ಶಿವಮೊಗ್ಗ: ದೇಶದ ಜನರು ಎನ್‍ಡಿಎ (NDA) ಪರ ಇದ್ದಾರೆ ಎನ್ನುವುದಕ್ಕೆ ಬಿಹಾರ ಚುನಾವಣೆಯ ಫಲಿತಾಂಶ (Bihar Election Results) ಸಾಕ್ಷಿ ಎಂದು ಬಿ.ವೈ ರಾಘವೇಂದ್ರ ಹೇಳಿದ್ದಾರೆ. ನಾವು ಯಾರು 190ಕ್ಕೂ ಹೆಚ್ಚು ಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇರಲಿಲ್ಲ. ಈಗ ನಿರೀಕ್ಷೆಯನ್ನು ಮೀರಿ ಗೆದ್ದಿದ್ದೇವೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮಹಾ ಘಟಬಂಧನ ಸಿಎಂ ಅಭ್ಯರ್ಥಿ ಗೆಲುವಿಗೆ ಪರದಾಡುತ್ತಿದ್ದಾರೆ. ಹಿಂದುಳಿದ ಎಸ್‍ಸಿ, ಎಸ್‍ಟಿ ಇರುವ ಕ್ಶೇತ್ರದಲ್ಲಿ ಎನ್‍ಡಿಎ ಅಭ್ಯರ್ಥಿಗಳಿಗೆ ಗೆಲುವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಅತಿ ದೊಡ್ಡ ಪಕ್ಷ ಯಾವುದು? – ಬಿಜೆಪಿ, ಜೆಡಿಯು ಮಧ್ಯೆ ನೆಕ್-ಟು-ನೆಕ್ ಸ್ಪರ್ಧೆ
ಮೋದಿಯವರ ಅಭಿವೃದ್ದಿ ಕಾರ್ಯ ಮೆಚ್ಚಿ ಜನ ಮತ ನೀಡಿದ್ದಾರೆ. ಇನ್ನೂ ದೇಶದಲ್ಲಿ ಇಲ್ಲಿಯವರೆಗೂ ಆಡಳಿತ ಮಾಡಿದ್ದು ಕಾಂಗ್ರೆಸ್ ಮತಗಳ್ಳತನದಿಂದ ಎನ್ನುವುದು ಸಾಭೀತಾಗಿದೆ. ಮತ ಪರಿಷ್ಕರಣೆ ಸಮಯದಲ್ಲಿ 43 ಲಕ್ಷ ಮತ ಡಿಲೀಟ್ ಆಯ್ತು. ಈ ಮೂಲಕ ಇಂತಹ ಮತಗಳ ಮೂಲಕ ಕಾಂಗ್ರೆಸ್ ಗೆದ್ದಿತ್ತು ಎಂದು ಆರೋಪಿಸಿದ್ದಾರೆ.
ಮೋದಿಯವರ ನೇತೃತ್ವದಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯದಲ್ಲಿ ಬಿಜೆಪಿ ದಾಪುಗಾಲು ಇಡಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಚುನಾವಣಾ ಚಾಣಕ್ಯ ಅಮಿತ್ ಶಾ ಭವಿಷ್ಯ ಮತ್ತೆ ನಿಜವಾಯ್ತು

