– ಆನ್‌ಲೈನಲ್ಲಿ ಮೀಮ್ಸ್‌ಗಳು ವೈರಲ್
ನವದೆಹಲಿ: ಗೂಗಲ್‌ನ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಗೂಗಲ್ ಮೀಟ್ (Google Meet) ಭಾರತದಲ್ಲಿ ಕಳೆದ ಕೆಲವು ಗಂಟೆಗಳಿಂದ ಸ್ಥಗಿತಗೊಂಡಿದ್ದು, ಬಳಕೆದಾರರು ವೆಬ್‌ಸೈಟ್ ಮೂಲಕ ಮೀಟ್‌ನಲ್ಲಿ ಭಾಗಿಯಾಗಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ಭಾರತದಲ್ಲಿ 65% ಬಳಕೆದಾರರು ಗೂಗಲ್ ಮೀಟ್‌ನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಸರ್ವರ್ ಸಮಸ್ಯೆ ಎದುರಾದರೆ, ಇನ್ನೂ ಕೆಲವರಿಗೆ ವಿಡಿಯೋ ಗುಣಮಟ್ಟದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕೇಳಿಬಂದಿದೆ. ಕೆಲವೊಮ್ಮೆ ವೆಬ್‌ಸೈಟ್ ಮೂಲಕ ಗೂಗಲ್ ಮೀಟ್ ಓಪನ್ ಮಾಡುವಾಗ 503 Error ಎಂದು ಬರುತ್ತಿದೆ. ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆ ವದಂತಿ
ಭಾರತದ ಹೊರತಾಗಿ ಕೆಲ ದೇಶಗಳಲ್ಲಿಯೂ ಗೂಗಲ್ ಮೀಟ್ ಬಳಸಲು ಸಮಸ್ಯೆ ಎದುರಾಗಿದೆ ಎಂದು ವರದಿಯಾಗಿದೆ. ಲಾಗಿನ್ ಆಗುವ ವೇಳೆಯೂ ಸಮಸ್ಯೆ ಉಂಟಾಗಿದ್ದು, ಕೆಲಸಕ್ಕೆ ಸಂಬಂಧಿಸಿದ ಕರೆ, ಆನ್‌ಲೈನ್ ತರಗತಿಗಳು, ಇನ್ನೂ ಮೀಟಿಂಗ್‌ಗಳು ಸೇರಿದಂತೆ ವರ್ಚುವಲ್ ಈವೆಂಟ್‌ಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಭಾರತದಲ್ಲಿ 1,700ಕ್ಕೂ ಅಧಿಕ ಜನರು ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಈ ಕುರಿತು ಕಂಪನಿ ಪ್ರತಿಕ್ರಿಯಿಸಿದ್ದು, ನಮ್ಮ ತಂಡ ಸದ್ಯ ಸಮಸ್ಯೆಯನ್ನು ಬಗೆಹರಿಸುತ್ತಿದೆ. ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುತ್ತದೆ. ಅಡಚಣೆಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಬರೆದುಕೊಂಡಿದೆ.
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಗೂಗಲ್ ಮೀಟ್ ಡೌನ್.. ಮೀಟಿಂಗ್ ಕ್ಯಾನ್ಸಲ್ಡ್ ಎಂದು ಮೀಮ್ಸ್‌ಗಳು ವೈರಲ್ ಆಗಿವೆ. ಇದನ್ನೂ ಓದಿ: ಭಾರತೀಯ ಕ್ರಿಕೆಟ್ ಮುಖ್ಯ, ನಾನಲ್ಲ – ಕೋಚ್ ಹುದ್ದೆಗೆ ಗುಡ್ ಬೈ ಹೇಳ್ತಾರಾ ಗಂಭೀರ್?

