ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದಂತೆ ಟ್ರ‍್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ನೇರಳೆ ಮಾರ್ಗದ (Purple Line) ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ (Kengeri Metro Station) ನಡೆದಿದೆ.
ಮೃತ ವ್ಯಕ್ತಿಯನ್ನು ವಿಜಯಪುರ (Vijayapura) ಮೂಲದ ಶಾಂತಗೌಡ ಪಾಟೀಲ್ (38) ಎಂದು ಗುರುತಿಸಲಾಗಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಪತ್ನಿ ಹಾಗೂ ಪುಟ್ಟ ಕಂದಮ್ಮನೊಂದಿಗೆ ವಾಸಿಸುತ್ತಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೋದಿ, ಪುಟಿನ್ ಫಾರ್ಚೂನರ್ ಕಾರನ್ನೇ ಬಳಸಿದ್ದು ಯಾಕೆ?
ಶುಕ್ರವಾರ (ಡಿ.5) ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮೆಟ್ರೋ ಬರುತ್ತಿದ್ದಂತೆಯೇ ವ್ಯಕ್ತಿ ಟ್ರ್ಯಾಕ್‌ಗೆ ಹಾರಿದ್ದು, ಪರಿಣಾಮ ಮೆಟ್ರೋ ಹರಿದು ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೆಟ್ರೋ ಸಿಬ್ಬಂದಿ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಟ್ರ‍್ಯಾಕ್ ಮೇಲಿದ್ದ ಶವವನ್ನು ತೆರವುಗೊಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ನೇರಳೆ ಮಾರ್ಗದಲ್ಲಿ ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿ, ಚಲ್ಲಘಟ್ಟದಿಂದ ನಾಯಂಡಹಳ್ಳಿವರೆಗೆ ಮೆಟ್ರೋ ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಮೆಟ್ರೋ ಎಂದಿನಂತೆ ಸಂಚಾರ ಆರಂಭಿಸಿದೆ.ಇದನ್ನೂ ಓದಿ: ನಿರ್ದೇಶಕ ನಂದಕಿಶೋರ್‌ಗೆ ಸಾಲ ನೀಡಿದ ಕೇಸ್‌ಗೆ ಟ್ವಿಸ್ಟ್ – ಉದ್ಯಮಿ ಕಿಡ್ನ್ಯಾಪ್ ಹಿಂದೆ ರಘು ಕೈವಾಡ ಸಾಬೀತು

