ಟೆಹ್ರಾನ್: ಈ ಬಾರಿ ಬುಲೆಟ್ ಮಿಸ್ ಆಗಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಇರಾನ್ (Iran) ಕೊಲೆ ಬೆದರಿಕೆ ಹಾಕಿದೆ.
2024 ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರ ಹತ್ಯೆ ಯತ್ನದ ತುಣುಕುಗಳನ್ನು ಪ್ರದರ್ಶಿಸಿದ ಇರಾನಿನ ಸರ್ಕಾರಿ ಟಿವಿಯಲ್ಲಿ ಒಂದು ಎಚ್ಚರಿಕೆ ಪ್ರಸಾರವಾಯಿತು. ಈ ಬಾರಿ ಬುಲೆಟ್ ಮಿಸ್ ಆಗಲ್ಲ ಎಂದು ಇರಾನ್ ಹೇಳಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಮುಂದುವರಿದ ಪ್ರತಿಭಟನೆ; ಸಾವಿನ ಸಂಖ್ಯೆ 3,428 ಕ್ಕೆ ಏರಿಕೆ
2024ರ ಜುಲೈ 13 ರಂದು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಪ್ರಚಾರ ರ‍್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ, ಟ್ರಂಪ್ ಅವರನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದ. ಬುಲೆಟ್ ಟ್ರಂಪ್ ಅವರ ಕಿವಿಗೆ ತಾಗಿತ್ತು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ದಾಳಿಯ ನಂತರ, ರಿಪಬ್ಲಿಕನ್ ನಾಯಕ ರಕ್ತಸಿಕ್ತವಾಗಿ ವೇದಿಕೆಯಿಂದ ಇಳಿದು ಘೋಷಣೆಗಳನ್ನು ಕೂಗಿದ್ದರು.
ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಬೆದರಿಕೆ ಬಂದಿದೆ. ಡಿಸೆಂಬರ್ ಅಂತ್ಯದಲ್ಲಿ ದೇಶವನ್ನು ಬೆಚ್ಚಿಬೀಳಿಸಿದ ಚಳುವಳಿ ಪ್ರಾರಂಭವಾದಾಗಿನಿಂದ ಟ್ರಂಪ್ ಹಲವಾರು ಬಾರಿ ಮಿಲಿಟರಿ ಹಸ್ತಕ್ಷೇಪ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. 1979 ರಲ್ಲಿ ಇಸ್ಲಾಮಿಕ್ ಗಣರಾಜ್ಯ ಘೋಷಣೆಯಾದ ನಂತರದ ಅತಿದೊಡ್ಡ ಪ್ರತಿಭಟನೆ ಇದಾಗಿದೆ. ಇದನ್ನೂ ಓದಿ: ಇರಾನ್ ವಿರುದ್ಧ ಮಿಲಿಟರಿ ದಾಳಿ ವಾರ, ತಿಂಗಳ ಕಾಲ ನಡೆಯಬಾರದು: ಟ್ರಂಪ್ ಸೂಚನೆ
ಇತ್ತೀಚಿನ ದಿನಗಳಲ್ಲಿ ಟ್ರಂಪ್ ಪದೇ ಪದೇ ಪ್ರತಿಭಟನೆಗಳ ವಿಚಾರವಾಗಿ ಇರಾನ್ ಜನರ ನೆರವಿಗೆ ಬರುವ ಬಗ್ಗೆ ಮಾತನಾಡಿದ್ದರು. ಈ ಪ್ರತಿಭಟನೆಗಳಲ್ಲಿ ಕನಿಷ್ಠ 3,428 ಜನರು ಸಾವನ್ನಪ್ಪಿದ್ದಾರೆ. ಪ್ರತಿಭಟನೆಗಳ ಸಮಯದಲ್ಲಿ ಬಂಧಿಸಲ್ಪಟ್ಟ ಜನರ ವಿರುದ್ಧ ಅಧಿಕಾರಿಗಳು ಮರಣದಂಡನೆ ವಿಧಿಸಿದರೆ, ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಬೆದರಿಕೆ ಹಾಕಿತ್ತು.

