ಕಾರವಾರ/ಬೆಂಗಳೂರು: ಗೋವಾದ (Goa Nightclub Fire) ಹಡೆಪಡೆಯಲ್ಲಿನ ನೈಟ್‌ಕ್ಲಬ್‌ನ ಅಗ್ನಿ ಅವಘಡದಲ್ಲಿ 25 ಜನ ಮೃತಪಟ್ಟಿದ್ದು, ಬೆಂಗಳೂರು (Bengaluru) ಮೂಲದ ಇಶಾಕ್ ಸಾವನ್ನಪ್ಪಿರುವುದನ್ನು ಗೋವಾದ ಹಣಜುಣ ಪೊಲೀಸರು ದೃಢಪಡಿಸಿದ್ದಾರೆ.
ಬೆಂಗಳೂರಿನಿಂದ ಪಣಜಿಗೆ (Panaji) ಬಂದು ನಂತರ ಇಲ್ಲಿನ ಅರ್ಪೋರಾ ನೈಟ್‌ಕ್ಲಬ್‌ಗೆ ಬಂದಿದ್ದ ಇಶಾಕ್ ಕ್ಲಬ್‌ನಲ್ಲಿ ಘಟನೆ ನಡೆಯುವ ಮುಂಚೆಯೇ ತೆರಳಿದ್ದ. ಆದರೇ ಕ್ಲಬ್‌ನಲ್ಲಿ ಮೊಬೈಲ್ ಬಿಟ್ಟು ಬಂದ ಕಾರಣ ಮರಳಿ ಕ್ಲಬ್‌ಗೆ ಪ್ರವೇಶಿಸಿದ್ದು ಈ ವೇಳೆ ಕ್ಲಬ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ದಟ್ಟ ಹೊಗೆ ತುಂಬಿ ಹೊರಬರಲಾಗದೇ ಅಲ್ಲಿಯೇ ಸಿಲುಕಿ ಸಜೀವ ದಹನವಾಗಿದ್ದಾರೆ. ಇದನ್ನೂ ಓದಿ: ಜೆನ್ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್ ಕಲ್ಯಾಣ್ ಕರೆ
ಇನ್ನು ದುರ್ಘಟನೆ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ಸರ್ಕಾರದಿಂದ ಮೃತರಿಗೆ ತಲಾ ಐದು ಲಕ್ಷ ರೂ., ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂ., ಗಾಯಾಳುಗಳಿಗೆ ಗೋವಾ ಸರ್ಕಾರದಿಂದ 50 ಸಾವಿರ ರೂ. ಹಾಗೂ ಪ್ರಧಾನಿಗಳ ನಿಧಿಯಿಂದ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಕೆಎಸ್‌ಸಿಎ ಚುನಾವಣೆ ಫಲಿತಾಂಶ ಪ್ರಕಟ – ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ
ನೈಟ್‌ಕ್ಲಬ್‌ನಲ್ಲಿ ನಡೆದ ಕೆಲವರ ಗುರುತು ಮಾತ್ರ ಪತ್ತೆಯಾಗಿದ್ದು, ಇವರ ಮೃತದೇಹವನ್ನು ಅವರ ಮನೆಗೆ ಕಳುಹಿಸುವ ಖರ್ಚನ್ನು ಸರ್ಕಾರವೇ ಬರಿಸಲಿದೆ. ಇದಕ್ಕಾಗಿ ಪೊಲೀಸ್ ಎಸ್.ಡಿ.ಎಂ ಸಮಿತಿ ಸ್ಥಾಪನೆ ಮಾಡಲಾಗಿದೆ. ಈ ದುರ್ಘಟನೆ ಬಳಿಕ ಎಲ್ಲಾ ನೈಟ್ ಕ್ಲಬ್‌ಗಳ ಆಡಿಟ್ ನಡೆಸಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗುತ್ತದೆ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಇನ್ನು ಘಟನೆ ಸಂಬಂಧ ಹಣಜುಣ ಪೊಲೀಸರು ನಾಲ್ವರು ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ. ಕ್ಲಬ್ ಮಾಲೀಕ ಸೌರಭ್ ಲುಥರಾ, ಗೌರವ್ ಲುಥರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಇದನ್ನೂ ಓದಿ: 610 ಕೋಟಿ ರೂ. ಮೌಲ್ಯದ ಟಿಕೆಟ್‌ಗಳ ಹಣ ಮರುಪಾವತಿಸಿದ ಇಂಡಿಗೋ
ಮೃತರಾದವರು ಯಾರು?
ದುರ್ಘಟನೆಯಲ್ಲಿ ಮೃತರಾದವರ ಗುರುತು ಪತ್ತೆಯಾಗಿದ್ದು, ಜಾರ್ಖಂಡಿನ ಮೋಹಿತ ಎಟವಾ ಮುಂಡಾ (18), ಪ್ರದೀಪ್ ಮಹತೋ (22), ಬಿನೋದ್ ಮಹತೋ (19), ಅಸ್ಸಾಂನ ರಾಹುಲ್ ತಾಂತಿ (60) ಉತ್ತರಖಂಡನ ಸತೀಶ್‌ಸಿಂಗ್ ರಾಣಾ (26), ಅಸ್ಸಾಂನ ಮನೋಜಿತ್ ಮಲ್ (24), ಹರಿಯಾಣದ ಚೂರ್ಣ ಪುನ್ (33), ಉತ್ತರಾಖಂಡ್‌ನ ಸುರೇಂದ್ರ ಸಿಂಗ್ (38) ಪಶ್ಚಿಮ ಬಂಗಾಳದ ಸುಭಾಷ್ ಛೆತ್ರಿ (22), ಉತ್ತರಾಖಂಡ್‌ನ ಜಿತೇನ್ ಸಿಂಗ್ (21), ಸುಮೀತ್ ನೇಗಿ (44), ದೆಹಲಿಯ ಸರೋಜ್ ಜೋಶಿ (42) ಹಾಗೂ ಬೆಂಗಳೂರಿನ ಇಶಾಕ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮೆಕ್ಕೆಜೋಳ ಖರೀದಿ ಪ್ರಮಾಣ 50 ಕ್ವಿಂಟಾಲ್‌ಗೆ ಹೆಚ್ಚಿಸಿದ ರಾಜ್ಯ ಸರ್ಕಾರ


