನಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

