ಬೆಂಗಳೂರು: ತಮಗೆ Z ಶ್ರೇಣಿಯ ಭದ್ರತೆ ಕೊಡಿ ಎಂದು ಜನಾರ್ದನ ರೆಡ್ಡಿ (Janardhana Reddy) ಬರೆದಿರೋ ಪತ್ರ ನನಗೆ ಬಂದಿಲ್ಲ. ಪತ್ರ ಬಂದರೆ ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ತೀವಿ ಎಂದು ಗೃಹ ಸಚಿವ ಪರಮೇಶ್ವರ್ (G. Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, Z ಶ್ರೇಣಿಯ ಭದ್ರತೆ ಕೊಡಲು ಜನಾರ್ದನ ರೆಡ್ಡಿ ಪತ್ರ ನನಗೆ ಇನ್ನು ಬಂದಿಲ್ಲ. ಆ ಪತ್ರ ಬಂದರೆ ಏನ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ತೀವಿ. ಈಗಾಗಲೇ ಅವರು ಕಂಪ್ಲೆಂಟ್ ಕೊಟ್ಟಿದ್ದಾರೆ. ಶಾಸಕ ಕೂಡಾ ದೂರು ಕೊಟ್ಡಿದ್ದಾರೆ. ಇಬ್ಬರು ದೂರು ಪಡೆದ ತನಿಖೆ ಮಾಡ್ತಾ ಇದ್ದಾರೆ. ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಬಳ್ಳಾರಿ ಗಲಾಟೆ ವೇಳೆ ಫೈರಿಂಗ್ ಕೇಸ್ – ಸತೀಶ್ ರೆಡ್ಡಿ ಖಾಸಗಿ ಗನ್‌ಮ್ಯಾನ್‌ಗಳು ನಾಪತ್ತೆ

ಘಟನೆ ವೇಳೆ (Ballari Political Clashes) ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆ ಎಂಬ ಜನಾರ್ದನ ರೆಡ್ಡಿ ಆರೋಪದ ವಿಚಾರವಾಗಿ, ಈಗ ತನಿಖೆ ನಡೆಯುತ್ತಿದೆ. ತನಿಖೆ ಆದ ಮೇಲೆ ಇದೆಲ್ಲ ಗೊತ್ತಾಗಲಿದೆ. ತನಿಖೆಯಲ್ಲಿ ಬಂದೂಕು, ಹ್ಯಾಂಡ್ ಗ್ರೆನೈಡ್, ಪೆಟ್ರೋಲ್ ಬಾಂಬ್ ಇತ್ತಾ ಎಲ್ಲವೂ ಗೊತ್ತಾಗುತ್ತದೆ. ಅ ಆಂಗಲ್‌ನಲ್ಲಿ ತನಿಖೆ ಆಗುತ್ತದೆ.
ಅಮಾನತದ ಬಳ್ಳಾರಿ ಎಸ್ಪಿ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಬಂದಿದೆ. ಅಮಾನತು ಆಗಿದ್ದಕ್ಕೆ ಬೇಜಾರ್ ಆಗಿ ಬೆಂಗಳೂರಿಗೆ ಬರೋವಾಗ ಅವರ ಸ್ನೇಹಿತರ ಫಾರ್ಮ್ ಹೌಸ್ ನಲ್ಲಿ ರೆಸ್ಟ್ ತಗೊಂಡು ಬೆಂಗಳೂರಿಗೆ ಬಂದಿದ್ದಾರೆ.ಸ್ವಾಭಾವಿಕವಾಗಿ ಅಮಾನತು ಮಾಡಿದಾಗ ಬೇಜಾರ್ ಇರುತ್ತದೆ.
ಮುಂದೆ ಗನ್ ಲೈಸೆನ್ಸ್ ಕೊಡಲು ನಿಯಮ ಬದಲಾವಣೆ ಮಾಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗನ್ ಲೈಸೆನ್ಸ್ ಕೊಡೋಕೆ ಕೇಂದ್ರದ ಮಾನದಂಡಗಳು ಇವೆ. ಕೇಂದ್ರ ಸರ್ಕಾರದ ಮಾನದಂಡದಂತೆ ಗನ್ ಲೈಸೆನ್ಸ್ ಕೊಡಲಾಗ್ತಿದೆ. ಅದನ್ನೇ ರಾಜ್ಯ ಸರ್ಕಾರ ಅಳವಡಿಕೆ ಮಾಡಿಕೊಂಡಿದೆ. ನಮ್ಮ ನಿಯಮ ಇಲ್ಲ, ಅದು ರಾಷ್ಟ್ರೀಯ ಪಾಲಿಸಿ. ಒಂದು ವೇಳೆ ಪಾಲಿಸಿ ಬದಲಾವಣೆ ಮಾಡೋ ಅವಶ್ಯಕತೆ ಇದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದರು. ಇದನ್ನೂ ಓದಿ: Ballari Clash | ಮೃತ ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ನಗದು ಪರಿಹಾರ – ಮನೆ ಭರವಸೆ ಕೊಟ್ಟ ಜಮೀರ್

