ಬೆಂಗಳೂರು/ಮೈಸೂರು: ದೆಹಲಿಯಲ್ಲಿ ಭೀಕರ ಕಾರು ಸ್ಫೋಟ (Delhi Explosion) ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸಿಎಂ ಅಲರ್ಟ್ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರಿನಲ್ಲಿ ತೀವ್ರ ನಿಗಾ ವಹಿಸಿರುವ ಪೊಲೀಸರು ಮಾಲ್, ಲಾಡ್ಜ್, ಹೋಟೆಲ್, ಏರ್‌ಪೋರ್ಟ್, ರೈಲ್ವೆ ನಿಲ್ದಾಣ ಸೇರಿ ಎಲ್ಲಾ ಕಡೆ ತೀವ್ರ ತಲಾಶ್ ನಡೆಸಿದ್ದಾರೆ. ಹಾಗೆಯೇ ಮೈಸೂರಿನ ಪ್ರಮುಖ ಸ್ಥಳಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ತೀವ್ರ ತಪಾಸಣೆ ನಡೆಸಿದ್ದಾರೆ.

