ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರ (Malur Assembly Constituency) ಮತದಾನದ ಮರು ಎಣಿಕೆ ಕಾರ್ಯ ನಾಳೆ ಕೋಲಾರದ (Kolar) ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಮರು ಮತ ಎಣಿಕೆ ಕಾರ್ಯ ಹಿನ್ನೆಲೆ ಇಂದು ಜಿಲ್ಲಾಡಳಿತದ ಅಭ್ಯರ್ಥಿಗಳ ಸಮ್ಮುಖದಲ್ಲಿ ಗೋದಾಮಿನಿಂದ ತೋಟಗಾರಿಕಾ ಮಹಾವಿದ್ಯಾಲಯಕ್ಕೆ ಇವಿಎಂ ಮಿಷನ್‌ಗಳನ್ನ ತಲುಪಿಸಲಾಯಿತು. ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಬಾಗದ ಭದ್ರತಾ ಕೊಠಡಿಯಲ್ಲಿದ್ದ ಇವಿಎಂಗಳನ್ನ ಭದ್ರತಾ ಸಿಬ್ಬಂದಿಯೊಂದಿಗೆ ಇವಿಎಂ ಹೊತ್ತ ಕಂಟೈನರ್‌ಗಳು ಮತ ಎಣಿಕೆ ಕೇಂದ್ರ ತಲುಪಿಸಿದೆ. ಇದನ್ನೂ ಓದಿ: ತಿರುಪತಿಗೆ ಐದು ವರ್ಷ ಕಲಬೆರಕೆ ತುಪ್ಪ ಪೂರೈಕೆ – SIT ತನಿಖೆಯಲ್ಲಿ ರಾಸಾಯನಿಕ ಬಳಕೆಯಾಗಿರೋದು ಪತ್ತೆ
ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದಲ್ಲಿ ಇವಿಎಂ ವಾಹನಗಳು ಆಗಮಿಸಿವೆ. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ನಾಳೆ ಬೆಳಗ್ಗೆ 8 ಗಂಟೆಯಿಂದ ಮರು ಮತ ಎಣಿಕೆ ಕಾರ್ಯ ನಡೆಯಲಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ನ್ಯಾಯಾಲಯದ ನಿರ್ದೇಶನದಂತೆ ಮರು ಮತ ಎಣಿಕೆ ಕಾರ್ಯ ನಡೆಯಲಿದೆ. ಇದನ್ನೂ ಓದಿ: ಮತಗಳ್ಳತನದ ಬಗ್ಗೆ ಮೊದಲು ಪತ್ತೆ ಹಚ್ಚಿದ್ದೇ ಕರ್ನಾಟಕದಲ್ಲಿ: ಡಿಕೆಶಿ
ಇನ್ನು ನಾಳಿನ ಮತ ಎಣಿಕೆ ಕಾರ್ಯಕ್ಕೆ ಕೋಲಾರ ಜಿಲ್ಲಾ ಚುನಾವಣಾಧಿಕಾರಿ/ ಜಿಲ್ಲಾಧಿಕಾರಿ ಆಗಿರುವ ಎಂ.ಆರ್.ರವಿ ಅವರು ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಕೋಲಾರ ಹೊರವಲಯದಲ್ಲಿರುವ ಟಮಕದ ತೋಟಗಾರಿಕಾ ಮಹಾವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಮರು ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಹಾಕಿದ್ದು, ಎಲ್ಲಾ ಟೇಬಲ್ ಗಳಿಗೆ ಸಿಸಿಟಿವಿ ಕ್ಯಾಮರಾ ಗಳನ್ನು ಅಳವಡಿಸಲಾಗಿದೆ.
ಅಲ್ಲದೆ ಇಡೀ ಕೊಠಡಿಗೆ 360 ಡಿಗ್ರಿ ಕ್ಯಾಮೆರಾ ಅಳವಡಿಸಲಾಗಿದೆ ಇದರ ಜೊತೆಗೆ ಮ್ಯಾನುಯಲ್ ಕ್ಯಾಮೆರಾ ಮೂಲಕವೂ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಇನ್ನು ಮತ ಎಣಿಕೆ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿದ್ದು ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತಕೇಂದ್ರದ ಒಳಗೆ ಅಭ್ಯರ್ಥಿ ಹಾಗೂ ಅವರ ಏಜೆಂಟ್? ಗಳನ್ನು ಹೊರತು ಪಡಿಸಿ ಮತ್ಯಾರಿಗೂ ಪ್ರವೇಶವಿಲ್ಲ. ಇಡೀ ಕ್ಯಾಂಪಸ್‌ನ್ನು ಸಿಸಿಟಿವಿ ಹಾಗೂ ಪೊಲೀಸ್ ಕಣ್ಗಾವಲಿನಲ್ಲಿ ಇರಿಸಲಾಗಿದೆ.
ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಮರು ಮತ ಎಣಿಕೆಗೆ ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ನಾಳೆ ಮತದಾನ ಎಣಿಕೆ ಕಾರ್ಯ ನಡೆಸುವಂತೆ ಜಿಲ್ಲಾಡಳಿತಕ್ಕೆ ಕೋರ್ಟ್ ಸೂಚನೆ ನೀಡಿದೆ. ಕಾಂಗ್ರೆಸ್‌ನ ಕೆವೈ ನಂಜೇಗೌಡ ಹಾಗೂ ಬಿಜೆಪಿಯ ಕೆಎಸ್ ಮಂಜುನಾಥ್ ಗೌಡ ನಡುವೆ ಮತ್ತೊಮ್ಮೆ ಹಣಾಹಣೆ ನಡೆಯಲಿದೆ. ಇದನ್ನೂ ಓದಿ: ಜಮೀನಿನ ಪೋಡಿ ದುರಸ್ತಿಗೆ ಆಗ್ರಹ – ವಿಷದ ಬಾಟಲಿ ಹಿಡಿದು ರೈತರ ಪ್ರತಿಭಟನೆ

