– ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ
ಬೆಂಗಳೂರು: ಆರ್‌ಸಿಬಿ ಕಾಲ್ತುಳಿತ ದುರಂತದ ಎಫೆಕ್ಟ್ ಸದ್ಯ ಬೆಂಗಳೂರು ಪ್ರಸಿದ್ಧ ಲಾಲ್‌ಬಾಗ್ ಫ್ಲವರ್ ಶೋಗೂ (Lalbagh Flower Show) ತಟ್ಟಿದೆ. ಈ ಬಾರಿಯೂ ಫ್ಲವರ್ ಶೋಗೆ ಲಕ್ಷಾಂತರ ಜನ ಸೇರುವ ಸಾಧ್ಯತೆ ಹಿನ್ನೆಲೆ, ಪೊಲೀಸ್ ಇಲಾಖೆ ಮತ್ತು ತೋಟಗಾರಿಗೆ ಇಲಾಖೆ ಭಾರೀ ಕಟ್ಟೆಚ್ಚರ ವಹಿಸಿದೆ.
ಗಣರಾಜ್ಯೋತ್ಸವ ಹಿನ್ನೆಲೆ 219ನೇ ಫಲಪುಷ್ಪ ಪ್ರದರ್ಶನ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ವರ್ಷದಂತೆ ಈ ಭಾರಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದ್ದು, ಆರ್‌ಸಿಬಿ ಕಾಲ್ತುಳಿತದ ದುರಂತದ ಎಫೆಕ್ಟ್ ಹಿನ್ನೆಲೆ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಹಲವು ಬದಲಾವಣೆಗಳೊಂದಿಗೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಈ ಗಿರಾಕಿ ಎಲ್ಲಿದ್ದ? ಇವ್ನಿಗೆ ನಾನು ಹೆದರುತ್ತೀನಾ – ಶಿವಲಿಂಗೇಗೌಡ ವಿರುದ್ಧ ರೇವಣ್ಣ ಕೆಂಡಾಮಂಡಲ
ಇಂದಿನಿಂದ ಆರಂಭವಾಗಿ ಜನವರಿ 26ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಅದರಲ್ಲೂ ವೀಕೆಂಡ್ ಮತ್ತು ರಜಾ ದಿನಗಳಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಜನ ಹೆಚ್ಚಾಗಿ ಅಲ್ಲಲ್ಲಿ ಸಮಸ್ಯೆಯಾಗಬಾರೆದೆಂದು ಎಚ್ಚೆತ್ತಿರುವ ಇಲಾಖೆಗಳು, ಎಂಟ್ರಿ ಎಕ್ಸಿಟ್‌ಗಳ ಕಡೆ ಹೆಚ್ಚಿನ ಗಮನಕೊಟ್ಟಿದ್ದಾರೆ. ಪುಷ್ಪಪ್ರದರ್ಶನದ ಪ್ರಮುಖ ಆಕಷರ್ಣೆ ಗಾಜಿನ ಮನೆ ಬಳಿ ಈ ಬಾರಿ ಹೆಚ್ಚಿನ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಇಷ್ಟು ವರ್ಷ ಪ್ರವಾಸಿಗರಿಗೆ ಇಲ್ಲಿ ನಿಲ್ಲಲ್ಲು ಅವಕಾಶ ಕಲ್ಪಿಸಲಾಗಿತ್ತು. ನಿಂತ ಜನ ಬೇರೆ ಕಡೆ ಹೋಗದ ಕಾರಣ ಒಂದೇ ಕಡೆ ಹೆಚ್ಚು ಜನ ಸೇರಿ ಸಮಸ್ಯೆಯಾಗಿತ್ತು. ಸದ್ಯ ಈ ಸಮಸ್ಯೆ ತಪ್ಪಿಸುವ ಕಾರಣಕ್ಕೆ, ಈ ಬಾರಿ ಗಾಜಿನ ಮನೆ ಸುತ್ತಲು ನೋ ಮ್ಯಾನ್ ಝೋನ್ ಮಾಡಿದ್ದು, ಜನ ಎಲ್ಲೂ ನಿಲ್ಲದೆ ಸಾಗುವಂತೆ ಸಿದ್ಧತೆ ಮಾಡಲಾಗಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ – ದಿವ್ಯಜ್ಯೋತಿ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತಗಣ
ಇನ್ನೂ ಪೂರ್ತಿ ಲಾಲ್ ಬಾಗ್‌ನಲ್ಲಿ 135ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಅಲ್ಲದೇ ಪ್ರದೇಶದ ಇತರೆ ಕಡೆಯು ಬೇರೆ ಕಾರ್ಯಕ್ರಮಗಳ ಆಯೋಜನೆ ಮೂಲಕ ಜನರನ್ನ ಅಲ್ಲಲ್ಲಿ ಡೈವರ್ಟ್ ಮಾಡುವ ತಯಾರಿ ಕೂಡ ಆಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಇದನ್ನೂ ಓದಿ: ಸಂಕ್ರಾಂತಿ ಭವಿಷ್ಯ – ಯಾವ ರಾಶಿಯವರಿಗೆ ಏನು?
ಈ ಬಾರಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹ ಕುರಿತು ಆಯೋಜನೆಯಾಗಿರುವ ಪುಷ್ಪಪ್ರದರ್ಶನ, ಜನರನ್ನ ಹೆಚ್ಚು ಆಕರ್ಷಿಸಲಿದ್ದು, 12 ದಿನಗಳ ಕಾಲ ಪ್ರವಾಸಿಗರಿಗೆ ಕಣ್ಮನ ಸೆಳೆಯಲಿದೆ. ಇದನ್ನೂ ಓದಿ: KSRTC ಬಸ್-ಬೈಕ್ ನಡುವೆ ಡಿಕ್ಕಿ; ಇಬ್ಬರು ಸೋಲಿಗ ಯುವಕರು ಸಾವು





