ಮಂಡ್ಯ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ಆರಂಭಗೊಂಡ ಬಿ-ಖಾತಾ (B Khata) ಅಭಿಯಾನದ ಬಳಿಕ ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಕರ ವಸೂಲಾತಿಯೂ ಉತ್ತಮವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಪ್ರಗತಿ ಸಾಧಿಸಿದೆ.
ಜಿಲ್ಲೆಯ 7 ತಾಲೂಕುಗಳ ಸ್ಥಳೀಯ ಸಂಸ್ಥೆಗಳ ಪೈಕಿ ಎರಡು ನಗರಸಭೆ, ಐದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿ ಒಳಗೊಂಡಿವೆ. ಪ್ರಸ್ತುತ 2025-26ನೇ ಸಾಲಿನ 31.51 ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಲ್ಲಿ 25.34 ಕೋಟಿ ರೂ. ಸಂಗ್ರಹವಾಗಿದ್ದು, ಒಟ್ಟಾರೆ ಶೇಕಡವಾರು 80.43ರಷ್ಟು ಪ್ರಗತಿ ಸಾಧಿಸಿವೆ. ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 1 ಲಕ್ಷ ದಂಡ, 3 ವರ್ಷ ಜೈಲು – ರಾಜ್ಯ ಸರ್ಕಾರ ಮಸೂದೆ ಮಂಡನೆ
ಶ್ರೀರಂಗಪಟ್ಟಣ ಮೊದಲ ಸ್ಥಾನ:
ಕರ ವಸೂಲಾತಿಯಲ್ಲಿ ಶ್ರೀರಂಗಪಟ್ಟಣ ಪುರಸಭೆ(ಶೇ.118.52) ಮೊದಲ ಸ್ಥಾನದಲ್ಲಿದ್ದರೆ ಪಾಂಡವಪುರ ಪುರಸಭೆ(ಶೇ.56.26) ಕೊನೇ ಸ್ಥಾನದಲ್ಲಿದೆ. ಉಳಿದಂತೆ ಬೆಳ್ಳೂರು ಪಟ್ಟಣ ಪಂಚಾಯಿತಿ(ಶೇ.100.56) ಎರಡನೇ ಸ್ಥಾನ ಪಡೆದಿದೆ. ಮಳವಳ್ಳಿ(ಶೇ.63.50ರಷ್ಟು) ಹಾಗೂ ಕೆ.ಆರ್.ಪೇಟೆ(ಶೇ.65.12ರಷ್ಟು) ಪುರಸಭೆಗಳು ತೆರಿಗೆ ವಸೂಲಾತಿಯಲ್ಲಿ ಹಿಂದುಳಿದಿವೆ. ಮಂಡ್ಯ(ಶೇ.78.50ರಷ್ಟು) ಹಾಗೂ ಮದ್ದೂರು(ಶೇ.93.84ರಷ್ಟು) ನಗರಸಭೆಗಳು ಉತ್ತಮವಾಗಿದ್ದು, ನಾಗಮಂಗಲ ಪುರಸಭೆ(ಶೇ.90.28ರಷ್ಟು) ಹಾಗೂ ಉತ್ತಮ ಸ್ಥಿತಿಯಲ್ಲಿವೆ.
