Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮತಕಳ್ಳತನ ಮಾಡಿದ್ದು ಇಂದಿರಾ ಗಾಂಧಿ, ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ನಿಂದ ರಾಜ್ಯಪಾಲ ಹುದ್ದೆ: ನಿಶಿಕಾಂತ್‌ ದುಬೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮತಕಳ್ಳತನ ಮಾಡಿದ್ದು ಇಂದಿರಾ ಗಾಂಧಿ, ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ನಿಂದ ರಾಜ್ಯಪಾಲ ಹುದ್ದೆ: ನಿಶಿಕಾಂತ್‌ ದುಬೆ

Latest

ಮತಕಳ್ಳತನ ಮಾಡಿದ್ದು ಇಂದಿರಾ ಗಾಂಧಿ, ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ನಿಂದ ರಾಜ್ಯಪಾಲ ಹುದ್ದೆ: ನಿಶಿಕಾಂತ್‌ ದುಬೆ

Public TV
Last updated: December 9, 2025 8:35 pm
Public TV
Share
2 Min Read
BJP MP Nishikant Dubey
SHARE

ನವದೆಹಲಿ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿದ ಕಾಂಗ್ರೆಸ್‌ (Congress) ವಿಶೇಷ ಸಮಗ್ರ ಪರಿಷ್ಕರಣೆ (SIR) ಮಾತನಾಡುತ್ತಿದೆ. ತಮಗೆ ಬೇಕಾದವರನ್ನು ಸಂವಿಧಾನಿಕ ಹುದ್ದೆಯಲ್ಲಿ ಕೂರಿಸಿ ಕಾಂಗ್ರೆಸ್‌ ಆಡಳಿತ ನಡೆಸಿತ್ತು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ (Nishikant Dubey) ಕಿಡಿಕಾರಿದರು.

ಲೋಕಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತಂತೆ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ನಿಶಿಕಾಂತ್‌ ದುಬೆ ಮಾತನಾಡಿ ಕಾಂಗ್ರೆಸ್‌ ಯಾವ ರೀತಿ ವ್ಯವಸ್ಥೆಯನ್ನು ಈ ಹಿಂದೆ ಬದಲಾಯಿಸಿತ್ತು ಎಂದು ದಾಖಲೆಯನ್ನು ಮುಂದಿಟ್ಟು ತಿರುಗೇಟು ನೀಡಿದರು.

ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ಇಂದಿರಾ ಗಾಂಧಿ (Indira Gandhi) ಮತಕಳ್ಳತನ ಮಾಡಿ ಚುನಾವಣೆಯಲ್ಲಿ ಜಯಗಳಿಸಿದರು. ತನ್ನ ವಿರುದ್ಧ ಕೋರ್ಟ್‌ ತೀರ್ಪು ಬಂದಾಗ ಮೂವರು ನ್ಯಾಯಾಧೀಶರನ್ನು ಬೈಪಾಸ್‌ ಮಾಡಿ ಒಬ್ಬರನ್ನೇ 8.5 ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಿದ್ದು ಕಾಂಗ್ರೆಸ್‌ ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನದ 42ನೇ ತಿದ್ದುಪಡಿಗೆ ಕಾರಣವಾದ 1976 ರ ಸ್ವರಣ್ ಸಿಂಗ್ ಸಮಿತಿಯನ್ನು ಉಲ್ಲೇಖಿಸಿದ ದುಬೆ, ಸ್ವರಣ್ ಸಿಂಗ್ ಸಮಿತಿಯನ್ನು 1976 ರಲ್ಲಿ ರಚಿಸಿ ರಾಷ್ಟ್ರಪತಿ ಅವರ ಇದ್ದ ಅಧಿಕಾರವನ್ನು ಕಿತ್ತುಕೊಂಡಿರಿ. ರಾಷ್ಟ್ರಪತಿಗಳು ರಬ್ಬರ್‌ ಸ್ಟ್ಯಾಂಪ್‌ ಆದರು. 42ನೇ ತಿದ್ದುಪಡಿ ಮಾಡುವ ಮೂಲಕ ಸಂವಿಧಾನದ ಎಲ್ಲಾ ಸಂಸ್ಥೆಗಳನ್ನು ಕೊನೆಗೊಳಿಸಿದ್ದು ಕಾಂಗ್ರೆಸ್‌ ಎಂದು ಕಿಡಿಕಾರಿದರು. ಇದನ್ನೂ ಓದಿ: ಮತ ಕಳ್ಳತನಕ್ಕಿಂತ ದೊಡ್ಡ ರಾಷ್ಟ್ರ ವಿರೋಧಿ ಕೃತ್ಯ ಇನ್ನೊಂದಿಲ್ಲ: ರಾಹುಲ್‌

 

ಬಿಜೆಪಿ ಚುನಾವಣಾ ಆಯೋಗವನ್ನು ವಶಪಡಿಸಿಕೊಂಡಿದೆ ಎಂದು ರಾಹುಲ್‌ (Rahul Gandhi) ಆರೋಪಕ್ಕೆ ನಿಶಿಕಾಂತ್‌ ದುಬೆ ಈ ಹಿಂದೆ ಕಾಂಗ್ರೆಸ್‌ ನಿವೃತ್ತಿಯ ಬಳಿಕ ಚುನಾವಣಾ ಆಯುಕ್ತರಿಗೆ ಸರ್ಕಾರದಲ್ಲಿ ಯಾವ ರೀತಿ ಹುದ್ದೆ ನೀಡಿತ್ತು ಎಂಬುದರ ಬಗ್ಗೆ ಮಾತನಾಡಿದರು.

