– ವರ್ಷಕ್ಕೆ ಎರಡು ಲಕ್ಷ, ಕಳೆದ ಐದು ವರ್ಷದಲ್ಲಿ ಒಂಭತ್ತು ಲಕ್ಷಕ್ಕೂ ಅಧಿಕ ಜನರಿಂದ ನಿರ್ಧಾರ
ನವದೆಹಲಿ: ಭಾರತೀಯ ಪೌರತ್ವವನ್ನು (Indian Citizenship) ತ್ಯಜಿಸುವವರ ಸಂಖ್ಯೆಯು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. 2022 ರಿಂದ ಪ್ರತಿ ವರ್ಷ 2 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ನಾಗರಿಕತ್ವವನ್ನು ತ್ಯಜಿಸುತ್ತಿದ್ದಾರೆ. 2011 ರಿಂದ 2024ರವರೆಗೆ ಸುಮಾರು 20.6 ಲಕ್ಷ ಜನರು ಭಾರತೀಯ ನಾಗರಿಕತ್ವ ಬಿಟ್ಟಿದ್ದಾರೆ. ಇದರಲ್ಲಿ ಕಳೆದ ಐದು ವರ್ಷಗಳಲ್ಲಿ (2020 ರಿಂದ) 9 ಲಕ್ಷಕ್ಕೂ ಹೆಚ್ಚು ಜನರು ತ್ಯಜಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಈ ಸಂಖ್ಯೆ 58,000ಕ್ಕೆ ಇಳಿದಿದ್ದರೂ, ನಂತರದ ವರ್ಷಗಳಲ್ಲಿ ತೀವ್ರವಾಗಿ ಹೆಚ್ಚಿದೆ. 2022 ರಲ್ಲಿ 2.25 ಲಕ್ಷ, 2023 ರಲ್ಲಿ 2.16 ಲಕ್ಷ ಮತ್ತು 2024ರಲ್ಲಿ 2.06 ಲಕ್ಷ ಜನರು ನಾಗರಿಕತ್ವ ತ್ಯಜಿಸಿದ್ದಾರೆ. 2022ರಿಂದೀಚೆಗೆ ಒಟ್ಟು 6 ಲಕ್ಷಕ್ಕೂ ಹೆಚ್ಚು ಜನರು ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಲ್ಯಾಂಡಿಂಗ್ ಗೇರ್ ಸಮಸ್ಯೆ, ಟೈರ್ ಸ್ಫೋಟ – ಕೊಚ್ಚಿಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾ, ವಿದೇಶಾಂಗ ಸಚಿವಾಲಯವು ಲಿಖಿತ ಉತ್ತರಗಳಲ್ಲಿ ಕಾರಣಗಳು ವೈಯಕ್ತಿಕ ಮತ್ತು ವ್ಯಕ್ತಿಗೆ ಮಾತ್ರ ತಿಳಿದಿವೆ. ಅವರಲ್ಲಿ ಹಲವರು ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ಪಡೆಯಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಭಾರತದಲ್ಲಿ ದ್ವಿನಾಗರಿಕತ್ವಕ್ಕೆ ಅವಕಾಶವಿಲ್ಲದ ಕಾರಣ, ವಿದೇಶದಲ್ಲಿ ದೀರ್ಘಕಾಲ ನೆಲೆಸಿದವರು ಪೂರ್ಣ ಹಕ್ಕುಗಳನ್ನು (ಮತದಾನ, ಸಾಮಾಜಿಕ ಭದ್ರತೆ, ಸಾರ್ವಜನಿಕ ಉದ್ಯೋಗ, ಅನಿಯಮಿತ ವಾಸ್ತವ್ಯ) ಪಡೆಯಲು ವಿದೇಶಿ ನಾಗರಿಕತ್ವ ಅಗತ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
2014 ರಿಂದ ಸುಮಾರು 23,000 ಭಾರತೀಯ ಮಿಲಿಯನೇರ್‌ಗಳು ದೇಶವನ್ನು ತೊರೆದಿದ್ದಾರೆ ಎಂದು ಮಾರ್ಗನ್ ಸ್ಟಾನ್ಲಿಯ ಡೇಟಾದಲ್ಲಿ ಉಲ್ಲೇಖಿಸಿದೆ. ಹೆಚ್ಚು ಆಕರ್ಷಕವಾದ ಯುಎಸ್, ಯುಕೆ ಅಥವಾ ಕೆನಡಾದ ಪಾಸ್‌ಪೋರ್ಟ್‌ಗಾಗಿ ಭಾರತೀಯರು ತಮ್ಮ ಪಾಸ್‌ಪೋರ್ಟ್‌ಗಳನ್ನು ತ್ಯಜಿಸಲು ಒಂದು ಕಾರಣವೆಂದರೆ ಭಾರತವು ದ್ವಿಪೌರತ್ವವನ್ನು ಅನುಮತಿಸುವುದಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳ 16 ಮಾನದಂಡ ಆಧರಿಸಿ 21 ಲಕ್ಷ ಬಿಪಿಎಲ್ ಕಾರ್ಡ್‌ಗಳು ಡಿಲೀಟ್
ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ವೀಸಾ-ಮುಕ್ತ ಪ್ರಯಾಣ ಮತ್ತು ಸೀಮಿತ ಆರ್ಥಿಕ ಹಕ್ಕುಗಳನ್ನು ನೀಡುತ್ತದೆಯಾದರೂ, ರಾಜಕೀಯ ಹಕ್ಕುಗಳು (ಮತದಾನ, ಚುನಾವಣೆ ಸ್ಪರ್ಧೆ, ಸಾಂವಿಧಾನಿಕ ಹುದ್ದೆಗಳು) ಇಲ್ಲ. ಹೀಗಾಗಿ ಅನೇಕರು ನಾಗರಿಕತ್ವ ತ್ಯಜಿಸುವ ನಿರ್ಧಾರಕ್ಕೆ ಬರುತ್ತಾರೆ.

