ಟೈಗರ್ ಶ್ರಾಫ್ (Tiger Shroff) ಅಭಿನಯದ ಬಾಘಿ-4 ಸಿನಿಮಾ ಇದೇ ವರ್ಷ ತೆರೆಕಂಡು ಬಾಕ್ಸಾಫೀಸ್‍ನಲ್ಲಿ ಮಕಾಡೆ ಮಲಗಿದೆ. ಕನ್ನಡದ ನಿರ್ದೇಶಕ ಎ.ಹರ್ಷಾ ಬಾಲಿವುಡ್‍ನಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದರು. ಅತ್ತ ಟೈಗರ್ ಶ್ರಾಫ್‍ಗೂ ಯಶಸ್ಸು ಸಿಗಲಿಲ್ಲ. ಇತ್ತ ಕನ್ನಡದ ನಿರ್ದೇಶಕರಿಗೂ ಹೆಸರು ಬರಲಿಲ್ಲ. ಹಣ ಹೂಡಿ ನಿರ್ಮಾಪಕರಿಗೂ ಹಾಕಿದಷ್ಟು ಹಣವೂ ಬರಲಿಲ್ಲ.
ಬಾಲಿವುಡ್ ಲೆಜೆಂಡರಿ ಆ್ಯಕ್ಟರ್ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ಯಾಕೋ ಇತ್ತೀಚೆಗೆ ಸಿನಿಮಾಗಳು ಕೈಹಿಡಿಯುತ್ತಿಲ್ಲ. ಅಕ್ಷಯ್‍ಕುಮಾರ್ ಜೊತೆಗೆ ನಟಿಸಿದರೂ ಅವರ `ಬಡೇಮಿಯಾ ಚೋಟೆಮಿಯಾ’ ಸಿನಿಮಾ ಕೂಡಾ ಖ್ಯಾತಿ ಕೊಡಲಿಲ್ಲ. ಬಾಘಿ-4 ಸಿನಿಮಾ ಮೇಲೂ ಸಾಕಷ್ಟು ನಿರೀಕ್ಷಗಳನ್ನ ಇಟ್ಟುಕೊಂಡಿದ್ದ ಟೈಗರ್‌ಗೆ ಅದೂ ಕೂಡಾ ಕೈಹಿಡಿಯಲಿಲ್ಲ. ಹೀಗಾಗಿ ಈ ಬಾರಿ ಮಿಲಾಪ್ ಜೊತೆ ಕಥೆಯ ಬಗ್ಗೆ ಮಾತುಕತೆ ಮಾಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಜೂ.ಎನ್‌ಟಿಆರ್ ನಟನೆಯ ದೇವರ ಪಾರ್ಟ್-2 ನಿಂತೋಯ್ತಾ..?
ಆ್ಯಕ್ಷನ್ ಡ್ರಾಮಾ ಸಬ್ಜೆಕ್ಟ್ ಬಗ್ಗೆ ನಿರ್ದೇಶಕ ಹಾಗೂ ಕಥೆಗಾರ ಮಿಲಾಪ್ ಝವೇರಿ ಜೊತೆ ಚರ್ಚೆ ನಡೆಸಿದ್ದಾರಂತೆ ಟೈಗರ್ ಶ್ರಾಫ್. ಈ ಬಾರಿ ಒಳ್ಳೆಯ ಕಥೆಯನ್ನ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರಂತೆ. ಜೊತೆಗೆ ಮಿಲಾಪ್ ನಿರ್ದೇಶನದ ಮಸ್ತಿ-4 ಸಿನಿಮಾ ಸದ್ಯ ಥಿಯೇಟರ್‌ನಲ್ಲಿ ಕಮಾಲ್ ಮಾಡ್ತಿದೆ. ಬಾಕ್ಸಾಫೀಸ್‍ನಲ್ಲೂ ಉತ್ತಮ ಮೊತ್ತವನ್ನ ಕಲೆ ಹಾಕುತ್ತಿದೆ. ಇದರ ಬೆನ್ನಲ್ಲೇ ಟೈಗರ್ ಶ್ರಾಫ್ ಮಾತುಕತೆ ನಡೆಸಿದ್ದಾರಂತೆ. 2026ರಲ್ಲಿ ಸಿನಿಮಾ ಬಗ್ಗೆ ಗುಡ್‍ನ್ಯೂಸ್ ಕೊಡುವ ತಯಾರಿಯನ್ನ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಪವನ್ ಕಲ್ಯಾಣ್ ಸಿನಿಮಾಗಳು ಸಾಲು ಸಾಲು ಸೋಲು – ಓಜಿ ಪಾರ್ಟ್-2ಗೆ ಸ್ಟಾರ್ಟ್ ಆಗಲ್ವಾ?

