ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಫೋಟೋಗಳನ್ನ (Anupama Photos) ಯಾರೋ ಮುಖೇಡಿಗಳು ಮಾರ್ಫ್ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರು ನೀಡಿದ್ದರು. ಆ ಪ್ರಕರಣದಲ್ಲಿ ಆರೋಪಿ ಯಾರು ಅಂತಲೂ ಪತ್ತೆಯಾಗಿದೆ. ಇದನ್ನೂ ಓದಿ: ಕನ್ಫ್ಯೂಸ್ ಆಗ್ಬೇಡಿ… ಇದು ʻಕನಕವತಿʼ ಅಲ್ಲ ಸೋನು ಶ್ರೀನಿವಾಸ್ ಗೌಡ!

ಇದೀಗ ಅನುಪಮಾ ಸಹಜ, ಸರಳ ಸುಂದರ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅವರ ಅಭಿಮಾನಿಗಳು ಖುಷಿ ಪಡೋದರ ಜೊತೆಗೆ ಮೆಚ್ಚುಗೆಯ ಕಾಮೆಂಟ್ಸ್ ಹಾಕುತ್ತಿದ್ದಾರೆ. ಇದನ್ನೂ ಓದಿ: BBK 12 | ಮಾಳು ಕಿರುಚಾಟಕ್ಕೆ ಮನೆಮಂದಿ ಶಾಕ್

ಕನ್ನಡದಲ್ಲಿ ಅಪ್ಪು ಜೊತೆ ನಟಸೌರ್ವಭೌಮ ಸಿನಿಮಾದಲ್ಲಿ ಪಾತ್ರ ಮಾಡುವ ಮೂಲಕ ಕರ್ನಾಟಕದಲ್ಲೂ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ನಟಿ ಅನುಪಮಾ ಪರಮೇಶ್ವರ್. ಅವರ ಹೊಸ ಫೋಟೋಗಳು ಜಾಲತಣದಲ್ಲಿ ಸಖತ್ ವೈರಲ್ ಆಗಿವೆ.
