– ಇಂಡಿಗೋ ಪ್ರಯಾಣಿಕರಿಗೆ 10,000 ರೂ. ಮೌಲ್ಯದ ಕೂಪನ್ ಕಾರ್ಡ್
ನವದೆಹಲಿ: ದೇಶಾದ್ಯಂತ ಸಾವಿರಾರು ಇಂಡಿಗೋ (Indigo) ವಿಮಾನಗಳ ರದ್ಧತಿಯಿಂದಾಗಿ ಅನೇಕ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಈ ಸಂಬಂಧ ವಿಮಾನಯಾನ ಸುರಕ್ಷತೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದ ನಾಲ್ವರು ಅಧಿಕಾರಿಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅಮಾನತುಗೊಳಿಸಿದೆ.
ಡಿಜಿಸಿಎ ಹೇಳಿಕೆ ಬಿಡುಗಡೆ ಮಾಡಿದ್ದು, ಇಂಡಿಗೋದ ವಿಮಾನ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಎಫ್‌ಒಐಗಳು ಹೊಂದಿದ್ದರು. ಆದರೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಈ ಹಿನ್ನೆಲೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಇಂಡಿಗೋ ಸಮಸ್ಯೆ ಇದ್ದಾಗಲೂ ಟಿಕೆಟ್ ದರ 39 ಸಾವಿರಕ್ಕೆ ಏರಿದ್ದು ಹೇಗೆ – ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ
ಈ ನಡುವೆ ಇಂಡಿಗೋ ವಿಮಾನ ರದ್ಧತಿ ಹಾಗೂ ಸಂಚಾರ ವ್ಯತ್ಯಯದಿಂದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಕೂಪನ್ ಕಾರ್ಡ್ 10,000 ರೂ. ಮೌಲ್ಯದ ಪರಿಹಾರವನ್ನು ಘೋಷಿಸಿದೆ. ಈ ಕೂಪನ್ ಕಾರ್ಡ್‌ಗಳನ್ನು ಮುಂದಿನ 12 ತಿಂಗಳವರೆಗೆ ಇಂಡಿಗೋದಲ್ಲಿ ಪ್ರಯಾಣಿಸುವಾಗ ಬಳಸಬಹುದು ಎಂದಿದೆ.
ಇಂಡಿಗೋ ಸಿಇಓ ಎಲ್ಬರ್ಸ್ ಡಿಜಿಸಿಎ ರಚಿಸಿದ ನಾಲ್ವರು ಸದಸ್ಯರ ಸಮಿತಿಯ ಮುಂದೆ ವಿಚಾರಣೆ ಎರಡನೇ ಬಾರಿಗೆ ಹಾಜರಾದರು. ಜಂಟಿ ಮಹಾನಿರ್ದೇಶಕ ಸಂಜಯ್, ಉಪಮಹಾನಿರ್ದೇಶಕ ಅಮಿತ್ ಗುಪ್ತಾ, ಹಿರಿಯ ವಿಮಾನ ಕಾರ್ಯಾಚರಣೆ ಇನ್ಸ್ಪೆಕ್ಟರ್ ಕಪಿಲ್ ಮಾಂಗ್ಲಿಕ್ ಮತ್ತು ಎಫ್‌ಒಐ ಲೋಕೇಶ್ ರಾಂಪಾಲ್ ಸಮಿತಿಯ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಿದರು.ಇದನ್ನೂ ಓದಿ: ಇಂಡಿಗೋ ಸಮಸ್ಯೆ – 9,55,591 ಟಿಕೆಟ್ ರದ್ದು, 827 ಕೋಟಿ ರೂ. ರೀ ಫಂಡ್

