ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮತ್ತೆ ಪೊಲಿಟಿಕಲ್ ಗೂಗ್ಲಿ ಎಸೆದಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ ಮೇಲೆ ಮುಗಿತು ಅದೇ ವೇದವಾಕ್ಯ ಎಂದಿದ್ದಾರೆ.
ಮೈಸೂರಿನಲ್ಲಿ ಸಿದ್ದರಾಮಯ್ಯ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಕೇಳಿದ ಪ್ರಶ್ನೆಗೆ, ಸಿಎಂ ಹೇಳಿದ ಮೇಲೆ ಮುಗಿತು ಎಂದು ಉತ್ತರಿಸಿದರು. ಈ ವೇಳೆ ಯಾವಾಗ ಸಿಎಂ ಆಗುತ್ತೀರಿ ಎಂದು ಕೇಳಿದ್ದಕ್ಕೆ ಡಿಕೆಶಿ ಯಾವುದೇ ಉತ್ತರ ನೀಡದೇ ಮೌನಕ್ಕೆ ಜಾರಿದರು. ಇದನ್ನೂ ಓದಿ: 100 ವರ್ಷ ಇತಿಹಾಸ ಇರೋ ಕಾಂಗ್ರೆಸ್ ಪಕ್ಷದಲ್ಲಿ 100 ಕೋಟಿ ವರೆಗೆ ಕುದುರೆ ವ್ಯಾಪಾರ: ಆರ್. ಅಶೋಕ್ ವಾಗ್ದಾಳಿ
ಕಾಂಗ್ರೆಸ್‌ನವರೇ ಕಾಂಗ್ರೆಸ್ ಶಾಸಕರ ಖರೀದಿಗೆ ಮುಂದಾಗಿದ್ದಾರೆ ಎಂಬ ಅಶೋಕ್ (Ashok) ಹೇಳಿಕೆಗೆ, ಶಾಸಕರ ಖರೀದಿ ಸಂಸ್ಕೃತಿ ಬಿಜೆಪಿಯಲ್ಲಿ ಇರವುದು. ಮುಖ್ಯಮಂತ್ರಿ ಆಗಬೇಕಾದರೆ ಎಷ್ಟು ಸಾವಿರ ಕೋಟಿ ರೂ. ಕೊಡಬೇಕು ಅಂತ ಬಿಜೆಪಿಯವರೇ ಹಿಂದೆ ಹೇಳಿದ್ದಾರೆ. ವಿಧಾನಸಭೆಯಲ್ಲೂ ಸಹ ಎಷ್ಟೆಷ್ಟೋ ಕೋಟಿ ಕೊಟ್ಟು ಶಾಸಕರ ಖರೀದಿ ಬಗ್ಗೆ ದಾಖಲೆಗಳಲ್ಲೇ ಬಂದಿದೆ. ಅವರು ಮಾಡುತ್ತಿದ್ದ ಪ್ರವೃತ್ತಿಯನ್ನು ನೆನಪಿಸಿಕೊಂಡಿದ್ದಾರೆ ಅಷ್ಟೇ ಎಂದರು.
