ಪಾಟ್ನಾ: ಜೈಲಿನಲ್ಲಿರುವ ಜೆಡಿಯು (JDU) ಅಭ್ಯರ್ಥಿ ಅನಂತ್ ಕುಮಾರ್ ಸಿಂಗ್ (Anant Singh) 28,206 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಮೊಕಾಮಾ ವಿಧಾನಸಭಾ (Mokama Assembly) ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 91,416 ಮತಗಳನ್ನು ಪಡೆದರೆ ಆರ್‌ಜೆಡಿಯ ವೀಣಾ ದೇವಿ ಅವರು 63,210 ಮತಗಳನ್ನು ಪಡೆದರು.
ಜನ್ ಸುರಾಜ್ ಪಾರ್ಟಿ (JSP) ಬೆಂಬಲಿಗನನ್ನು ಕೊಲೆಗೈದ ಪ್ರಕರಣದಲ್ಲಿ ಅನಂತ್ ಕುಮಾರ್ ಸಿಂಗ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. 2005 ರಲ್ಲಿ ಮೊದಲ ಚುನಾವಣೆ ಗೆದ್ದ ಬಳಿಕ ಇಲ್ಲಿಯವರೆಗೆ ಐದು ಬಾರಿ ಮೊಕಾಮಾದಿಂದ ಆಯ್ಕೆ ಆಗುತ್ತಲೇ ಬಂದಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಮೊದಲೇ ಮಹಿಳೆಯರಿಗೆ ಖಾತೆಗೆ ಬಿದ್ದಿತ್ತು 10 ಸಾವಿರ – 10ನೇ ಬಾರಿಗೆ ಸಿಎಂ ಪಟ್ಟದ ಮೇಲೆ ನಿತೀಶ್ ಕಣ್ಣು!
2010 ರಲ್ಲಿ ಅವರು ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ 2015 ರಲ್ಲಿ ಜೆಡಿಯು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದದ್ದರು. 2020 ರ ಚುನಾವಣೆಗೆ ಮೊದಲು ಅವರು ಆರ್‌ಜೆಡಿ ಸೇರಿದ್ದರು.
28 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರೂ, ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಸಿಂಗ್ 2022 ರಲ್ಲಿ ತಮ್ಮ ವಿಧಾನಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ನೀಲಂ ದೇವಿ ಸ್ಪರ್ಧಿಸಿ ಜಯಗಳಿಸಿದ್ದರು.
ನವೆಂಬರ್ 2 ರಂದು ಜನ ಸುರಾಜ್ ಅಭ್ಯರ್ಥಿ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ನಡೆಸುತ್ತಿದ್ದ ದರೋಡೆಕೋರ, ರಾಜಕಾರಣಿ ದುಲಾರ್ ಸಿಂಗ್ ಯಾದವ್ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಅನಂತ್ ಕುಮಾರ್ ಸಿಂಗ್ ಅವರನ್ನು ಬಂಧಿಸಿದ್ದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

