ಬೆಂಗಳೂರು: ಸಿದ್ದರಾಮಯ್ಯ (Siddaramaiah) ಡಿಕೆ ಶಿವಕುಮಾರ್‌ಗೆ (DK Shivakumar) ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಮಾಜಿ ಸಚಿವ, ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ (H Vishwanath) ಆಗ್ರಹ ಮಾಡಿದ್ದಾರೆ.
ಕಾಂಗ್ರೆಸ್‌ನ (Congress) ಕುರ್ಚಿ ಗಲಾಟೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ಗೆ ರಾಜ್ಯದ ಆಡಳಿತ ಹಸ್ತಾಂತರ ಮಾಡಬೇಕು. 136 ಸೀಟು ಬರಲು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆಶಿ ಅವರ ಶ್ರಮ ಎಲ್ಲಾ ರೀತಿಯಲ್ಲೂ ಇದೆ. ಒಕ್ಕಲಿಗ ಸಮುದಾಯದ ವೋಟ್ ಕೂಡ ಕಾಂಗ್ರೆಸ್‌ಗೆ ಬಂದಿದೆ. ಕೆ.ಆರ್ ನಗರ ತಾಲೂಕಿನಲ್ಲಿ ಕಾಂಗ್ರೆಸ್‌ಗೆ ಒಕ್ಕಲಿಗ ಸಮಾಜದಿಂದ 4-5 ವೋಟ್ ಬರುತ್ತಿತ್ತು. ಈ ಬಾರಿ 15 ಸಾವಿರ ವೋಟ್ ಬಂದಿದೆ ಇದಕ್ಕೆ ಕಾರಣ ನಮ್ಮ ಸಮಾಜದ ಡಿಕೆಶಿ. ಸಿಎಂ ಸ್ಥಾನ ಸಿಗಲಿ, ಸಿಗುತ್ತೆ ಅಂತ ಒಕ್ಕಲಿಗರು ವೋಟ್ ಹಾಕಿದ್ದಾರೆ. ಇವರೆಲ್ಲಾ ಸೇರಿಕೊಂಡಿದ್ದರಿಂದ 136 ಸ್ಥಾನ ಬರಲು ಕಾರಣವಾಯಿತು ಎಂದರು. ಇದನ್ನೂ ಓದಿ: ಶಾಸಕರು ದೆಹಲಿಗೆ ಹೋಗಿ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ: ಸಿಎಂ

ಡಿಕೆ ಶಿವಕುಮಾರ್ ಕೂಡ ನಾಡಿನ ಆಡಳಿತದಲ್ಲಿ ಭಾಗಿಯಾಗಬೇಕು. ಡಿಕೆ ಶಿವಕುಮಾರ್ ನಾನೊಬ್ಬನೇ ಕಾಂಗ್ರೆಸ್‌ಗೆ ಅಧಿಕಾರ ಬರಲು ಕಾರಣ ಅಂತ ಎಲ್ಲೂ ಹೇಳಿಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕಾದ್ರೆ ಎಲ್ಲಾ ಜಾತಿ, ಜನಾಂಗ, ಧರ್ಮ, ಭಾಷಿಕರು ವೋಟ್ ಕೊಡಬೇಕು. ಬರೀ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಲೀಡರ್‌ನಿಂದ ಮಾತ್ರ ಅಧಿಕಾರಕ್ಕೆ ಬರೋದಕ್ಕೆ ಆಗಲ್ಲ. ಕೆಲವರು ಯಾವ ಪಕ್ಷದಲ್ಲಿ ಇರಲ್ಲ. ವೋಟ್ ಮಾಡಲ್ವಾ? ನಾಡಿನ ವಿಜಯ, ರಾಜ್ಯದ ವಿಜಯ 136 ಸೀಟು ಬಂತು. ಸಿದ್ದರಾಮಯ್ಯ ಒಬ್ಬರಿಂದ 136 ಸೀಟು ಬಂತಾ ಹಾಗಾದ್ರೆ ಎಂದು ಸಿದ್ದು ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: 2047ರಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ರಾಮನ ಗುಣ ಮೈಗೂಡಿಸಿಕೊಳ್ಳಬೇಕು: ಮೋದಿ
