ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್-2025ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ (MB Patil) ಅವರಿಂದು ಚಾಲನೆ ನೀಡಿದರು.
ಗುಮ್ಮಟ ನಗರಕ್ಕೆ ಹೆರಿಟೇಜ್ ಓಟದ ಕಿರೀಟ!
ಹಸಿರು ಸ್ವಸ್ಥ, ಸುಂದರ ವಿಜಯಪುರಕ್ಕಾಗಿ
ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಗುರಿ
21 ಕಿ.ಮೀ. ಓಟಕ್ಕೆ ಚಾಲನೆ ನೀಡಿದ ಸಂದರ್ಭ#ಓಡುವಿಜಯಪುರಓಡು #ವೃಕ್ಷಥಾನ್_ಹೆರಿಟೇಜ್_ರನ್2025 #vrukshathonheritagerun2025 pic.twitter.com/IQCU4caWt7
— M B Patil (@MBPatil) December 7, 2025
ವೃಕ್ಷಥಾನ್ ಹೆರಿಟೇಜ್ ರನ್‌ಗೆ ಹಸಿರು ನಿಶಾನೆ ತೋರುವ ಮೂಲಕ ಓಟಕ್ಕೆ ಚಾಲನೆ ನೀಡಲಾಯಿತು. ಮೊದಲಿಗೆ 21 ಕಿ.ಮೀ ಓಟಕ್ಕೆ ಚಾಲನೆ ನೀಡಿದರು. 10 ಕಿ.ಮೀ ಓಟಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಚಾಲನೆ ನೀಡಿದರು. ಸಚಿವರಿಗೆ ಎಂಎಲ್‌ಸಿ ಸುನೀಲ್ ಗೌಡ ಪಾಟೀಲ್, ಜಿಲ್ಲಾಧಿಕಾರಿ ಡಾ.ಆನಂದ್ ಕೆ, ಎಸ್ಪಿ ಲಕ್ಷ್ಮಣ್ ನಿಂಬರಗಿ ಸೇರಿದಂತೆ ಸ್ವಾಮೀಜಿಗಳು ಸಾಥ್ ನೀಡಿದರು.ಇದನ್ನೂ ಓದಿ: 20,000 ರನ್ – ದಿಗ್ಗಜರ ಎಲೈಟ್ ಲಿಸ್ಟ್ ಸೇರಿದ ರೋಹಿತ್; ಈ ಸಾಧನೆ ಮಾಡಿದ 4ನೇ ಭಾರತೀಯ
ಗುಮ್ಮಟನಗರಿಯಲ್ಲಿ ಹಸಿರಿನ ಹೆಜ್ಜೆಗಳು – ಓಟದ ಸಂಭ್ರಮಕ್ಕೆ ಜನಮನದ ಬೆಂಬಲ!
ವಿಜಯಪುರದ ಬೀದಿಗಳು ಇಂದು ಓಟಗಾರರ ನಗೆ, ಹರ್ಷದ ಹೊನಲುಗಳಿಂದ ಕಂಗೊಳಿಸಿದವು.
ಪರಿಸರ ಸಂರಕ್ಷಣೆಗೆ,ಪ್ರತಿ ಹೆಜ್ಜೆಯೂ ಶಪಥವಾಯಿತು!#ಓಡುವಿಜಯಪುರಓಡು #ವೃಕ್ಷಥಾನ್_ಹೆರಿಟೇಜ್_ರನ್2025 #vrukshathonheritagerun2025 pic.twitter.com/neXAj9Vd6h
— M B Patil (@MBPatil) December 7, 2025
ವೃಕ್ಷಥಾನ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ಓಟಗಾರರು ಹಾಗೂ ಸಂಗೀತ, ನೃತ್ಯ ಸೇರಿದಂತೆ ಹಲವು ಕಲಾ ತಂಡಗಳು ಭಾಗಿಯಾಗಿದ್ದವು. ಬಳಿಕ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

