ಬಿಗ್‌ಬಾಸ್ ಕನ್ನಡ ಸೀಸನ್ 12 (Bigg Boss) ಆಲ್‌ಮೋಸ್ಟ್ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈ ನಡುವೆ ಆರೋಪ ಪ್ರತ್ಯಾರೋಪದ ಸುರಿಮಳೆ ಸಾಮಾನ್ಯವಾಗಿದ್ದು ಮತ್ತೆ ಗಿಲ್ಲಿ (Gilli Nata) ಮತ್ತು ಅಶ್ವಿನಿ(Ashwini) ಮಧ್ಯೆ ಕಿತ್ತಾಟ ನಡೆದಿದೆ.
ಈ ವಾರದ ಗಿಲ್ಲಿ ನಾಯಕನಾಗಿದ್ದರೂ ಅಶ್ವಿನಿ ಅವರಿಗೆ ಗಿಲ್ಲಿಯಿಂದಾಗಿ ರಾಣಿ ಪಟ್ಟ ಸಿಕ್ಕಿತ್ತು. ಈ ಮನೆಯಲ್ಲಿರುವ ಅಸಮರ್ಥ ವ್ಯಕ್ತಿ ಅಶ್ವಿನಿ ಎಂದು ಗಿಲ್ಲಿ ಹೇಳಿದ್ದರು. ಆದರೆ ಸೋಮವಾರ ಈ ಮನೆಯಲ್ಲಿರುವ ಅಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಆ ವ್ಯಕ್ತಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ ಎಂದು ಬಿಗ್‌ಬಾಸ್ ಹೇಳಿದ್ದರು.
ಅಶ್ವಿನಿ ವಿರುದ್ಧವಾಗಿ ಗಿಲ್ಲಿ ಮಾತನಾಡಿದ್ದರಿಂದ ಕೊನೆಗೆ ಅವರನ್ನೇ ಆಯ್ಕೆ ಮಾಡುತ್ತಾರೆ. ಇದರಿಂದಾಗಿ ಅಶ್ವಿನಿ ಅವರಿಗೆ ರಾಣಿ ಪಟ್ಟ ಸಿಗುತ್ತದೆ ಮತ್ತು ಇವರಿಬ್ಬರು ಗೇಮ್ಸ್ ಉಸ್ತುವಾರಿ ನಡೆಸುತ್ತಿರುತ್ತಾರೆ. ಗೇಮ್ಸ್ ನಡೆಯುವಾಗ ಇಬ್ಬರ ಮಧ್ಯೆ ಬಹಳ ಸಲ ಗಲಾಟೆ ನಡೆದಿರುತ್ತದೆ. ಇದನ್ನೂ ಓದಿ: ಕೊನೆಯ ಕ್ಯಾಪ್ಟನ್ಸಿ ಆಟದಲ್ಲಿ ಮೋಸ ಮಾಡಿದ್ರಾ ಧನುಷ್? – ಯಾರಾಗ್ತಾರೆ ಮನೆಯ ಕ್ಯಾಪ್ಟನ್?
ಇಲ್ಲಿ ಯಾರು ಹೀರೋ? ಯಾರು ಜೋಕರ್?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/OlX42uidLV
— Colors Kannada (@ColorsKannada) January 2, 2026
ಕ್ಯಾಪ್ಟನ್ಸಿ ಟಾಸ್ಕ್ ಮುಗಿದ ನಂತರವೂ ಬಿಗ್‌ಬಾಸ್ ಮನೆಯ ಒಳಗಡೆ ಇಬ್ಬರು ಪರಸ್ಪರ ಕಿತ್ತಾಡಿದ್ದಾರೆ. ಅಶ್ವಿನಿ ವಿರುದ್ಧ ಗಿಲ್ಲಿ “ಮೇಡಂ ಹೀರೋ ಆಗಲು ಹೊರಟಿದ್ದಾರೆ” ಎಂದು ದೂರಿದ್ದಾರೆ. ಇದಕ್ಕೆ ಅಶ್ವಿನಿ,”ನಾನು ಹೀರೋ ಅಲ್ಲ. ನೀನು ಜೋಕರ್ ಆಗಲು ಹೊರಟಿದ್ದಿಯಾ” ಎಂದಿದ್ದಾರೆ. ಇದಕ್ಕೆ ಗಿಲ್ಲಿ ನಾನು ಜೋಕರ್. ಯಾಕಂದ್ರೆ ನಾನು ಕಾಮಿಡಿಯನ್, ನಿಮಗೆ ಒಂದು ಟಾಸ್ಕ್ ಗೆಲ್ಲೋ ಯೋಗ್ಯತೆ ಇಲ್ಲ” ಎಂದು ತಿರುಗೇಟು ನೀಡಿದ್ದಾರೆ. ಸಿಟ್ಟಾದ ಅಶ್ವಿನಿ,”ನೀನು ಉಣ್ಕೊಂಡ್ ತಿನ್ಕೊಂಡ್ ಇರೋಕೆ ಬಿಗ್‌ಬಾಸ್ ಮನೆಗೆ ಬರಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ಹೀಗೆ ಇಬ್ಬರೂ ಯೋಗ್ಯತೆ ಪ್ರಶ್ನಿಸಿ ಜಗಳವಾಡಿದ್ದಾರೆ.

