Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಶಸ್ತ್ರ ಪಡೆಗಳ ಸಾಮರ್ಥ್ಯ ಬಲಪಡಿಸಲು ಮುಂದಾದ ಸರ್ಕಾರ – 79,000 ಕೋಟಿ ಮೌಲ್ಯದ ಪ್ರಸ್ತಾವನೆಗೆ ಅಸ್ತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಸಶಸ್ತ್ರ ಪಡೆಗಳ ಸಾಮರ್ಥ್ಯ ಬಲಪಡಿಸಲು ಮುಂದಾದ ಸರ್ಕಾರ – 79,000 ಕೋಟಿ ಮೌಲ್ಯದ ಪ್ರಸ್ತಾವನೆಗೆ ಅಸ್ತು

Latest

ಸಶಸ್ತ್ರ ಪಡೆಗಳ ಸಾಮರ್ಥ್ಯ ಬಲಪಡಿಸಲು ಮುಂದಾದ ಸರ್ಕಾರ – 79,000 ಕೋಟಿ ಮೌಲ್ಯದ ಪ್ರಸ್ತಾವನೆಗೆ ಅಸ್ತು

Public TV
Last updated: December 29, 2025 6:10 pm
Public TV
Share
4 Min Read
MQ 9B Sea Guardian Drones
SHARE

– MRSAM ಕ್ಷಿಪಣಿ ಖರೀದಿ, ಅಮೆರಿಕನ್ MQ-9B ಡ್ರೋನ್‌ ಗುತ್ತಿಗೆಗೆ ಒಪ್ಪಿಗೆ

ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯು ಭಾರತದ ರಕ್ಷಣಾ ಸಾಮರ್ಥ್ಯ ಏನೆಂಬುದು ಜಗತ್ತಿಗೇ ತೋರಿಸಿಕೊಟ್ಟಿದೆ. ಯುದ್ಧಭೂಮಿ ನಿಖರತೆ ಪ್ರದರ್ಶಿಸಿದ ಭಾರತದ ಶಕ್ತಿಗೆ ಬದ್ಧವೈರಿ ಹಾಗೂ ಬಲಾಢ್ಯ ರಾಷ್ಟ್ರಗಳೇ ಬೆಕ್ಕಸ ಬೆರಗಾಗಿವೆ. ಹೀಗಾಗಿ ಭಾರತ ರಕ್ಷಣಾ ವಲಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವ ಭಾರತ ಸರ್ಕಾರ ಈಗ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನ ಬಲಪಡಿಸಲು ಮಹತ್ವದ ಪ್ರಸ್ತಾವನೆಯೊಂದಕ್ಕೆ ಅನುಮೋದನೆ ನೀಡಿದೆ.

The Defence Acquisition Council (DAC), chaired by Raksha Mantri Rajnath Singh, has accorded Acceptance of Necessity (AoN) for various proposals of the three Services amounting to a total of about Rs 79,000 crore. During the meeting held on December 29, 2025, AoN was approved for… pic.twitter.com/agLzBmCNiR

— ANI (@ANI) December 29, 2025

ಹೌದು. ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿ (DAC) ಸುಮಾರು 79,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉತ್ಪನ್ನಗಳ ಖರೀದಿ ಮತ್ತು ಉನ್ನತೀಕರಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಯುದ್ಧ ಕಾರ್ಯಾಚರಣೆಯ ಸಾಮರ್ಥ್ಯ ಬಲಪಡಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಡಿಸಿಎ ತಿಳಿಸಿದೆ. ಈ ಯೋಜನೆಯಲ್ಲಿ ನೂತನ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಯೂ ಸೇರಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 31 MQ-9B ಡ್ರೋನ್‌ ಖರೀದಿಗೆ ಅಮೆರಿಕ ಗ್ರೀನ್‌ ಸಿಗ್ನಲ್‌ – ಭಾರತಕ್ಕೆ ಆನೆ ಬಲ – ಡೆಡ್ಲಿ ಡ್ರೋನ್‌ ವಿಶೇಷತೆ ಏನು?

Rajnath Singh

ಯಾವುದಕ್ಕೆಲ್ಲ ಅನುಮೋದನೆ?
* ಸರಿಸುಮಾರು 200 T-90 ಭೀಷ್ಮ ಟ್ಯಾಂಕ್‌ಗಳನ್ನ ಜೀವಿತಾವಧಿ ಉನ್ನತೀಕರಿಸುವುದು, ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸಲು ಕೂಲಂಕುಷ ಪರೀಕ್ಷೆಗೆ ಒಳಪಡಿಸುವುದು. ಈ ಕೆಲಸವನ್ನ ರಕ್ಷಣಾ ಸಾರ್ವಜನಿಕ ವಲಯ ಘಟಕ (DPSU) ನಿರ್ವಹಿಸುತ್ತದೆ.

