ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಮೂಲಕ ಪಾಕ್ ಗಡಿ ದಾಟಿ ಉಗ್ರನೆಲೆಗಳನ್ನು ಧ್ವಂಸಗೊಳಿಸಿ, 100ಕ್ಕೂ ಹೆಚ್ಚು ಉಗ್ರರನ್ನು ಕೊಂದರೂ ಪಾಕಿಸ್ತಾನದ ಉಗ್ರರ ಅಟ್ಟಹಾಸ ನಿಂತಿಲ್ಲ. ಇದಕ್ಕೆ ಪ್ರತೀಕಾರವಾಗಿ ಹಿಂದೂಗಳ (Hindus) ಶಿರಚ್ಛೇದಕ್ಕೆ ಲಷ್ಕರ್ ನಾಯಕ ಅಬೂ ಮೂಸಾ ಕಾಶ್ಮೀರಿ (Abu Musa Kashmiri) ಕರೆ ನೀಡಿದ್ದಾನೆ.
ಎಲ್‌ಓಸಿಯ ಪಾಕ್ ರಾವಲ್‌ಕೋಟ್‌ನಲ್ಲಿ ಮಾತಾಡಿರುವ ಮೂಸಾ, ಶಾಂತಿಯುತ ಮನವಿ ಮೂಲಕ ನಮಗೆ ಸ್ವಾತಂತ್ರ್ಯ ಸಿಕ್ಕಲ್ಲ. ಇನ್ನೇನಿದ್ದರೂ ಜಿಹಾದ್ ಆರಂಭಿಸೋಣ.. ಸಿಕ್ಕ ಸಿಕ್ಕ ಹಿಂದೂಗಳ ತಲೆ ಕಡಿಯೋಣ. ಆಗಲೇ ನಮಗೆ ಸ್ವಾತಂತ್ರ್ಯ ಸಿಕ್ಕೋದು ಅಂತ ಸಾರ್ವಜನಿಕರನ್ನು ಪ್ರಚೋದಿಸಿದ್ದಾನೆ. ಅಲ್ಲದೆ, ಕಾಶ್ಮೀರ ಸಮಸ್ಯೆ ಜಿಹಾದ್, ಟೆರರಿಸಂನಿಂದ ಮಾತ್ರವೇ ಬಗೆಹರಿಸಲು ಸಾಧ್ಯ ಅಂತ ಈಗಾಗಲೇ ಪ್ರಧಾನಿ, ಸಚಿವರಿಗೆ ನಾನು ಹೇಳಿದ್ದೇನೆ ಅಂತಲೂ ಹೇಳಿದ್ದಾನೆ. ಇದನ್ನೂ ಓದಿ: ಜುಬೀನ್ ಗರ್ಗ್ ಕೊಲೆಯಾಗಿಲ್ಲ, ಲೈಫ್ ಜಾಕೆಟ್ ನಿರಾಕರಿಸಿದ್ದಕ್ಕೆ ಸಾವು: ಸಿಂಗಾಪುರ ಪೊಲೀಸರು
ಪಹಲ್ಗಾಮ್ ಉಗ್ರಕೃತ್ಯಕ್ಕೂ ಮುನ್ನ ಇದೇ ರೀತಿಯಾಗಿ ಈ ಉಗ್ರ ಕಾಶ್ಮೀರಿ ಹಿಂದೂಗಳ ನರಮೇಧಕ್ಕೆ ಕರೆ ನೀಡಿದ್ದ. ಈ ಮಧ್ಯೆ, ಪಾಕಿಸ್ಥಾನದ ಖೈಬರ್ ಪ್ರಾಂತ್ಯದಲ್ಲಿ ಪಾಕ್ ತಾಲಿಬಾನ್ ಉಗ್ರರು ಪೊಲೀಸ್ ವಾಹನವನ್ನೇ ಉಡಾಯಿಸಿದ್ದಾರೆ. ದುರ್ಘಟನೆಯಲ್ಲಿ 7 ಪೊಲೀಸರು ದುರ್ಮರಣಕ್ಕೀಡಾಗಿದ್ದಾರೆ.
ಗಸ್ತು ತಿರುಗುವ ಪೊಲೀಸ್ ವಾಹನದ ಹಾದಿಯಲ್ಲಿ ನೆಲಬಾಂಬ್ ಇಟ್ಟು ರಿಮೋಟ್ ಮೂಲಕ ಸ್ಫೋಟಿಸಿದ್ದಾರೆ. ಪರಿಣಾಮ ಸ್ಥಳದಲ್ಲೇ ಐವರು ಪೊಲೀಸರು ಛಿದ್ರಛಿದ್ರವಾದರೆ, ಮತ್ತಿಬ್ಬರು ಪೊಲೀಸರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಸ್ಫೋಟದ ದೃಶ್ಯ ಭೀಕರವಾಗಿದೆ. ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕೇಂದ್ರ ಸಚಿವ ಮುರುಗನ್ ದೆಹಲಿ ನಿವಾಸದಲ್ಲಿ ಪ್ರಧಾನಿ ಮೋದಿ ಪೊಂಗಲ್ ಸಂಭ್ರಮ

