ಚಿತ್ರದುರ್ಗ: ಮುರುಘಾ ಶ್ರೀಗಳು ಗಂಗೆಯಷ್ಟೇ ಪವಿತ್ರ. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಶಿವಮೂರ್ತಿ ಮುರುಘಾ ಶರಣರ ಆಪ್ತ ಜಿತೇಂದ್ರ ಹೇಳಿದ್ದಾರೆ.
ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ಹಾಗೂ ಇತರ ಇಬ್ಬರು ಆರೋಪಿಗಳು ನಿರ್ದೋಷಿಗಳು ಎಂದು ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮುರುಘಾ ಶ್ರೀಗಳ ಆಪ್ತ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಬಿಗ್ ರಿಲೀಫ್ – ಮುರುಘಾ ಶ್ರೀ ನಿರ್ದೋಷಿ
ನಮಗೆ ಇವತ್ತು ನೆಮ್ಮದಿ ಸಿಕ್ಕಿದೆ. ನಮಗೆ ಮುರುಘೇಶನ ಮೇಲೆ ನಂಬಿಕೆ ಬಂದಿದೆ. ಮುರುಘಾ ಶರಣರಿಗೆ ಜಯ ಸಿಕ್ಕಿದೆ. ಇಂದು ಸಂವಿಧಾನದ ದಿನ. ಒಳ್ಳೆಯವರಿಗೆ ತೊಂದರೆಯಾಗಲ್ಲ ಅಂತ ಸಾಬೀತಾಗಿದೆ.
ಇನ್ನೊಂದು ಪ್ರಕರಣ ಇದೆ. ಅದನ್ನೂ ಸಹ ನಾವು ಗೆಲ್ತೀವಿ. ಯಾವುದರಲ್ಲೂ ರಾಜೀ ಇಲ್ಲ. ನಾವು ಈ ದೇಶದ ಮೇಲಿನ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಅದಕ್ಕಾಗಿ ಇಲ್ಲಿವರೆಗೆ ತಾಳ್ಮೆಯಲ್ಲಿದ್ದೆವು. ಮುಂದೆಯೂ ತಾಳ್ಮೆಯಿಂದ ಇರುತ್ತೇವೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಆರೋಪಿಗಳನ್ನು ರಕ್ಷಿಸಲು ತನಿಖಾಧಿಕಾರಿಗಳು ಸರಿಯಾದ ದಾಖಲೆ ಸಲ್ಲಿಸಿರಲಿಲ್ಲ: ಒಡನಾಡಿ ಪರಶು
ಮಠದ ವೈಭವ ಯಾವತ್ತೂ ಹೋಗಲ್ಲ. ಕೆಲವರು ಕಳಂಕ ತಂದರು. ನೂರಾರು ವರ್ಷದ ಮಠದ ವೈಭವ ಹಾಗೆಯೇ ಇರುತ್ತದೆ. ಮಠಕ್ಕೆ ತನ್ನದೇ ಆದ ಶಕ್ತಿಯಿದೆ ಎಂದು ತಿಳಿಸಿದ್ದಾರೆ.