* ಮಧ್ಯಮ ಗಾತ್ರದ ಲಿಫ್ಟ್ ಹೆಲಿಕಾಪ್ಟರ್ Mi-17 ನ ಜೀವಿತಾವಧಿ ಅಪ್‌ಗ್ರೇಡ್‌ ಮಾಡುವುದು ಜೊತೆಗೆ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವುದು

* ಆಧುನಿಕ ತಂತ್ರಗಾರಿಕೆಯ ಯುದ್ಧ ಕಾರ್ಯಾಚರಣೆಗಾಗಿ ಕಾಮಿಕೇಜ್‌ ಡ್ರೋನ್‌ (ಆತ್ಮಹತ್ಯಾ ಡ್ರೋನ್‌) ಗಳನ್ನ ಖರೀದಿ ಮಾಡುವುದು. ಇದು ಶತ್ರು ನೆಲೆಗಳನ್ನ ನಿಖರವಾಗಿ ಗುರುತಿಸಿ ದಾಳಿ ಮಾಡುತ್ತದೆ.

* ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ತೋರಿದ ಮಧ್ಯಮ-ಶ್ರೇಣಿಯ ಭೂಮಿಯ ಮೇಲ್ಮೈನಿಂದ ಗಾಳಿಗೆ ಚಿಮ್ಮುವ MRSAM ಕ್ಷಿಪಣಿಗಳ ಖರೀದಿಸಲು ಅನುಮೋದನೆ ನೀಡಲಾಗಿದೆ. ಇದು ಏರ್‌ ಮಿಸೈಲ್‌ ಆಗಿದ್ದು, ಕಡಲ ಮತ್ತು ವಾಯುರಕ್ಷಣೆಗೆ ಬಲ ತುಂಬಲಿದೆ. ಇದನ್ನೂ ಓದಿ: ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು – 13 ಮಂದಿ ಸಾವು, 98 ಜನರಿಗೆ ಗಾಯ

operation sindoor India intercepts Pakistans Fatah ballistic missile fired at Delhi

* 200 ಕಿಮೀ ಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿರುವ ಅಸ್ತ್ರ ಮಾರ್ಕ್‌-2 (ಏರ್‌ ಟು ಏರ್‌ ಮಿಸೈಲ್‌) ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿ, ವಾಯುಪಡೆಗೆ ಖರೀದಿಸುವುದು.

* ಇಸ್ರೇಲ್‌ನಿಂದ ಹೆಚ್ಚಿನ ಸಂಖ್ಯೆಯ ಸ್ಪೈಸ್‌-1000 ಬಾಂಬ್‌ಗಳನ್ನ ಖರೀದಿಸೋದಕ್ಕೂ ಅನುಮೋದನೆ ನೀಡಲಾಗಿದೆ. ಇದು ಗಾಳಿಯಿಂದ ಭೂಮಿಗೆ ನಿಗದಿತ ಮಾರ್ಗಸೂಚಿಯಂತೆ ದಾಳಿ ನಡೆಸುವ ಬಾಂಬ್‌ಗಳಾಗಿದೆ.

* 120 ಕಿಮೀ ವ್ಯಾಪ್ತಿಯ ಹೊಸ ಪಿನಾಕಾ ರಾಕೆಟ್‌ (ಬಹು-ಬ್ಯಾರೆಲ್ ರಾಕೆಟ್ ಲಾಂಚರ್) ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಇದರ ಸಾಮರ್ಥ್ಯವನ್ನ 40 ಕಿಮೀ ವ್ಯಾಪ್ತಿಯಿಂದ 80 ಕಿಮೀ ವ್ಯಾಪ್ತಿಗೆ ಅಪ್‌ಗ್ರೇಡ್‌ ಮಾಡುವುದು.

* ಇದರೊಂದಿಗೆ ಏರ್-ಟು-ಏರ್ ರೀಫ್ಯೂಯೆಲರ್‌, ಏರ್‌ಬೋರ್ನ್ ವಾರ್ನಿಂಗ್ ಮತ್ತು ಕಂಟ್ರೋಲ್ ಸಿಸ್ಟಮ್ಸ್ (AWACS) ಸೇರಿದಂತೆ ಹಲವು ರಕ್ಷಣಾ ಉತ್ಪನ್ನಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: 36 ಗಂಟೆಗಳಲ್ಲಿ 80 ಡ್ರೋನ್ ದಾಳಿ – ಭಾರತದ ದಾಳಿಯಲ್ಲಿ ನೂರ್‌ ಖಾನ್‌ ವಾಯುನೆಲೆ ಧ್ವಂಸ; ಸತ್ಯ ಒಪ್ಪಿಕೊಂಡ ಪಾಕ್‌

