– ಉದ್ದೇಶಪೂರ್ವಕ ಕೃತ್ಯ ಎಂಬ ಅನುಮಾನ
ರಾಮನಗರ: ಡೀಸೆಲ್ ಟ್ಯಾಂಕ್‌ಗೆ (Diesel Tank) ಕಬ್ಬಿಣದ ಸರಳು ಬಡಿದ ಪರಿಣಾಮ ಡೀಸೆಲ್ ಸೋರಿಕೆಯಾಗಿ ಮೈಸೂರಿನಿಂದ ಬೆಂಗಳೂರಿಗೆ (Mysuru To Bengaluru) ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು 2 ಗಂಟೆಗಳ ಕಾಲ ಕೆಟ್ಟು ನಿಂತ ಘಟನೆ ಚನ್ನಪಟ್ಟಣ ಸಮೀಪ ನಡೆದಿದೆ.

ಚನ್ನಪಟ್ಟಣ (Channapatna) ಸಮೀಪದ ವಂದಾರಗುಪ್ಪೆ ಬಳಿ ಘಟನೆ ನಡೆದಿದೆ. ರೈಲು ಕೆಟ್ಟು ನಿಂತಿದ್ದನ್ನು ಸಿಬ್ಬಂದಿ ಪರಿಶೀಲಿಸಿದಾಗ ಡೀಸೆಲ್ ಟ್ಯಾಂಕ್‌ಗೆ ಕಬ್ಬಿಣ ಸರಳು ಬಡಿದು ಸೋರಿಕೆಯಾಗುತ್ತಿದ್ದದ್ದು ಕಂಡುಬಂದಿದೆ. ಕೊನೆಗೆ ಸ್ಥಳದಲ್ಲಿದ್ದ ರೈಲ್ವೆ ಸಿಬ್ಬಂದಿ ಪರಿಶೀಲಿಸಿದ್ದಾರೆ. ಬಳಿಕ ಮತ್ತೊಂದು ಎಂಜಿನ್ ಸಹಾಯದಿಂದ ಬೆಂಗಳೂರು ಕಡೆಗೆ ರೈಲನ್ನು ಚಾಲನೆ ಮಾಡಲಾಯಿತು. ಇದನ್ನೂ ಓದಿ: ಸಿಎಂ-ಖರ್ಗೆ ಭೇಟಿ ಕುತೂಹಲ – ಹೈಕಮಾಂಡ್ ತೀರ್ಮಾನ ಏನಿದ್ದರೂ ಬದ್ಧ ಎಂದ ಸಿದ್ರಾಮಯ್ಯ

ಡೀಸೆಲ್ ಟ್ಯಾಂಕ್ ಸೋರಿಕೆಯಾದ ಪರಿಣಾಮ 2 ಗಂಟೆಗಳ ಕಾಲ ರೈಲು ನಿಂತಲ್ಲೇ ನಿಂತ್ತಿತ್ತು. ಘಟನೆ ಬಳಿಕ ಉದ್ದೇಶ ಪೂರ್ವಕವಾಗಿ ಟ್ರ್ಯಾಕ್‌ನಲ್ಲಿ ಕಬ್ಬಿಣದ ಸರಳು ಇಟ್ಟಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗಂಟೆಗೆ 4,500 ರೂ – ರೈತರಿಗೆ ಹೊರೆಯಾದ ಭತ್ತ ಕಟಾವು ಯಂತ್ರದ ಬಾಡಿಗೆ ಬೆಲೆ
