ಗಾಂಧೀನಗರ: ಗುಜರಾತ್‌ನ (Gujarat) ನವಸಾರಿ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ನಿಬಂಧನೆಗಳ ಅಡಿಯಲ್ಲಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನೆಲಮಂಗಲ | ಪ್ರೀತಿ ತಿರಸ್ಕರಿಸಿದ ಯುವತಿ ಹತ್ಯೆಗೆ ಗನ್ ಹಿಡಿದು ಸುತ್ತಿದ ಪುಂಡ ಈಗ ಪೊಲೀಸರ ಅತಿಥಿ
ಜನವರಿ 7 ರಂದು ವನ್ಸ್ಡಾ ಪಟ್ಟಣದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತೆ ರಾತ್ರಿ 10:30 ಕ್ಕೆ ಮನೆಯಿಂದ ಹೊರಬಂದಾಗ, ಆಕೆ ಮತ್ತು ಆಕೆಯ ಕುಟುಂಬಕ್ಕೆ ಪರಿಚಿತರಾದ ಮೂವರು ಮೋಟಾರ್ ಬೈಕ್‌ನಲ್ಲಿ ಬಂದು ಅಪಹರಿಸಿದ್ದಾರೆ.
ಸಂತ್ರಸ್ತೆಯನ್ನು 2.5 ಕಿಲೋಮೀಟರ್ ದೂರದಲ್ಲಿರುವ ಸ್ಥಳಕ್ಕೆ ಕರೆದೊಯ್ದರು. ಅಲ್ಲಿ ಐವರು ಸಹಚರರು ಕಾಯುತ್ತಿದ್ದರು. ಎಂಟು ಮಂದಿ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳಲ್ಲಿ ಏಳು ಮಂದಿ 20-21 ವರ್ಷ ವಯಸ್ಸಿನವರಾಗಿದ್ದರೆ, ಒಬ್ಬ ಅಪ್ರಾಪ್ತ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು, ಎಂಟು ಆರೋಪಿಗಳನ್ನು ಬಂಧಿಸಿ 7 ದಿನಗಳ ಕಸ್ಟಡಿಗೆ ನೀಡಲಾಗಿದೆ ಎಂದು ಚಿಖ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ಗೋಹಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದಿತೆಗೆ ಬಾಳು ಕೊಡುವ ನೆಪದಲ್ಲಿ ಮಗು ಕೊಟ್ಟ – 36 ಲಕ್ಷ ಪಡೆದು ಎಸ್ಕೇಪ್ ಆದ ಮೋಹನ!

