– 6 ತಿಂಗಳ ಬಳಿಕ ಪ್ರಕರಣ ಬೆಳಕಿಗೆ
ದಾವಣಗೆರೆ: ಸೈಬರ್ ವಂಚಕರು ದಾವಣಗೆರೆಯ (Davangere) ಮಹಾನಗರ ಪಾಲಿಕೆಯ (Municipal Corporation) ಇ-ಸ್ವತ್ತು ತಂತ್ರಾಂಶವನ್ನೇ (E Swathu) ಹ್ಯಾಕ್ (Hack) ಮಾಡಿದ್ದಾರೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಹ್ಯಾಕ್ ಮಾಡಿ ಐದು ಸ್ವತ್ತುಗಳಿಗೆ ಅಕ್ರಮವಾಗಿ ‘ಇ-ಆಸ್ತಿ’ ಅನುಮೋದನೆ ನೀಡಿರುವುದು ಗೊತ್ತಾಗಿದೆ. ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್‍ವರ್ಡ್ ಬಳಸಿ ಈ ಕೃತ್ಯ ಎಸಗಲಾಗಿದೆ. ಮಹಾನಗರ ಪಾಲಿಕೆಯ ಇ-ಸ್ವತ್ತು ತಂತ್ರಾಂಶದಲ್ಲಿ ಅಧಿಕಾರಿಗಳ ಗಮನಕ್ಕೆ ಬಾರದೇ ಅನುಮೋದನೆ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಹ್ಯಾಕ್ ಆಗಿರುವುದು ಖಚಿತವಾಗಿದೆ. ಈ ಪ್ರಕರಣ ನಡೆದು 6 ತಿಂಗಳ ಬಳಿಕ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದನ್ನೂ ಓದಿ: ಬೆಂಗಳೂರು | ಸಿಬ್ಬಂದಿಯಿಂದಲೇ ಶಾಲೆಯ ಕೋಟಿ ಕೋಟಿ ಹಣ ಗುಳುಂ – ಇಬ್ಬರು ಅರೆಸ್ಟ್
ಈ ಸಂಬಂಧ ಸಿಇಎನ್ ಠಾಣೆಗೆ ಮಹಾನಗರ ಪಾಲಿಕೆಯ ವಲಯ ಕಚೇರಿ 1ರ ಆಯುಕ್ತ ಕೆ.ನಾಗರಾಜ್ ದೂರು ನೀಡಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ವಲಯ ಕಚೇರಿಗಳಲ್ಲಿ ಇ-ಸ್ವತ್ತು ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಟ್ನಾ, ಕಾಸರಗೋಡು ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

