ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ತವರು ಕ್ಷೇತ್ರ ಭಾಲ್ಕಿಯಲ್ಲಿ (Bhalki) ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಅಧಿಕಾರಿಗಳೇ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಜಿಲ್ಲೆಯ ಜೀವನಾಡಿ ಮಾಂಜ್ರಾನದಿಯಲ್ಲಿ (Manjra River) ಅಕ್ರಮ ಮರಳು ಮಾಫಿಯಾ ನಡೆಯುತ್ತಿದ್ದರೂ ಕೂಡ ಇಬ್ಬರು ಸಚಿವರು ಮಾತ್ರ ಕಣ್ಣ ಮುಚ್ಚಿಕುಳಿತ್ತುಕೊಂಡಿದ್ದಾರೆ. ರಾಜರೋಷವಾಗಿ ನದಿಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ, ಅಕ್ರಮ ಮರಳು ದಂಧೆ ಮಾಡುತ್ತಿದ್ದರೂ ಕೂಡ ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ. ಬಹಿರಂಗವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಗಣಿಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತ್ತಿದ್ದಾರೆ.ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ – ಬೃಹತ್ ಶೋಭಾಯಾತ್ರೆಗೆ ಶಾಂತಿಯುತ ತೆರೆ
ಮಾಂಜ್ರಾನದಿಯಲ್ಲೇ 10ರಿಂದ 15 ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಹೋಗುವ ದಂಧೆಕೋರರು ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ನದಿಯಲ್ಲಿ ಎಲ್ಲಿ ನೋಡಿದರೂ ಅಲ್ಲಿ ಬರೀ ಟ್ರ್ಯಾಕ್ಟರ್‌ಗಳು ಮರಳು ತುಂಬಿಕೊಂಡು ಹೋಗುವ, ಬರುವ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿವೆ. ಯಾರ ಭಯವಿಲ್ಲದೆ ಅಕ್ರಮ ಮರಳು ಮಾಫಿಯಾ ಮಾಡುತ್ತಿದ್ದಾರೆ.
ಇಷ್ಟೊಂದು ರಾಜಾರೋಷವಾಗಿ ನಡೆಯುತ್ತಿದ್ದರೂ ಕೂಡ ಗಣಿ ಮತ್ತು ಭೂವಿಜ್ಞಾನಿಗಳು ಮೌನಕ್ಕೆ ಶರಣಾಗಿರೋದು ನೋಡಿದ್ರೆ ದಂಧೆಕೋರರ ಜೊತೆ ಶಾಮೀಲಾಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇನ್ನೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಕ್ರಮ ಮರಳು ದಂಧೆ ತಡೆಯುವಲ್ಲಿ ವಿಫಲವಾಗಿದೆ.ಇದನ್ನೂ ಓದಿ: ಆಶಿಕಾ ರಂಗನಾಥ್ ಸಂಬಂಧಿ ಅಚಲ ಆತ್ಮಹತ್ಯೆ ಕೇಸ್ – ಪೊಲೀಸರ ಕೈಸೇರಿದ CDR ರಿಪೋರ್ಟ್, ಆರೋಪಿ ಜೊತೆ ಸಂಪರ್ಕ ಪತ್ತೆ

