ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಆತ್ಮಾಹುತಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ (Al Falah University) ಅಲ್ಪಸಂಖ್ಯಾತ ಸ್ಥಾನಮಾನವನ್ನು ಸಹ ರದ್ದಾಗುವ ಭೀತಿ ಎದುರಾಗಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗದಿಂದ ವಿಶ್ವವಿದ್ಯಾಲಯಕ್ಕೆ ಶೋಕಾಸ್ ನೋಟಿಸ್ ನೀಡಿದ್ದು, ಅಲ್ಪಸಂಖ್ಯಾತ ಸ್ಥಾನಮಾನವನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಲಾಗಿದೆ.
ಆಯೋಗವು ಡಿ.4 ರಂದು ಈ ಸೂಚನೆಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ವಿಶೇಷ ಸ್ಥಾನಮಾನವನ್ನು ಪಡೆದ ಅಲ್ಪಸಂಖ್ಯಾತ ಸಮುದಾಯವು ವಿಶ್ವವಿದ್ಯಾನಿಲಯವನ್ನು ಇನ್ನೂ ನಿರ್ವಹಿಸುತ್ತಿದೆಯೇ? ಮಾಲೀಕತ್ವ ಅಥವಾ ನಿಯಂತ್ರಣದಲ್ಲಿ ಯಾವುದೇ ಬದಲಾವಣೆಯಾಗಿದೆಯೇ ಎಂಬುದನ್ನು ಆಯೋಗವು ತನಿಖೆ ಮಾಡುತ್ತದೆ. ಬಳಿಕ ಆಯೋಗ ಅಂತಿಮ ತಿರ್ಮಾನ ಕೈಗೊಳ್ಳಲಿದೆ. ಇದನ್ನೂ ಓದಿ: ದೆಹಲಿ ಕಾರು ಸ್ಫೋಟ ಕೇಸ್ – ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ 7ನೇ ಆರೋಪಿ ಬಂಧಿಸಿದ ಎನ್‌ಐಎ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಾಹುತಿ ದಾಳಿಕೋರ ಡಾ. ಉಮರ್-ಉನ್ ನಬಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಫರಿದಾಬಾದ್ ನಿವಾಸಿಯೊಬ್ಬರನ್ನು ಬಂಧಿಸಿದೆ. ದೆಹಲಿ ಭಯೋತ್ಪಾದಕ ಬಾಂಬ್ ಸ್ಫೋಟದ ಮೊದಲು ಭಯೋತ್ಪಾದಕ ಉಮರ್ ಉನ್ ನಬಿಗೆ ಲಾಜಿಸ್ಟಿಕ್ಸ್ ಬೆಂಬಲ ನೀಡಿದ ಆರೋಪದ ಮೇಲೆ ಹರಿಯಾಣದ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್ ಅವರನ್ನು ಸಂಸ್ಥೆ ಬಂಧಿಸಿದೆ.
ಫರಿದಾಬಾದ್‌ನ ಅಲ್ಫಾಲಾ ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶೋಯಾಬ್, ಉಮರ್‌ಗೆ ವಿಶ್ವವಿದ್ಯಾಲಯದ ಪ್ರಯೋಗಾಲಯದಿಂದ ರಾಸಾಯನಿಕಗಳನ್ನು ಖರೀದಿಸಲು ಸಹಾಯ ಮಾಡಿದ್ದನೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸ್ಫೋಟ; ಭದ್ರತಾ ಕಾರಣಕ್ಕೆ ಭಾರತ ಭೇಟಿ ಮುಂದೂಡಿದ ಇಸ್ರೇಲ್ ಪ್ರಧಾನಿ
ಶೋಯೆಬ್, ಸ್ಫೋಟಗಳಿಗೆ ಸ್ವಲ್ಪ ಮೊದಲು ಹರಿಯಾಣದ ನುಹ್‌ನ ಹಿದಾಯತ್ ಕಾಲೋನಿಯಲ್ಲಿರುವ ತನ್ನ ಅತ್ತಿಗೆಯ ಮನೆಯಲ್ಲಿ ಉಮರ್‌ಗಾಗಿ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಉಮರ್ ತಪ್ಪಿಸಿಕೊಳ್ಳುವ ಸಮಯದಲ್ಲಿ ಈ ಮನೆಯನ್ನು ಅಡಗುತಾಣವಾಗಿ ಬಳಸಿಕೊಂಡಿದ್ದ. ಅಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ. ನಂತರ i20 ಕಾರಿನಲ್ಲಿ ಫಿರೋಜ್‌ಪುರ್ ಝಿರ್ಕಾಗೆ ಪ್ರಯಾಣಿಸಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲಿಂದ, ಅವನು ಎಟಿಎಂನಿಂದ ಹಣವನ್ನು ಹಿಂಪಡೆದು, ಮುಂಬೈ ಎಕ್ಸ್‌ಪ್ರೆಸ್‌ವೇ ತೆಗೆದುಕೊಂಡು, ಬದರ್ಪುರ್ ಮೂಲಕ ದೆಹಲಿಯನ್ನು ಪ್ರವೇಶಿಸಿ, ಅಂತಿಮವಾಗಿ ಕೆಂಪು ಕೋಟೆಯನ್ನು ತಲುಪಿದನೆಂದು ವರದಿಯಾಗಿದೆ.

