ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ನಿತ್ಯ ದೀಪಾವಳಿ ಪಟಾಕಿ ಸಿಡಿದಂತೆ ದೇಶದಲ್ಲಿ ಬಾಂಬ್ ಸ್ಫೋಟ ಆಗ್ತಿತ್ತು. ಅಂತಹ ಪಕ್ಷದವರು ಅಮಿತ್ ಶಾ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಅರಗ ಜ್ಞಾನೇಂದ್ರ (Araga Jnanendra) ಕಿಡಿಕಾರಿದ್ದಾರೆ.
ದೆಹಲಿ ಬಾಂಬ್ ಸ್ಫೋಟದ ಬಗ್ಗೆ ಪ್ರಿಯಾಂಕ್ ಖರ್ಗೆ (Priyank Kharge) ಕೇಂದ್ರದ ಮಂತ್ರಿಗಳ ವಿರುದ್ಧ ಕೀಳಾಗಿ ಮಾತಾಡ್ತಾರೆ. ಮುಂಬೈ ದಾಳಿ ಆದಾಗ ಇವರು ಒಂದು ರಿಯಾಕ್ಷನ್ ಕೊಟ್ಟಿರಲಿಲ್ಲ. ಯುಪಿಎ ಅವಧಿಯಲ್ಲಿ ಜನರು ಹೊರಗೆ ಹೋದರೆ ಮನೆಗೆ ವಾಪಸ್ ಬರೋ ವಿಶ್ವಾಸ ಇರಲಿಲ್ಲ. ದೀಪಾವಳಿ ಪಟಾಕಿ ರೀತಿ ಬಾಂಬ್ ಬೀಳ್ತಿತ್ತು. ಮೋದಿ ಆಡಳಿತ ಭದ್ರತೆ ಏಕತೆ ದೃಷ್ಟಿಯಲ್ಲಿ ಆಡಳಿತ ಕೊಟ್ಟಿದೆ ಎಂದು ಖರ್ಗೆಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಬಂಧಿತ ಉಗ್ರ, ವೈದ್ಯ ಆದಿಲ್‌ಗೆ ಸಿಗುತ್ತಿತ್ತು ತಿಂಗಳಿಗೆ 5 ಲಕ್ಷ ರೂ. ಸಂಬಳ!
ಪಾಕಿಸ್ತಾನದ ಪ್ರಚೋದನೆಯಿಂದ ಇದು ನಡೆಯುತ್ತಿದೆ. ಡಾಕ್ಟರ್, ಎಂಜಿನಿಯರ್‌ಗಳು ದೇಶದ್ರೋಹದ ಕೆಲಸ ಮಾಡ್ತಿದ್ದಾರೆ. ಟೆರೆರಿಸ್ಟ್‌ಗಳಿಗೆ ಧರ್ಮ ಇಲ್ಲ. ಆದರೆ, ಈ ಟೆರೆರಿಸ್ಟ್‌ಗಳು ಒಂದೇ ಧರ್ಮದವರು. ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಅಂದವರಿಗೆ ಇದೇ ಮಂತ್ರಿ ಸಮರ್ಥನೆ ಮಾಡ್ತಾರೆ. ಆಗ ಇವರು ರಾಜೀನಾಮೆ ಕೊಟ್ರಾ? ದೇಶದ್ರೋಹಿಗಳನ್ನ ಸಮರ್ಥನೆ ಮಾಡಿಕೊಂಡ ಮಂತ್ರಿ ಅವರು ರಾಜೀನಾಮೆ ಕೊಟ್ಟರ? ಇಂತಹ ವ್ಯಕ್ತಿಗಳನ್ನು ಜನರು ಗಮನಿಸುತ್ತಾರೆ ಅಂತ ಪ್ರಿಯಾಂಕ್ ಖರ್ಗೆ ವಿರುದ್ಧ ಅರಗ ಜ್ಞಾನೇಂದ್ರ ಕಿಡಿಕಾರಿದರು.
ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡ್ತೀವಿ ಎಂದರು. ಬಿಹಾರ ಚುನಾವಣೆಯಲ್ಲಿ ಜನರ ಅಭಿಪ್ರಾಯ ನೋಡ್ತಾ ಇದ್ದೇವೆ. ಇಂಡಿ ಕೂಟ ಚುನಾವಣೆಯಲ್ಲಿ ಗೆಲ್ಲೋಕೆ ಮಾಡಬಾರದ ಆರೋಪ ಮಾಡಿದ್ರು. ನ.14 ರಂದು ದೊಡ್ಡ ಮಟ್ಟದ ಗೆಲುವು NDAಗೆ ಸಿಗುತ್ತದೆ. ಕಾಂಗ್ರೆಸ್ ಅವರನ್ನು ಜನರು ಒಪ್ಪೋದಿಲ್ಲ ಅನ್ನೋ ಫಲಿತಾಂಶ ಬರಲಿದೆ ಅಂತ ಭವಿಷ್ಯ ನುಡಿದರು. ಇದನ್ನೂ ಓದಿ: ರೋಗಿಗಳಿಂದ ದೂರು, ಕೆಲಸಕ್ಕೆ ಚಕ್ಕರ್, ಕೊನೆಗೆ ವಜಾ – ಇದು ಕಾರ್ ಬಾಂಬರ್ ವೈದ್ಯನ ಅಸಲಿ ಮುಖ


