ನವದೆಹಲಿ: ದೇಶದಲ್ಲಿ ವಿಮಾನಯಾನ (Aviation) ಆರಂಭಿಸಲು ಇದು ಉತ್ತಮ ಸಮಯ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು(Ram Mohan Naidu) ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಇಂಡಿಗೋ (Indigo) ಸಮಸ್ಯೆ ಬಗ್ಗೆ ಮಾತನಾಡಿದ ಅವರು, ವ್ಯವಸ್ಥೆಯ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಆರಂಭವಾಗಬೇಕಿದೆ ಎಂದರು.
ಇಂದು ಭಾರತವು ಐದು ದೊಡ್ಡ ವಿಮಾನಯಾನ ಸಂಸ್ಥೆಗಳನ್ನು ಹೊಂದಿದೆ ಮತ್ತು ಈ ಕ್ಷೇತ್ರದಲ್ಲಿ ಹೊಸ ಕಂಪನಿಗಳನ್ನು ತರಲು ಸಚಿವಾಲಯವು ಹೆಚ್ಚಿನ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.
ವಿಮಾನ ಕರ್ತವ್ಯ ಸಮಯ ಮಿತಿಗಳು (FDTL) ಕುರಿತು ಡಿಸೆಂಬರ್ 1 ರಂದು ಸಚಿವಾಲಯವು ಇಂಡಿಗೋ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದೆ ಎಂದು ನಾಯ್ಡು ಹೇಳಿದರು.
Delhi: On IndiGo flight delays and cancellations, Union Civil Aviation Minister K. Ram Mohan Naidu says, “… I’m expanding on this question, Sir, because the House and the nation both want clarity. I would like to shed some light on this. On 1st November 2025, new FDTL… pic.twitter.com/5BJ4GunBFe
— IANS (@ians_india) December 8, 2025
ವಿಮಾನಯಾನ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ಸ್ಪಷ್ಟೀಕರಣಗಳನ್ನು ನೀಡಲಾಗಿತ್ತು. ಆ ಸಮಯದಲ್ಲಿ ಕಂಪನಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿತ್ತು. ಇಂಡಿಗೋ ತಮ್ಮ ಸಿಬ್ಬಂದಿ ಪಟ್ಟಿಯನ್ನು ನಿರ್ವಹಿಸಬೇಕಾಗಿತ್ತು. ಡಿಜಿಸಿಎಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಬದಲಾಗಿ ಇಂಡಿಗೋದ ಆಂತರಿಕ ಯೋಜನಾ ವೈಫಲ್ಯದಿಂದ ಈ ಅಡಚಣೆ ಉಂಟಾಗಿದೆ ಸ್ಪಷ್ಟಪಡಿಸಿದರು.
ಈ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ ಅವರು ಇಂಡಿಗೋ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮುಂದುವರಿದ `ಇಂಡಿಗೋ’ ಸಮಸ್ಯೆ: ಬೆಂಗಳೂರಲ್ಲಿ 127 ಸೇರಿ ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳು ರದ್ದು
ಸ್ಪೈಸ್‌ಜೆಟ್ ಮಾರುಕಟ್ಟೆಯ ಕೇವಲ 3.2% ಅನ್ನು ಹೊಂದಿದ್ದರೆ, ಅಕಾಸಾ ಏರ್ 4.7% ಅನ್ನು ಹೊಂದಿದೆ. ಸ್ಟಾರ್ ಏರ್, ಫ್ಲೈ91, ಫ್ಲೈಬಿಗ್ ಮತ್ತು ಇಂಡಿಯಾಒನ್‌ನಂತಹ ಇತರ ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳು ಕನಿಷ್ಠ ಉಪಸ್ಥಿತಿಯನ್ನು ಹೊಂದಿವೆ. ಸರ್ಕಾರಿ ಸ್ವಾಮ್ಯದ ಏಕೈಕ ವಿಮಾನಯಾನ ಸಂಸ್ಥೆಯಾದ ಅಲೈಯನ್ಸ್ ಏರ್ 0.6% ಪಾಲು ಹೊಂದಿದೆ.