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಎಂದು ಮಾಜಿ ಸಚಿವ ರಾಜಣ್ಣ ಸೇರಿ ಹಲವರು ಹೇಳುತ್ತಾರೆ. ಸಿದ್ದರಾಮಯ್ಯಗೆ ಕಾಂಗ್ರೆಸ್ ಅನಿವಾರ್ಯ, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಅಲ್ಲ. ಸಿದ್ದರಾಮಯ್ಯ ಬರೋ ಮುಂಚೆ ಕಾಂಗ್ರೆಸ್ ಸರ್ಕಾರಗಳು ಇರಲಿಲ್ಲವಾ? ಸಿದ್ದರಾಮಯ್ಯರನ್ನ ದೇವೇಗೌಡರು ಹೊರಗೆ ಹಾಕಿದಾಗ ನಾವೇ ಕಾಂಗ್ರೆಸ್ ಒಳಗೆ ಕರೆದುಕೊಂಡು ಬಂದಿದ್ದು. ಇವರ ಆಟ ನೋಡಿದ್ರೆ ಕಾಂಗ್ರೆಸ್ ಅನ್ನ ಬಾಗಿಲು ಹಾಕಿಸೋ ರೀತಿ ಇದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದತ್ತಪೀಠ ಹಿಂದೂಗಳದ್ದು, ಮೈಸೂರು ಅರಸರು ಸಾವಿರಾರು ಎಕರೆ ದಾನ ನೀಡಿದ ದಾಖಲೆಗಳಿವೆ: ವಿಹೆಚ್‌ಪಿ
ಕಾಂಗ್ರೆಸ್‌ನಲ್ಲೇ ಕುದುರೇ ವ್ಯಾಪಾರ ನಡೆಯುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವೆಲ್ಲವೂ ಸುಮ್ಮನೆ ಅಷ್ಟೆ. ನಾನು ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿ ಅವರು ಯಾವ ಯಾವ ತರಹ ಆಟ ಆಡಿಲ್ಲವಾ? ಜೆಡಿಎಸ್ ಅವರು ಯಾವ ಯಾವ ತರಹ ಆಟ ಆಡಿಲ್ಲವಾ? ಒಂದೇ ಪಾರ್ಟಿನಾ? ಅಧಿಕಾರಕ್ಕೆ ಬರಬೇಕಾದ್ರೆ ಅನೇಕ ದಾರಿಗಳನ್ನ ಹುಡುಕುತ್ತಾರೆ. ಅದರಲ್ಲಿ ವಿಶೇಷ ಏನು ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದಾವಣಗೆರೆ | ನಾಪತ್ತೆಯಾಗಿದ್ದ ಯುವಕರ ಶವ ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆ
ಡಿಕೆಶಿಗೆ ರಾಹುಲ್ ಗಾಂಧಿ ಸಮಯ ಕೊಡುತ್ತಿಲ್ಲ ಎಂಬ ವಿಚಾರಕ್ಕೆ, ಕಾಂಗ್ರೆಸ್ ಪಕ್ಷದ ವಿಚಾರಕ್ಕೆ ಯಾಕೆ ರಾಹುಲ್ ಗಾಂಧಿ ಸಮಯ ಕೊಡ್ತಿಲ್ಲ ಅಂತ ಅವರನ್ನು ಕೇಳಿ ಎಂದರು. ಇದನ್ನೂ ಓದಿ: ನೀವ್ ನೀವೆ ಅಗ್ರಿಮೆಂಟ್ ಮಾಡಿಕೊಂಡರೆ ಇದೇನು ಕಾಂಟ್ರಾಕ್ಟಾ?- ಕುರ್ಚಿ ಕದನದಲ್ಲಿ ಸಿಎಂ ಪರ ರಾಯರೆಡ್ಡಿ ಬ್ಯಾಟಿಂಗ್

