ಶಿವಮೊಗ್ಗ: ನಗರದ (Shivamogga) ಬ್ಯಾಂಕ್‌ವೊಂದರ (Bank) ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಮೇಲೆ ಅದೇ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಚೇರಿ ಕೆಲಸಕ್ಕೆ ಒಬ್ಬರನ್ನೇ ಕರೆಯುವುದು, ಮೈ ಸವರುವುದನ್ನು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಬ್ಯಾಂಕಿನ ವ್ಯವಹಾರ ಸಂಬಂಧ ಮೀಟಿಂಗ್ ಎಂದು ಶಿವಮೊಗ್ಗದ ಹೋಟೆಲ್ ಒಂದಕ್ಕೆ ಕರೆಯಿಸಿಕೊಂಡು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದೇ ರೀತಿ ಮೂರು ಬಾರಿ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಫ್ಯಾನ್‌ಗೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ
ಮತ್ತೊಬ್ಬ ಸಿಬ್ಬಂದಿ ಜೊತೆಗೆ ಸಂಬಂಧ ಕಟ್ಟಿ ಬ್ಯಾಂಕಿನ ಉಳಿದ ಕೆಲವು ಸಿಬ್ಬಂದಿ ತನ್ನ ಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ದಾಖಲಾದ ಈ ಪ್ರಕರಣ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವರ್ಗಾಯಿಸಲಾಗಿದೆ. ದೊಡ್ಡಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಐಸಿಸ್ ಉಗ್ರ & ರೇಪಿಸ್ಟ್ ಉಮೇಶ್ ರೆಡ್ಡಿಗೆ ಜೈಲಲ್ಲಿ ರಾಜಾತಿಥ್ಯ ಕೇಸ್ – ಎನ್‌ಸಿಆರ್ ದಾಖಲು