ಒಟ್ಟು 86,303 ಆಸ್ತಿಗಳು:
ಎ ಮತ್ತು ಬಿ ಖಾತಾ ಸೇರಿದಂತೆ ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 86,303 ಆಸ್ತಿಗಳು ಒಳಗೊಂಡಿವೆ. ಅದರಲ್ಲಿ ಎ-ಖಾತಾ 77,808 ಇದ್ದರೆ, ಬಿ ಖಾತಾ 8,495 ಆಸ್ತಿಗಳಿವೆ. ಮಂಡ್ಯ ನಗರಸಭೆ 33,660, ಮದ್ದೂರು 7,642, ಮಳವಳ್ಳಿ 8,486, ಶ್ರೀರಂಗಪಟ್ಟಣ 8,792, ಕೆ.ಆರ್.ಪೇಟೆ 7,879, ಪಾಂಡವಪುರ 6,647, ನಾಗಮಂಗಲ 9,218 ಹಾಗೂ ಬೆಳ್ಳೂರು 3,979 ಆಸ್ತಿಗಳನ್ನೊಳಗೊಂಡಿವೆ. ಇದನ್ನೂ ಓದಿ: ಬಿಡಿಎ ಕಾರ್ಯಾಚರಣೆ – ಸುಮಾರು 140 ಕೋಟಿ ರೂ. ಆಸ್ತಿ ವಶ
31.51 ಕೋಟಿ ರೂ. ಸಂಗ್ರಹ ಗುರಿ:
ಪ್ರಸ್ತುತ 2025-26ನೇ ಸಾಲಿಗೆ 31.51 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ಮಂಡ್ಯ ನಗರಸಭೆ 188.5 ಲಕ್ಷ ರೂ., ಮದ್ದೂರು 241.50 ಲಕ್ಷ ರೂ., ಮಳವಳ್ಳಿ 162 ಲಕ್ಷ ರೂ., ಶ್ರೀರಂಗಪಟ್ಟಣ 154.50 ಲಕ್ಷ ರೂ., ಕೆ.ಆರ್.ಪೇಟೆ 243.94 ಲಕ್ಷ ರೂ., ಪಾಂಡವಪುರ 153.28 ಲಕ್ಷ ರೂ., ನಾಗಮಂಗಲ 136.88 ಲಕ್ಷ ರೂ. ಹಾಗೂ ಬೆಳ್ಳೂರು ಪಪಂ 168.76 ಲಕ್ಷ ರೂ. ಸಂಗ್ರಹ ಗುರಿ ಹೊಂದಲಾಗಿದೆ.
25.34 ಕೋಟಿ ರೂ. ಸಂಗ್ರಹ:
8 ನಗರ ಸ್ಥಳೀಯ ಸಂಸ್ಥೆಗಳಿಂದ ಇದುವರೆಗೂ 25.34 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಮಂಡ್ಯ ನಗರಸಭೆ 14.79 ಕೋಟಿ ರೂ., ಮದ್ದೂರು 228.67 ಲಕ್ಷ ರೂ., ಮಳವಳ್ಳಿ 105.09 ಲಕ್ಷ ರೂ., ಶ್ರೀರಂಗಪಟ್ಟಣ 183.12 ಲಕ್ಷ ರೂ., ಕೆ.ಆರ್.ಪೇಟೆ 158.85 ಲಕ್ಷ ರೂ., ಪಾಂಡವಪುರ 86.24 ಲಕ್ಷ ರೂ., ನಾಗಮಂಗಲ 123.57 ಲಕ್ಷ ರೂ. ಹಾಗೂ ಬೆಳ್ಳೂರು ಪಪಂ 169.70 ಲಕ್ಷ ರೂ. ಸಂಗ್ರಹ ಮಾಡಲಾಗಿದೆ.
6.16 ಕೋಟಿ ರೂ. ಬಾಕಿ:
ಇನ್ನೂ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಪ್ರಸ್ತುತ ಸಾಲಿನಲ್ಲಿ 6.16 ಕೋಟಿ ರೂ. ತೆರಿಗೆ ಬಾಕಿ ಇದೆ. ಮಂಡ್ಯ ನಗರಸಭೆ 405.34 ಲಕ್ಷ ರೂ., ಮದ್ದೂರು 15.02 ಲಕ್ಷ ರೂ., ಮಳವಳ್ಳಿ 60.40 ಲಕ್ಷ ರೂ., ಕೆ.ಆರ್.ಪೇಟೆ 85.09 ಲಕ್ಷ ರೂ., ಪಾಂಡವಪುರ 67.04 ಲಕ್ಷ ರೂ., ನಾಗಮಂಗಲ 13.31 ಲಕ್ಷ ರೂ. ಬಾಕಿ ಉಳಿಸಿಕೊಂಡಿವೆ. ಆದರೆ ಶ್ರೀರಂಗಪಟ್ಟಣ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯ್ತಿ ಹೆಚ್ಚುವರಿ ಕರ ವಸೂಲಿ ಮಾಡಿದ್ದು, ಗುರಿ ಸಾಧಿಸಿವೆ.