ಅಮೆರಿಕದ MQ9B ಡ್ರೋನ್‌ ಗುತ್ತಿಗೆಗೆ ಅಸ್ತು
ಅಮೆರಿಕ ನಿರ್ಮಿತ ಎರಡು `MQ9B ಡ್ರೋನ್’ (ಹೈ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (HALE) ಡ್ರೋನ್‌ಗಳನ್ನ ಮೂರು ವರ್ಷಗಳ ಕಾಲ ಗುತ್ತಿಗೆಗೆ ಪಡೆಯಲು ಒಪ್ಪಿಗೆ ಸೂಚಿಸಲಾಗಿದೆ.

MQ 9 a

2023ರಲ್ಲೇ ಆಗಿತ್ತು ಒಪ್ಪಂದ
ಈಗಾಗಲೇ ಭಾರತ 31 ʻMQ9B ಡ್ರೋನ್ʼ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, 2028ಕ್ಕೆ ವಿತರಣೆ ಶುರುವಾಗುತ್ತದೆ. 2023ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ 31 MQ-9B ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲು ಪ್ರಸ್ತಾಪಿಸಿತ್ತು. ಭಾರತ ಖರೀದಿಸಲಿರುವ 31 ಡ್ರೋನ್‌ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಬಳಸಲಿದ್ದು, ಇದರ ಅಂದಾಜು ವೆಚ್ಚ 3.99 ಶತಕೋಟಿ ಡಾಲರ್‌ ನಷ್ಟು ಆಗಲಿದೆ.

ಇದಲ್ಲದೇ ಭಾರತ ಸರ್ಕಾರವು 31 MQ-9B ಸ್ಕೈ ಗಾರ್ಡಿಯನ್ ಡ್ರೋನ್ ಖರೀದಿಸಲು ವಿನಂತಿಸಿದೆ. ಇದರೊಂದಿಗೆ 161 ಎಂಬೆಡೆಡ್ ಗ್ಲೋಬಲ್ ಪೊಸಿಷನಿಂಗ್ ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್ಸ್ (EGIs), 35 L3 RIO ಗ್ರಾಂಡೆ ಕಮ್ಯುನಿಕೇಷನ್ಸ್ ಇಂಟೆಲಿಜೆನ್ಸ್ ಸೆನ್ಸರ್ ಸೂಟ್ಸ್‌, 170 AGM-114R ಹೆಲ್‌ಫೈರ್ ಕ್ಷಿಪಣಿಗಳು, 16 M36E9 ಹೆಲ್ಫೈರ್ ಕ್ಯಾಪ್ಟಿವ್ ಏರ್ ಟ್ರೈನಿಂಗ್ ಕ್ಷಿಪಣಿಗಳು (CATM), ಲೈವ್ ಫ್ಯೂಜ್‌ ಜೊತೆಗೆ 310 ಜಿಬಿಯು-39B/B ಲೇಸರ್ ಸಣ್ಣ ವ್ಯಾಸದ ಬಾಂಬ್‌ಗಳು (LSDB) ಸೇರಿದಂತೆ ಬಿಡಿ ಭಾಗಗಳು ಸೇರಿದಂತೆ ಹಲವು, ದುರಸ್ತಿ ಉಪಕರಣಗಳನ್ನ ಖರೀದಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.

ಆಕ್ರಮಣಕಾರಿ ಡ್ರೋನ್‌ ವಿಶೇಷತೆ ಏನು?
ವಿಶ್ವದಾದ್ಯಂತ ಆಕ್ರಮಣಕಾರಿ ಕಾರ್ಯಾಚರಣೆಗೆ ಈ ಡ್ರೋನ್‌ ಹೆಸರು ವಾಸಿಯಾಗಿದೆ. ಲೇಸರ್-ನಿರ್ದೇಶಿತ 4 ಹೆಲ್‌ಫೈರ್ ಕ್ಷಿಪಣಿಗಳು ಮತ್ತು 450 ಕೆಜಿ ಬಾಂಬ್‌ಗಳನ್ನು ಸಹ ಸಾಗಿಸಬಲ್ಲದು. ಭಾರತ ಮತ್ತು ಚೀನಾದ ಗಡಿ ರೇಖೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಜೊತೆಗೆ ಹಿಂದೂ ಮಹಾ ಸಾಗರ ಪ್ರದೇಶಗಳಲ್ಲಿ ಇದು ಸಮರ್ಥವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಶತ್ರು ಸೇನೆಗಳ ಆಕ್ರಮಣದ ಬಗ್ಗೆ ಎಚ್ಚರಿಸುತ್ತದೆ. ಸತತ 40 ಗಂಟೆ ಹಾರಾಡುವ ಸಾಮರ್ಥ್ಯ ಹೊಂದಿದೆ.

