ಬೆಂಗಳೂರು: ಏಳುಕೊಂಡಲವಾಡ ತಿರುಪತಿ (Tirupati) ತಿಮ್ಮಪ್ಪನಿಗೆ ದೇಶ-ವಿದೇಶದೆಲ್ಲೆಡೆ ಭಕ್ತರಿದ್ದು, ಕರ್ನಾಟಕದಲ್ಲೂ ಲಕ್ಷಾಂತರ ಭಕ್ತರಿದ್ದಾರೆ. ಅದ್ರಲ್ಲೂ ವೈಕುಂಠ ಏಕಾದಶಿ, ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ಹಿನ್ನೆಲೆ ರಾಜ್ಯದಿಂದ ತಿರುಪತಿಗೆ ತೆರಳುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು, ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ.
ಬಾಲಾಜಿ, ಕಲಿಯುಗದ ವಿಷ್ಣು ಅವತಾರವೆಂದು ಪೂಜಿಸಲ್ಪಡುವ ತಿರುಪತಿ ತಿಮ್ಮಪ್ಪ ಲಕ್ಷಾಂತರ ಭಕ್ತಾದಿಗಳ ಆರಾಧ್ಯ ದೈವ. ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಿಂದ ತಿರುಪತಿಗೆ ಪ್ರತಿನಿತ್ಯ 280 ಬಸ್‌ಗಳ ಸಂಚಾರವಿದೆ. ಸದ್ಯ ವೈಕುಂಠ ಏಕಾದಶಿ, ಕ್ರಿಸ್ಮಸ್ ರಜೆ ಹಾಗೂ ಹೊಸವರ್ಷದ ಹಿನ್ನೆಲೆ ತಿರುಪತಿಗೆ ತೆರಳುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಇತ್ತ ಖಾಸಗಿ ಬಸ್‌ಗಳು ಹೆಚ್ಚಿನ ದರ ವಿಧಿಸುತ್ತಿವೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಹೆಚ್ಚಿನ ಬಸ್ ಬಿಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.ಇದನ್ನೂ ಓದಿ: ರಕ್ಷಣಾ ಒಪ್ಪಂದ; ‘5 ಡೆಡ್ಲಿ ವೆಪನ್ಸ್’- ರಷ್ಯಾದ ಶಸ್ತ್ರಾಸ್ತ್ರಗಳು ಭಾರತದ ಮಿಲಿಟರಿ ಶಕ್ತಿಯ ಬೆನ್ನೆಲುಬಾಗಿದ್ದು ಹೇಗೆ?
ಇನ್ನೂ ಹಬ್ಬ, ರಜೆ ಹಾಗೂ ಹೊಸವರ್ಷದ ಸಂದರ್ಭದಲ್ಲಿ ಅಧಿಕ ಜನ ತಿರುಪತಿಗೆ ತೆರಳುತ್ತಾರೆ. ಈ ವೇಳೆ ದರ್ಶನ ಪಡೆಯಲು ಮೂರು-ನಾಲ್ಕು ದಿನ ಕಾಯಬೇಕಾಗುತ್ತದೆ. ಹೀಗಾಗಿ ಕೆಎಸ್‌ಆರ್‌ಟಿಸಿ, ಟಿಟಿಡಿಗೆ ಶೀಘ್ರ ದರ್ಶನದ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಶೀಘ್ರ ದರ್ಶನದ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ತುಂಬಾ ದಿನದಿಂದ ಟಿಟಿಡಿ (TTD) ಆಡಳಿತ ಮಂಡಳಿ ಮುಂದೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.


