– ರಾಜ್ಯ ಸರ್ಕಾರ ಕೇಂದ್ರದ ರೀತಿ ಕಠಿಣ ಕ್ರಮ ತಗೋಬೇಕು
– ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಕೂಡಲೇ ತೆರೆಯಬೇಕೆಂದು ಒತ್ತಾಯ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಗ್ಗೆ ಮಾತಾಡುವಾಗ ಎಚ್ಚರಿಕೆಯಿಂದ ಮಾತಾಡಲಿ ಅಂತ ವಿಪಕ್ಷ ನಾಯಕ ಅಶೋಕ್ ಅವರು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿ ಸ್ಪೋಟ (Delhi Explosion) ಮತ್ತು ಅಮಿತ್ ಶಾ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಬಾಂಬ್ ಸ್ಪೋಟ ವಿಚಾರದಲ್ಲಿ ಮೋದಿ ಅವರು ಸಭೆ ಮಾಡಿದ್ದಾರೆ. ಯಾರೇ ಉಗ್ರರು ಇದ್ದರೂ ಹೆಡೆಮುರಿ ಕಟ್ಟೋಕೆ ಸೂಚನೆ ನೀಡಿದ್ದಾರೆ. ಈಗಾಗಲೇ ಯಾರು ಇದ್ದಾರೆ ಅವರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ತಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: Delhi Blast | 8 ಮೃತದೇಹಗಳ ಗುರುತು ಪತ್ತೆ – 2 ಶವಗಳು ಉಗ್ರರದ್ದು ಅನ್ನೋ ಶಂಕೆ; ಒಂದು ಶವದ ತಲೆ ಮಿಸ್ಸಿಂಗ್!
ಕೇಂದ್ರದ ರೀತಿ ಕ್ರಮ ಕೈಗೊಳ್ಳಿ
ರಾಜ್ಯದಲ್ಲಿ ಪರಪ್ಪನ ಅಗ್ರಹಾರದ (Parappana Agrahara) ಮೊಬೈಲ್, ಇಂಟರ್ ನೆಟ್ ಫೋನ್ ಎಲ್ಲವೂ ಸಿಕ್ಕಿದೆ. ಗೃಹ ಸಚಿವರು ಈ ವಿಡಿಯೋ ಲೀಕ್ ಮಾಡಿದವರು ಯಾರು ಅಂತ ಕಂಡು ಹಿಡಿಯೋಕೆ ಸ್ಪೆಷಲ್ ತನಿಖೆ (Speical Investigation) ಮಾಡಿದ್ತಾ ಇದ್ದಾರೆ. ಕೇಂದ್ರ ಸರ್ಕಾರ ದೇಶ ವಿರೋಧ ಪೋಸ್ಟರ್ ಅಂಟಿಸಿದ ಕಾರಣದಿಂದ ಸ್ಪೋಟದ ವಸ್ತು ಸೀಜ್ ಮಾಡಿದೆ. ರಾಜ್ಯ ಸರ್ಕಾರ ಕೇಂದ್ರದ ರೀತಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪಾಕಿಸ್ತಾನ ಜಿಂದಾಬಾದ್ ಕೂಗೋರು, ಕುಕ್ಕರ್ ಬ್ಲ್ಯಾಸ್ಟ್ ಮಾಡಿರೋರು ಬಗ್ಗೆ ಕ್ರಮವಹಿಸಬೇಕು. ಡಿಜೆ-ಕೆಜೆ ಹಳ್ಳಿ ಕೇಸ್ ವಾಸಪ್ ತೆಗೆದರು. ಇನ್ಮುಂದೆ ನೋಡಿಕೊಂಡು ಕೇಸ್ ತೆಗೆಯಲಿ. ಈ ಸರ್ಕಾರ ಎರಡು ವರ್ಷ ಇರುತ್ತದೆ. ಅಮೇಲೆ ಬೇರೆ ಸರ್ಕಾರ ಬರುತ್ತದೆ. ಇವೆಲ್ಲ ಶಾಶ್ವತ ಅಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ನಿಧಾನವಾಗಿ ಚಲಿಸಿದ್ದ ಐ20 ಕಾರು – ದೆಹಲಿ ಸ್ಫೋಟದ ದೃಶ್ಯ ಲಭ್ಯ