ಡ್ರೋನ್‌ನಿಂದ ಭಾರತಕ್ಕೆ ಏನು ಪ್ರಯೋಜನ?
MQ9B ಡ್ರೋನ್ ಖರೀದಿಯಿಂದ ಭಾರತ ತನ್ನ ಸಾಮರ್ಥ್ಯವನ್ನ ಸುಧಾರಿಸಿಕೊಳ್ಳಲಿದೆ. ಸಮುದ್ರ ಮಾರ್ಗಗಳಲ್ಲಿ ಮಾನವ ರಹಿತ ಗಸ್ತು ಸಕ್ರೀಯಗೊಳಿಸುತ್ತದೆ. ಮಿಲಿಟರಿ ವ್ಯವಸ್ಥೆಯಲ್ಲಿ ಮತ್ತಷ್ಟು ಆಧುನಿಕತೆ ತರಲಿದೆ. ಸಶಸ್ತ್ರ ಪಡೆಗಳ ಬಲ ಮತ್ತಷ್ಟು ಹೆಚ್ಚಾಗಲಿದೆ.

TAGGED:DRDOIAFindiaMQ9B DronesMRSAM Missilesnarendra modirajnath singhUSAಐಎಂಎಫ್ಡಿಆರ್‌ಡಿಓನರೇಂದ್ರ ಮೋದಿಭಾರತರಕ್ಷಣಾ ಒಪ್ಪಂದರಾಜನಾಥ್ ಸಿಂಗ್
Share This Article
Facebook Whatsapp Whatsapp Telegram

Cinema news

CM Nandini
ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು
Bengaluru City Cinema Crime Latest Main Post TV Shows
Raj B Shetty 1
ರಾಜ್ ಬಿ ಶೆಟ್ಟಿ ನಟನೆಯ ರಕ್ಕಸಪುರದೊಳ್ ರಿಲೀಸ್ ಡೇಟ್ ಫಿಕ್ಸ್
Cinema Latest Sandalwood Top Stories
K POP Kannada Movie
ಕೊರಿಯನ್ ಪಾಪ್ ಸಂಸ್ಕೃತಿ ಬಿಂಬಿಸುವ ಕನ್ನಡದ ʻಕೆ-ಪಾಪ್ʼ
Cinema Latest Sandalwood
Prabhas
ಸಂಕ್ರಾಂತಿ ಹಬ್ಬಕ್ಕೆ ʻದಿ ರಾಜಾ ಸಾಬ್ʼ ಅಬ್ಬರ; ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಪ್ರಭಾಸ್
Cinema Latest South cinema

You Might Also Like

Kogilu layout Demolition
Bengaluru City

ಸಂತ್ರಸ್ತರ ಅಹವಾಲು ಆಲಿಸಿದ ಡಿಕೆಶಿ – ಹೈಕಮಾಂಡ್ ಒತ್ತಡಕ್ಕೆ ಮಣೀತಾ ʻಕೈʼ ಸರ್ಕಾರ?

Public TV
By Public TV
3 minutes ago
kea
Bengaluru City

ಯುಜಿ ವೈದ್ಯಕೀಯ ಸೀಟು ಹಂಚಿಕೆ ಪೂರ್ಣ – ಎಲ್ಲ ವೈದ್ಯಕೀಯ ಸೀಟು ಹಂಚಿಕೆ: ಕೆಇಎ

Public TV
By Public TV
3 minutes ago
bengaluru drugs
Bengaluru City

ಬೆಂಗ್ಳೂರಿನ ಮೂರು ಕಡೆ ಮಾದಕ ವಸ್ತು ಫ್ಯಾಕ್ಟರಿ ಪತ್ತೆ ಕೇಸ್ – ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ ಸಸ್ಪೆಂಡ್

Public TV
By Public TV
2 hours ago
TB Dam Janardhana Reddy 2
Bellary

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಅಳವಡಿಕೆ ಪರಿಶೀಲಿಸಿದ ಜನಾರ್ದನ ರೆಡ್ಡಿ

Public TV
By Public TV
2 hours ago
siddaramaiah 1 3
Bengaluru City

Kogilu layout Demolition | ಅರ್ಹರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೀರ್ಮಾನ: ಸಿದ್ದರಾಮಯ್ಯ

Public TV
By Public TV
2 hours ago
NAMMA METRO 4
Bengaluru City

ನ್ಯೂ ಇಯರ್‌ಗೆ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಡಿ.31ರಂದು ಮೂರು ಮಾರ್ಗದಲ್ಲಿ ಸೇವಾ ಸಮಯ ವಿಸ್ತರಣೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?