ಕಾಂಗ್ರೆಸ್‌ ಈಗ ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದೆ. ದೇಶದ ಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ನಿವೃತ್ತರಾದಾಗ ಬಳಿಕ ಅವರನ್ನು ಸುಡಾನ್‌ನ ರಾಯಭಾರಿಯಾಗಿ ನೇಮಿಸಲಾಗುತ್ತದೆ. ನಿವೃತ್ತಿಯ ನಂತರ ವಿ.ಎಸ್. ರಮಾದೇವಿ ಹಿಮಾಚಲ ಪ್ರದೇಶದ ರಾಜ್ಯಪಾಲರಾಗುತ್ತಾರೆ. ಟಿ.ಎನ್. ಶೇಷನ್ ಅವರು ನಿವೃತ್ತಿಯ ನಂತರ ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಕಣಕ್ಕೆ ಇಳಿಯುತ್ತಾರೆ. ಎಂ.ಎಸ್. ಗಿಲ್ ನಿವೃತ್ತರಾದ ನಂತರ 10 ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ನೀವು ಯಾವ ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದೀರಿ? ನೀವು ಯಾವ ನ್ಯಾಯದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್ ವಂದೇ ಮಾತರಂ ವಿಭಜಿಸದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ: ಅಮಿತ್ ಶಾ

ನೀವು ಸಿಬಿಐ ವಿರುದ್ಧ ಈಗ ಮಾತನಾಡುತ್ತಿದ್ದೀರಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಭದ್ರತಾ ಅಧಿಕಾರಿಯಾಗಿದ್ದ ಅಶ್ವನಿ ಕುಮಾರ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ಮಾಡಲಾಯಿತು. ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಅವರೊಂದಿಗೆ ಪ್ರತಿದಿನ ಭೇಟಿಯಾಗುತ್ತಿದ್ದ ಮತ್ತು ಕಾಂಗ್ರೆಸ್ ನಾಯಕರು ಯಾವಾಗ ಮತ್ತು ಎಲ್ಲಿಗೆ ಹೋದರು ಎಂಬ ವಿವರಗಳನ್ನು ಒಳಗೊಂಡ ಡೈರಿಯನ್ನು ಹಸ್ತಾಂತರ ಮಾಡುತ್ತಿದ್ದ ರಂಜಿತ್ ಸಿನ್ಹಾ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು ಎಂದು ದೂರಿದರು.

ಐಎಎಸ್, ಐಪಿಎಸ್ ಮತ್ತು ಅಖಿಲ ಭಾರತ ಸೇವೆಗಳ ಅಧಿಕಾರಿಗಳನ್ನು ದೇಶಕ್ಕೆ ನೀಡುವ ಯುಪಿಎಸ್‌ಸಿ ಸಂಸ್ಥೆಗೆ ಕಾಂಗ್ರೆಸ್ ಕಾರ್ಯಕರ್ತ ಬಟುಕ್ ಸಿಂಗ್ ಅವರನ್ನು 10 ವರ್ಷಗಳ ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಈ ಮೂಲಕ ಯುಪಿಎಸ್‌ಸಿ ಸಂಸ್ಥೆಯನ್ನೇ ಕಾಂಗ್ರೆಸ್‌ ಹಾಳು ಮಾಡಿತ್ತು ಎಂದು ಆಕ್ರೋಶ ಹೊರಹಾಕಿದರು.

TAGGED:congressNishikant DubeyRahul Gandhisirಕಾಂಗ್ರೆಸ್ನಿಶಿಕಾಂತ್ ದುಬೆರಾಹುಲ್ ಗಾಂಧಿ
Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ತುಳುನಾಡಿನ ದೈವಕ್ಕೆ ಅಪಮಾನ – ಕೇಸ್ ರದ್ದಿಗೆ ರಣವೀರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾ.9ಕ್ಕೆ ಮುಂದೂಡಿಕೆ
Cinema Latest Top Stories
Rashmika Mandanna Vijay Deverakonda
ತೆಲಂಗಾಣದ ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ವಿಜಯ್‌-ರಶ್ಮಿಕಾ
Cinema Latest South cinema Top Stories
Rashmika Mandanna Vijay Devarakonda 1
ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್
Cinema Latest South cinema Top Stories
Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood

You Might Also Like

donald trump 2
Latest

4-5 ವಾರಗಳವರೆಗೆ ಮುಂದುವರಿಯುತ್ತೆ – ಅರಬ್‌ ರಾಷ್ಟ್ರಗಳು ನಮ್ಮ ಜೊತೆ ಸೇರಲು ಬಯಸುತ್ತಿವೆ: ಟ್ರಂಪ್‌

Public TV
By Public TV
7 hours ago
MLC Bhojegowda
Chikkamagaluru

ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭೋಜೇಗೌಡ ಸೇಫ್ – ಸ್ವತಃ ವಿಡಿಯೋ ಮಾಡಿ ಕಳಿಸಿರುವ MLC

Public TV
By Public TV
7 hours ago
Sabarimala Temple
Latest

ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಣಯ

Public TV
By Public TV
8 hours ago
Khamenei Wife
Latest

ಖಮೇನಿ ಹತ್ಯೆಯಾದ ಎರಡು ದಿನಗಳ ಬಳಿಕ ಪತ್ನಿ ಮನ್ಸೌರೆ ಸಾವು

Public TV
By Public TV
9 hours ago
gold price hike
Latest

Iran War| ಹೂಡಿಕೆದಾರರಿಗೆ 8 ಲಕ್ಷ ಕೋಟಿ ಲಾಸ್‌ – 2 ಲಕ್ಷ ದಾಟುತ್ತಾ ಚಿನ್ನದ ದರ?

Public TV
By Public TV
9 hours ago
Narendra Modi Ayatollah Ali Khamenei
Latest

ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯನ್ನು ಭಾರತ ಖಂಡಿಸಿಲ್ಲ ಯಾಕೆ?

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?