ಅಬುಧಾಬಿ: ದುಬೈನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ (Dubai Airshow) ವೇಳೆ ಆಗಸದಲ್ಲಿ ಹಾರುತ್ತಿದ್ದಾಗಲೇ ತೇಜಸ್ ಯುದ್ಧ ವಿಮಾನ (Tejas Fighter Jet) ಪತನಗೊಂಡಿರುವ ಘಟನೆ ನಡೆದಿದೆ.
Tejas crash at the Dubai Airshow are false. The Indian Ministry of Defence and PIB Fact Check confirm that videos circulating show normal condensation drainage, not an oil leak or a crash. #Tejas #DubaiAirshow #FactCheck #crash pic.twitter.com/ukcpjFfJMq
— Shivam Sharma (@imshivamsharmaa) November 21, 2025
ಬೆಂಗಳೂರಿನ ಹೆಚ್‌ಎಎಲ್ (HAL) ನಿರ್ಮಿತ ಲಘು ಯುದ್ಧ ವಿಮಾನವು ಸ್ಥಳೀಯ ಕಾಲಮಾನ ಇಂದು ಮಧ್ಯಾಹ್ನ 2:10ರ ಸುಮಾರಿಗೆ ವೈಮಾನಿಕ ಪ್ರದರ್ಶನ ನೀಡುವಾಗ ಪತನಗೊಂಡಿದೆ. ಸದ್ಯ ತೇಜಸ್ ಯುದ್ಧವಿಮಾನ ಪತನಗೊಂಡಿರುವ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ಭಾರತೀಯ ಅಂತರಿಕ್ಷ ನಿಲ್ದಾಣದ ಮೊದಲ ಮಾಡ್ಯೂಲ್ 2028ಕ್ಕೆ ಸ್ಥಾಪನೆ ನಿರೀಕ್ಷೆ – ವಿ.ನಾರಾಯಣನ್
Such a heartbreaking incident from #DubaiAirShow 💔
Indian Fighter Jet #Tejas crashed badly 🤯🙁
— Pratyaksha (@Pratya_ksha) November 21, 2025
ಸದ್ಯ ಘಟನೆಯಲ್ಲಿ ಪೈಲಟ್ ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಇದು ತಾಂತ್ರಿಕ ದೋಷದಿಂದ ಆಗಿದೆಯೇ? ಅಥವಾ ಪೈಲಟ್‌ನ ದೋಷದಿಂದ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ತಂತ್ರಜ್ಞರ ತಂಡ ಸ್ಥಳಕ್ಕೆ ಧಾವಿಸಿದ್ದು, ವಿಮಾನ ಪತನಕ್ಕೆ ಕಾರಣಗಳನ್ನ ಹುಡುಕಲಾಗುತ್ತಿದೆ. ಇದನ್ನೂ ಓದಿ: ಕಲ್ಲಿದ್ದಲು ಮಾಫಿಯಾ; ಬಂಗಾಳ, ಜಾರ್ಖಂಡ್‌ನ 42 ಸ್ಥಳಗಳಲ್ಲಿ ಇ.ಡಿ ದಾಳಿ – ಭಾರೀ ಪ್ರಮಾಣದ ನಗದು, ಚಿನ್ನ ಪತ್ತೆ