ಪ್ರಿಯಾಂಕ್ ಖರ್ಗೆಗೆ ವಾರ್ನಿಂಗ್
ಪ್ರಿಯಾಂಕ್ ಖರ್ಗೆ ಕೇಂದ್ರ ಹೋಂ ಮಿನಿಸ್ಟರ್ ಅವರನ್ನ ದುರ್ಬಲ ಅಂತಾರೆ. ಮರಿ ಖರ್ಗೆ ಅವರೇ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರು ಆಗಿದ್ದಾಗ ಕಂಬಾಲ ಪಲ್ಲಿಯಲ್ಲಿ ದಲಿತರನ್ನ ಸಜೀವ ದಹನ ಮಾಡಿದ್ರು. ಆ ಕೇಸ್ ಏನಾಯ್ತು? ಅಪರಾಧ ಮಾಡಿದ ಎಲ್ಲರೂ ನಿರಪರಾಧಿ ಅಂತ ಆಯ್ತು. ಅಂದು ಗೃಹ ಸಚಿವರಾಗಿದ್ದು ನಿಮ್ಮ ತಂದೆ. ಆವತ್ತು ಹೋಂ ಮಿನಿಸ್ಟರ್ ಆಗಿ ಫೇಲ್ ಆದ್ರು. ನೀವು ಅಮಿತ್ ಶಾ ಬಗ್ಗೆ ಮಾತಾಡೋದಾ? ಅಮಿತ್ ಶಾ ಉಗ್ರರಿಗೆ ಗುಂಡು ಹೊಡೆಯೋ ಕೆಲಸ ಮಾಡ್ತಿದ್ದಾರೆ. ನೀವು ಏನು ಮಾಡಿದ್ರಿ? ಅವರ ಪರ ಮಾತಾಡೋ ಕೆಲಸ ಮಾಡಿದ್ರಿ. ಅಮಿತ್ ಶಾ ಅವರ ಬಗ್ಗೆ ಮಾತಾಡೋ ಬಗ್ಗೆ ಎಚ್ಚರವಾಗಿ ಪ್ರಿಯಾಂಕ್ ಖರ್ಗೆ ಮಾತಾಡಲಿ ಅಂತ ಎಚ್ಚರಿಕೆ ಕೊಟ್ರು. ಇದನ್ನೂ ಓದಿ: ದೆಹಲಿಯಲ್ಲಿ ಹೈ ಅಲರ್ಟ್ – ಇಕೋಸ್ಪೋರ್ಟ್ ಕಾರನ್ನು ಪತ್ತೆಹಚ್ಚಲು ಮುಂದಾದ ಪೊಲೀಸರು
ಮೆಕ್ಕೆಜೋಳ ಖರೀದಿ ಕೇಂದ್ರ ಕೂಡಲೇ ತೆರೆಯಬೇಕು:
ಮುಂದುವರಿದು ಮಾತನಾಡಿ, ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿಗೆ ಸರ್ಕಾರ ವ್ಯವಸ್ಥೆ ಮಾಡ್ತಿಲ್ಲ. ರೈತರು ಬೆಳೆದ ಬೆಳೆ ರಸ್ತೆಗೆ ಚೆಲ್ಲುತ್ತಿದ್ದಾರೆ. ಈರುಳ್ಳಿ ಬೆಲೆ ಕಳೆದುಕೊಂಡಿದೆ. ಮೆಕ್ಕೆಜೋಳ ಕೂಡ ಇದೇ ಪರಿಸ್ಥಿತಿ ಆಗಿದೆ. ಈ ಸರ್ಕಾರದ ಖಜಾನೆ ಖಾಲಿ ಆಗಿದೆ. ಅದಕ್ಕೆ ಮೆಕ್ಕೆಜೋಳ ಖರೀದಿ ಮಾಡ್ತಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ಕೊಟ್ಟಿಲ್ಲ. ಅಡುಗೆ ಮಾಡಲು ಆಹಾರ ಪದಾರ್ಥ ಕೊಟ್ಟಿಲ್ಲ. ಕೂಡಲೇ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು ಅಂತ ಆಗ್ರಹ ಮಾಡಿದ್ರು.




