ಬಾಲಿವುಡ್‌ನ ನಟಿ ರಾಣಿ ಮುಖರ್ಜಿ ಹಾಗೂ ಅಕ್ಷಯ್ ಕುಮಾರ್ (Akshay Kumar) `ಓ ಮೈ ಗಾಡ್-3′ ಸಿನಿಮಾಗಾಗಿ ಒಂದಾಗ್ತಿದ್ದಾರೆ. 2026 ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅಕ್ಷಯ್ ಹಾಗೂ ರಾಣಿ ಮುಖರ್ಜಿ.

ಅಂದಹಾಗೆ ಓ ಮೈ ಗಾಡ್ ಸಿನಿಮಾ (Oh My God Cinema) ಈಗಾಗ್ಲೇ ಪಾರ್ಟ್-1 ಹಾಗೂ ಪಾರ್ಟ್-2 ಗಳಲ್ಲಿ ಸಖತ್ ಸೌಂಡ್ ಮಾಡಿದೆ. ಇದೀಗ ಓ ಮೈ ಗಾಡ್ ಪಾರ್ಟ್-3 ಸಿನಿಮಾ ಇದೇ ವರ್ಷ ಸೆಟ್ಟೇರಲಿದೆ. ಇದನ್ನೂ ಓದಿ: ಉಣ್ಕೊಂಡ್ ತಿನ್ಕೊಂಡ್ ಇರೋಕೆ ಬಿಗ್‌ಬಾಸ್ ಮನೆಗೆ ಬಂದಿದ್ಯಾ? – ಗಿಲ್ಲಿ ವಿರುದ್ಧ ಅಶ್ವಿನಿ ಕೆಂಡಾಮಂಡಲ

ಅಕ್ಷಯ್ ಕುಮಾರ್ ಜೊತೆಗೆ ರಾಣಿ ಮುಖರ್ಜಿ (Rani Mukerji) ಕೈಜೋಡಿಸುತ್ತಿದ್ದಾರೆ. ಈ ಸುದ್ದಿ ಹೊಸ ವರ್ಷದ ಹೊಸ್ತಿಲಲ್ಲಿ ಸಖತ್ ಸದ್ದು ಮಾಡ್ತಿದೆ. ಜೂನ್ ಅಥವಾ ಜುಲೈನಲ್ಲಿ ಶೂಟಿಂಗ್ ಶುರುವಾಗಲಿದೆ ಅಂತ ಹೇಳಲಾಗ್ತಿದೆ. ಇದನ್ನೂ ಓದಿ: ಕೊನೆಯ ಕ್ಯಾಪ್ಟನ್ಸಿ ಆಟದಲ್ಲಿ ಮೋಸ ಮಾಡಿದ್ರಾ ಧನುಷ್? – ಯಾರಾಗ್ತಾರೆ ಮನೆಯ ಕ್ಯಾಪ್ಟನ್?

ಈ ಸಿನಿಮಾಗೆ ಅಮಿತ್ ರೈ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಬಾರಿ ಮೊದಲೆರಡು ಪಾರ್ಟ್‌ಗಳಿಗಿಂತ ಈ ಸಿನಿಮಾ ಬಿಗ್ ಬಜೆಟ್‌ನಲ್ಲಿ ತಯಾರಾಗಲಿವೆ ಎನ್ನಲಾಗ್ತಿದೆ. ಇನ್ನು ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣ ಇರಲಿದ್ದು, ಸಾಕಷ್ಟು ವಿಶೇಷತೆಗಳಿಂದ ಈ ಚಿತ್ರ ಗಮನ ಸೆಳೆಯಲಿದೆ ಎನ್ನಲಾಗ್ತಿದೆ. ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ – ಬೆಂಗಳೂರು ಮೂಲದ ವ್ಯಕ್ತಿ ಸೇರಿ ಇಬ್ಬರು ಅರೆಸ್ಟ್

