ತಿರುವನಂತಪುರಂ: ಸಮಾಜದಲ್ಲಿ ನನ್ನ ಕೆರಿಯರ್ ಹಾಗೂ ಜೀವನ ನಾಶಮಾಡಲೆಂದೇ ನನ್ನ ವಿರುದ್ಧ ಸಂಚು ರೂಪಿಸಲಾಗಿತ್ತು ಎಂದು ನಟ ದಿಲೀಪ್ (Dileep) ಹೇಳಿದ್ದಾರೆ.
ಬಹುಭಾಷಾ ನಟಿಯ ಕಿಡ್ನಾಪ್ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Kerala actress assault and abduction case) ಖಲಾಸೆಗೊಂಡ ಬಳಿಕ ಪ್ರತಿಕ್ರಿಯಿಸಿದ ಅವರು, ಈ ಕೇಸಲ್ಲಿ ಕ್ರಿಮಿನಲ್ ಗೂಢಾಲೋಚನೆಯಿದೆ, ಇದನ್ನು ತನಿಖೆ ಮಾಡಬೇಕು ಎಂದು ಮಂಜು ವಾರಿಯರ್ (Manju Warrier) ಹೇಳಿದ ಹೇಳಿಕದ ಬಳಿಕ ನನ್ನ ವಿರುದ್ಧ ಸಂಚು ಶುರುವಾಯಿತು ಎಂದು ಹೇಳಿದರು.
Kochi, Kerala: In the Kerala actress assault case, actor Dileep says, “Thank you to everyone who supported me and stood by me for the last nine years.The conspiracy began when Manju (actor Manju Warrier, his ex-wife) said that there was a conspiracy. After that, a senior police… pic.twitter.com/i8mOuG6DOK
— IANS (@ians_india) December 8, 2025
ಅಂದು ಇದ್ದ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಪೊಲೀಸರು ಸೇರಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದರು. ಇದಕ್ಕಾಗಿ ಪ್ರಮುಖ ಆರೋಪಿಯನ್ನೂ, ಸಹ ಆರೋಪಿಗಳನ್ನೂ ಪೊಲೀಸರು ಹಿಡಿದರು. ಪೊಲೀಸರು ಕೆಲ ಮಾಧ್ಯಮಗಳ ಜೊತೆ ಸೇರಿ ಸುಳ್ಳು ಕತೆ ಸೃಷ್ಟಿಸಿದರು ಎಂದು ದೂರಿದರು. ಇದನ್ನೂ ಓದಿ: ಬಹುಭಾಷಾ ನಟಿಯ ಕಿಡ್ನಾಪ್, ರೇಪ್ ಕೇಸ್ – ನಟ ದಿಲೀಪ್ ಖುಲಾಸೆ, 6 ಮಂದಿ ದೋಷಿ
ನಟಿ ಮಂಜು ವಾರಿಯರ್ ಮತ್ತು ದಿಲೀಪ್ ಪ್ರೀತಿಸಿ 1998 ರಲ್ಲಿ ಮದುವೆಯಾಗಿದ್ದರು. 2015 ಜನವರಿಯಲ್ಲಿ ದಂಪತಿ ವಿಚ್ಛೇದನ ಪಡೆದಿದ್ದರು.

